ಖಾಲಿ ಕಟ್ಟಡಕ್ಕೆ ರಿಬ್ಬನ್ ಕಟ್ಟಿಂಗ್, ಟೆಂಡರ್ ಇನ್ನೂ ಕರೀಬೇಕಂತೆ!
1 min read24 ಗಂಟೆಯಲ್ಲೆ ಬೇಡಿಕೆ ಈಡೇರಿಸಿದ ಶಾಸಕ
ಪದವಿ ಕಾಲೇಜಿನಲ್ಲಿ ಕ್ಯಾಂಟಿನ್ ಆರಂಭಿಸಿದ ದರ್ಶನ್
ಖಾಲಿ ಕಟ್ಟಡಕ್ಕೆ ರಿಬ್ಬನ್ ಕಟ್ಟಿಂಗ್, ಟೆಂಡರ್ ಇನ್ನೂ ಕರೀಬೇಕಂತೆ!
ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
ಅಲ್ಲಿ ಕಾಲೇಜು ವಿದ್ಯಾರ್ಥಿಗಳ ಬೇಡಿಕೆ ಈಡೇರಿತು ಎಂದು ಸಂ ಭ್ರಮಿಸಬೇಕೋ ಇಲ್ಲವೆ ಟೆಂಡರ್ ಕರೆಯದೆ, ಯಾವುದೇ ಸೌಲಭ್ಯ ಒದಗಿಸದೆ ತರಾತುರಿಯಲ್ಲಿ ಉದ್ಘಾಟಿಸಿದ ಕ್ಯಾಂಟಿನ್‌ನಿAದ ವಿದ್ಯಾರ್ಥಿಗಳಿಗೆ ಯಾವುದೇ ಉಪಯೋಗವಿಲ್ಲ ಎಂದು ಬೇಸರ ಪಡಬೇಕೋ ಅರ್ಥವಾಗದ ಸ್ಥಿತಿ. ಇನ್ನು ರಿಬ್ಬನ್ ಕಟ್ ಆಗಿರೋದ್ರಿಂದ ಮಾತ್ರ ಸಮಸ್ಯೆ ಬಗೆಹರಿಯಲಿದೆಯೇ ಎಂಬ ವಿದ್ಯಾರ್ಥಿಗಳ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇಷ್ಟಕ್ಕೂ ಏನದು ಅಂತೀರಾ, ಈ ಸ್ಟೋರಿ ನೋಡಿ.
ನಿಮಗಿನ್ನೂ ನೆನಪಿರಬಹುದು, ನೆನ್ನೆ ಇದೇ ಸಮಯದಲ್ಲಿ ನಿಮ್ಮ ಸಿಟಿವಿ ನ್ಯೂಸ್‌ನಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ನಂಜನಗೂಡು ತಾಲೂಕಿನ ಪದವಿ ಕಾಲೇಜಿನಲ್ಲಿ ಕ್ಯಾಂಟಿನ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ ಎಂಬ ಶೀರ್ಷಿಕೆಯಡಿ ವರದಿ ಪ್ರಸಾರವಾಗಿತ್ತು. ಈ ಸುದ್ದಿ ಪ್ರಸಾರವಾಗಿ ೨೪ ಗಂಟೆ ಕಳೆಯುವ ಮುನ್ನವೇ ವಿದ್ಯಾರ್ಥಿಗಳ ಬಹು ಕಾಲದ ಬೇಡಿಕೆ ಈಡೇರಿದೆ. ಆದರೆ ಅಲ್ಲಿ ಯಾವುದೇ ಸೌಲಭ್ಯ ಇಲ್ಲವಾಗಿದ್ದು, ಇನ್ನೂ ಟೆಂಡರ್ ಕರೆಯಬೇಕಿದೆಯಂತೆ. ಆದರೂ ತರಾತುರಿಯಲ್ಲಿ ಕ್ಯಾಂಟಿನ್ ಚಾಲನೆ ಮಾಡಲಾಗಿದೆ.
ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಸೌಲಭ್ಯ ಕಲ್ಪಿಸುವಂತೆ ಮಾಡಿದ ಮನವಿಗೆ ಶಾಸಕ ದರ್ಶನ್ ಧೃವನಾರಾಯಣ್ ಸ್ಪಂದಿಸಿದ್ದಾರೆ. ಕಾಲೇಜು ಆವರಣದಲ್ಲಿ ಕ್ಯಾಂಟಿನ್‌ಗಾಗಿ ಮೀಸಲಿಟ್ಟ ಕಟ್ಟಡಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಇಂದು ಜೀವ ನೀಡಿದ್ದಾರೆ. ಕಟ್ಟಡ ಕ್ಯಾಂಟಿನ್‌ಗೆ ಮೀಸಲಿದ್ದರೂ ಕಾರ್ಯಾರಂಭವಾಗದೆ ನಿರುಪಯುಕ್ತವಾಗಿತ್ತು. ಇದರಿಂದ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ವಿದ್ಯಾರ್ಥಿಗಳು ಕ್ಯಾಂಟೀನ್ ಸೌಲಭ್ಯದಿಂದ ವಂಚಿತರಾಗಿದ್ದರು.
ಕ್ಯಾ0ಟಿನ್ ಆರಂಭಿಸುವ0ತೆ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸ್ಪಂದಿಸಿರಲಿಲ್ಲ. ನಿನ್ನೆ ಈ ಬಗ್ಗೆ ಸಿಟಿ ನ್ಯೂಸ್‌ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಶಾಸಕ ದರ್ಶನ್ ಧೃವನಾರಾಯಣ್ ಶೀಘ್ರದಲ್ಲೆ ಕ್ಯಾಂಟಿನ್ ಆರಂಭಿಸುವುದಾಗಿ ನಿನ್ನೆ ಭರವಸೆ ನೀಡಿದ್ದರು. ಕೇವಲ 24 ಗಂಟೆ ಕಳೆಯುವಷ್ಟರಲ್ಲೆ ನಿರುಪಯುಕ್ತವಾಗಿದ್ದ ಕ್ಯಾಂಟಿನ್ ಕಟ್ಟಡಕ್ಕೆ ಜೀವ ನೀಡಿ ಇಂದು ಟೇಪ್ ಕತ್ತರಿಸುವ ಮೂಲಕ ಚಾಲನೆ ಕೊಟ್ಟಿದ್ದಾರೆ.
ದೀಪಾವಳಿ ಹಬ್ಬದ ರಜೆ ಮುಗಿಸಿ ಬರುವ ವಿದ್ಯಾರ್ಥಿಗಳಿಗೆ ಕ್ಯಾಂಟಿನ್ ವರದಾನವಾಗಲಿದೆಯೇ ಇಲ್ಲವೇ ಕಟ್ಟಡ ಮತ್ತೆ ನಿರುಪಯುಕ್ತವಾಗಿಯೇ ಉಳಿಯಲಿದೆಯೇ ಎಂಬ ಪ್ರಶ್ನೆ ಪ್ರಸ್ತುತ ಎದುರಾಗಿದ್ದು, ಯಾವುದಕ್ಕೂ ಕಾದು ನೋಡಬೇಕಿದೆ.