ಕಬ್ಬು ಬೆಳೆಗಾರರ ಸಂಘದಿoದ ನಂಜನಗೂಡಿನಲ್ಲಿ ರಸ್ತೆ ತಡೆ
1 min readಕಬ್ಬು ಬೆಳೆಗಾರರ ಸಂಘದಿ0ದ ನಂಜನಗೂಡಿನಲ್ಲಿ ರಸ್ತೆ ತಡೆ
ರೈತರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಂಜನಗೂಡಿನ ಹುಲ್ಲಹಳ್ಳಿ ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನಂಜನಗೂಡಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಚಾಮರಾಜನಗರ ಮತ್ತು ಮೈಸೂರಿನ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರಸ್ತೆ ತಡೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಸರ್ಕಾರದ ಗಮನಕ್ಕೆ ತಂದು ರೈತರ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರು.
ಆದರೆ ರೈತರ ಕಬ್ಬಿನ ಬಾಕಿ ಪ್ರತಿ ಟನ್‌ಗೆ ಹೆಚ್ಚುವರಿ 150 ರೂಪಾಯಿ ಸೇರಿದಂತೆ 950 ಕೋಟಿ ರೂಪಾಯಿ ಕಾರ್ಖಾನೆಗಳಿಂದ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರತಿ ಟನ್ ಕಬ್ಬಿಗೆ 4 ಸಾವಿರ ನಿಗದಿ ಮಾಡಬೇಕು. ಎಪಿಎಂಸಿ ಮುಖಾಂತರ ತೂಕದ ಯಂತ್ರ ಅಳವಡಿಕೆ ಮಾಡಿಕೊಡಬೇಕು. ಕೃಷಿ ಪಂಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ಪಂಪ್‌ಸೆಟ್ಟುಗಳ ಆರ್‌ಆರ್ ನಂಬರ್ ಗೆ ಆಧಾರ್ ಲಿಂಕ್ ಕೈಬಿಡಬೇಕು. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಕೊಡುತ್ತಿದ್ದ ಪ್ರೋತ್ಸಾಧನ 700 ಕೋಟಿ ಬಾಕಿಯನ್ನು ತಕ್ಷಣ ರೈತರಿಗೆ ನೀಡಬೇಕು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಮತ್ತೆ ಜಾರಿಗೆ ತರಬೇಕು. ಕಾಡು ಪ್ರಾಣಿಗಳ ಹಾ ವಳಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ಆನೆ ಹುಲಿ ಚಿರತೆ ಕಾಡುವಂದಿ ಮತ್ತು ನವಿಲುಗಳು ಜಿಂಕೆಗಳಿ0ದ ಬೆಲೆ ನಷ್ಟಕ್ಕೆ ವೈಜ್ಞಾನಿಕ ಬೆಳೆ ನಷ್ಟ ಪರಿಹಾರ ನೀಡಬೇಕು. ಬಾಳೆ ಬೆಳೆಗಾರರಿಗೆ ಕಳೆದ ಮೂರು ತಿಂಗಳ ಹಿಂದೆ ಬಿರುಗಾಳಿಯಿಂದ ನಷ್ಟ ಉಂಟಾಗಿದ್ದು ವಿಶೇಷ ಪ್ಯಾಕೇಜ್ ಗಳ ಮೂಲಕ ಬೆಲೆ ನಷ್ಟ ನೀಡಬೇಕು.
ಹುರ ಏತ ನೀರಾವರಿ ಯೋಜನೆಯಲ್ಲಿ ಬರುವ ಅಂಬಳೆ ಹಗಿನವಾಳುಹುಸ್ಕೂರು ವಳಗೆರೆ ಸಿರಮಳ್ಳಿ ಮಸಗೆ ಎಚಗುಂಡ್ಲಾ ಕೆರೆಹುಂಡಿ ಸಿಂಧುವಳ್ಳಿ ಮುದ್ದಹಳ್ಳಿ ನವಿಲೂರು ಹೊಸಪುರ ಲಕ್ಷ್ಮಣಪುರ ಯಲಚಗೆರೆ ಕೃಷ್ಣಾಪುರ ಸಿದ್ದಯ್ಯನ ಹುಂಡಿ ಕಸುವಿನಹಳ್ಳಿ ಸೇರಿದಂತೆ 26 ಗ್ರಾಮಗಳ ಕೆರೆಗಳಿಗೆ ಕಳೆದ ಎಂಟು ವರ್ಷದಿಂದ ನೀರು ತುಂಬಿಸುವ ಯೋಜನೆ ವಿಳಂಬವಾಗಿದ್ದು, ತಕ್ಷಣ ಕಾಮಗಾರಿ ವೇಗಪಡಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ತಕ್ಶಣ ಪರಿಹಾರ ಮಾಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ನಿವಾಸದ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ, ತಾಲೂಕು ಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಕೆರೆ ಹುಂಡಿ ರಾಜಣ್ಣ, ಮಹೇಶ್, ಚಿಕ್ಕ ಸ್ವಾಮಿ, ಮಂಜೇಶ್ ಕುಮಾರ್, ಮಹೇಶ್, ಗಣೇಶ್ ಮಾದಪ್ಪ, ಮಣಿಕಂಠ, ಶ್ರೀನಿವಾಸ್,ಮಲೆಯೂರು ಪ್ರದೀಪ್, ಅರಳಿಕಟ್ಟೆ ಕುಮಾರ್ ಇದ್ದರು.