ಜಲಜೀವನ್ ಮಿಷನ್ ಯೋಜನೆಯಿಂದ ರಸ್ತೆಗಳು ಹಾಳು
1 min readಜಲಜೀವನ್ ಮಿಷನ್ ಯೋಜನೆಯಿಂದ ರಸ್ತೆಗಳು ಹಾಳು
ಗ್ರಾಮೀಣ ರಸ್ತೆಗಳನ್ನು ಹಾಳು ಮಾಡುತ್ತಿರುವ ಜೆಜೆಎಂ ಯೋಜನೆ
ಸರ್ಕಾರದ ಒಂದು ಯೋಜನೆ ಅನುಷ್ಠಾನ ಮಾಡಬೇಕಾದರೆ ಜನರಿಗೆ ಸಂಕಷ್ಟ ನೀಡಲೇಬೇಕಾದ ಸ್ಥಿತಿ ಎದುರಾಗಿದೆ. ಮನೆ ಮನೆ ನೀರು ನೀಡುವ ಯೋಜನೆಯೊಂದರ ಅನುಷ್ಠಾನಕ್ಕೆ ರಸ್ತೆಗಳನ್ನು ಹಾಳುಗೆಡುವುತ್ತಿದ್ದು, ಅವುಗಳ ದುರಸ್ತಿಯಾಗದೆ ಗ್ರಾಮೀಣ ಜನರು ಸಂಕಷ್ಟ ಎದುರಿಸುವಂತಾಗಿದೆ.
ಅದೊಂದು ಸುಂದರ ಗ್ರಾಮ ಆ ಗ್ರಾಮದಲ್ಲಿ ನೂತನವಾಗಿ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಮನೆ ಮನೆಗೆ ಕುಡಿಯುವ ನಲ್ಲಿ ನೀರು ನೀಡುವ ಜಲ ಜೀವನ್ ಮಿಷನ್ ಕಾಮಗಾರಿಯಿಂದ ಗ್ರಾಮಗಳಲ್ಲಿ ಎಲ್ಲಾ ರಸ್ತೆಗಳು ಹಾಳು ಮಾಡಲಾಗಿದೆ. ಇದರಿಂದ ಗ್ರಾಮೀಣ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಧಿಕಾರಿಗಳನ್ನು ಕೇಳಿದರೆ ಉಡಾೆಫೆ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಿದ್ದಾರೆ.
ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿಯಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಜಲ ಜೀವನ ಮಿಷನ್ ಕಾಮಗಾರಿಯಿಂದ ರಸ್ತೆಗಳೆಲ್ಲ ಹಾಳು ಮಾಡಿದ್ದಾರೆ. ಇದರಿಂದ ಮಳೆ ಬಂದರೆ ಪೈಪ್ ಲೈನ್ ಹಾಕಲು ಅಗೆದಿರುವ ರಸ್ತೆಯಲ್ಲಿ ಮನೆ ಮುಂದೆ ನೀರು ಹರುಯುತ್ತಿದೆ..ಕಾಲುವೆ ಹರಿಯುತ್ತಿರುವ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಅದು ಏನೇ ಆಗಲಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ ರಸ್ತೆ ದುರಸ್ತಿಯತ್ತ ಗಮನ ಹರಿಸದಿರುವುದು ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಸಾರ್ವಜನಿಕರ ಸಮಸ್ಯೆ ಏನೇ ಆಗಲಿ ಗುತ್ತಿಗೆದಾರರಿಗೆ ಅಗತ್ಯವಿಲ್ಲ, ತಮ್ಮ ಕಾಮಗಾರಿ ಮುಗಿಸಿ, ಹಣ ಪಡೆಯುವುದು ಮಾತ್ರ ಮುಖ್ಯವಾಗಿದೆ. ಹಾಗಾಗಿಯೇ ಗ್ರಾಮೀಣ ಪ್ರದೇಶದ ಜನ ತೀವ್ರ ಸಮಸ್ಯೆಗೆ ಗುರಿಯಾಗಿದ್ದಾರೆ. ಈಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರಗಳು ನೀಡುತ್ತಾರೆ, ಹಾಗಾಗಿ ಸಾರ್ವಜನಿಕರು ಯಾರನ್ನ ಕೇಳ್ಬೇಕು ಏನು ಮಾಡಬೇಕು ಎಂಬುದು ಅರ್ಥವಾಗದೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಶಾಪ ಹಾಕುತ್ತಿದ್ದಾರೆ.