ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 27, 2024

Ctv News Kannada

Chikkaballapura

ವಿಶಾಖಪಟ್ಟಣದ ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ

1 min read

ವಿಶಾಖಪಟ್ಟಣದ ವೈಜಾಗ್ ಸ್ಟೀಲ್ ಕಾರ್ಖಾನೆ ಪುನಶ್ಚೇತನ
ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಖುದ್ದು ಭೇಟಿ
ಕಾರ್ಖಾನೆ ಪುನಶ್ಚೇತನಕ್ಕೆ ಸರಣಿ ಸಭೆ ನಡೆಸಿರುವ ಸಚಿವರು

ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿದ್ದಾರೆ. ಬುಧವಾರ ಸಂಜೆಯೇ ವಿಶಾಖಪಟ್ಟಣಕ್ಕೆ ಆಗಮಿಸಿದ ಸಚಿವರು, ಗುರುವಾರ ಬೆಳಗ್ಗೆ ತಮ್ಮ ಖಾತೆಯ ಸಹಾಯಕ ಸಚಿವರು, ಆಂಧ್ರ ಪ್ರದೇಶದವರೇ ಆದ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಉನ್ನತ ಅಧಿಕಾರಿಗಳ ಜತೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಗಾಗಲೇ ಕಂಪನಿ ಪುನಶ್ಚೇತನಗೊಳಿಸಲು ನವದೆಹಲಿಯ ತಮ್ಮ ಸಚಿವಾಲಯದಲ್ಲಿ ಹಲವಾರು ಸಭೆ ನಡೆಸಿರುವ ಸಚಿವರು, ತಾವೇ ಖುದ್ದು ವಿಶಾಖಪಟ್ಟಣಕ್ಕೆ ಬಂದು ಉಕ್ಕು ಕಾರ್ಖಾನೆ ವೀಕ್ಷಿಸ್ತಿದ್ದಾರೆ. ಆರ್ಥಿಕ ಹಾಗೂ ಇನ್ನಿತರೆ ಕಾರಣಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಕಂಪನಿಯನ್ನು ಮೇಲೆತ್ತುವ ಬಗ್ಗೆ ಪ್ರಯತ್ನ ನಡೆಸಿರುವ ಸಚಿವರು, ಭೂಪತಿರಾಜು ಅವರ ಜತೆಯೂ ಹಲವು ಬಾರಿ ಚರ್ಚೆ ನಡೆಸಿದ್ದಾರೆ.

ಕುಮಾರಸ್ವಾಮಿ ಅವರು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಸಚಿವಾಲಯದಲ್ಲಿ ಭೇಟಿಯಾಗಿದ್ದ ಆಂಧ್ರ ಪ್ರದೇಶದ ಸಂಸದರು, ಬಿಜೆಪಿ ಹಿರಿಯ ನಾಯಕಿ ಪುರಂದೇಶ್ವರಿ ಅವರು, ಹೇಗಾದರೂ ಮಾಡಿ ವೈಜಾಗ ಸ್ಟೀಲ್ ಕಂಪನಿಯನ್ನು ಪುನಶ್ಚೇತನಗೊಳಿಸಬೇಕು ಎಂದು ಮನವಿ ಮಾಡಿದ್ದರು. ಬಳಿಕ ಉಕ್ಕು ಸಚಿವಾಲಯದಲ್ಲಿ ಕಾರ್ಯದರ್ಶಿ ನಾಗೇಂದ್ರ ನಾಥ ಸಿನ್ಹಾ, ವೈಜಾಗ್ ಸ್ಟೀಲ್ ಚೇರಮನ್ ಅತುಲ್ ಭಟ್ ಸೇರಿ ಹಿರಿಯ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ್ದರು. ಅಲ್ಲದೆ ಮಂಗಳವಾರ ಸಚಿವಾಲಯದಲ್ಲಿ ಕಂಪನಿಗೆ ಸಾಲ ನೀಡಿರುವ ಬ್ಯಾಂಕುಗಳ ಜತೆಯೂ ಮಹತ್ವದ ಸಮಾಲೋಚನೆ ನಡೆಸಿದ್ದರು.

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಬರ್ ಭಾರತ ಪರಿಕಲ್ಪನೆ ಸಂಕಷ್ಟದಲ್ಲಿರುವ ಕೈಗಾರಿಗಳ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಹಾಗೂ ಕಾರ್ಖಾನೆಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕಾರ್ಖಾನೆಗೆ ಇಂದು ಬೆಳಗ್ಗೆ ಭೇಟಿ ನೀಡಿದ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಇಡೀ ಕಾರ್ಖಾನೆಯನ್ನು ಖುದ್ದು ವೀಕ್ಷಣೆ ಮಾಡಿದರು. ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ವರ್ಮ, ಕಂಪನಿಯ ಸಿಎಂಡಿ ಅತುಲ್ ಭಟ್, ವಿಶಾಖಪಟ್ಟಣ ಸಂಸದ ಭರತ್, ಸ್ಥಳೀಯ ಶಾಸಕ ಪಲ್ಲಾ ಶ್ರೀನಿವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *