ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚಾರ್ ಪುತ್ರಿ ಚೀಸ್ತಾ ಕೊಚ್ಚರ್ ಲಂಡನ್‌ನಲ್ಲಿ ನಿಧನ!
1 min readನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚಾರ್ ಅವರ ಪುತ್ರಿ 34 ವರ್ಷದ ಚೀಸ್ತಾ ಕೊಚ್ಚರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್‌ಡಿ ವ್ಯಾಸಂಗ ಕೈಗೊಂಡಿದ್ದರು. ಎಂದಿನಂತೆ ಮನೆಗೆ ಸೈಕಲ್‌ನಲ್ಲಿ ವಾಪಾಸ್ ಆಗುವಾಗ ವಾಹನವೊಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಚೀಸ್ತಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತಮ್ಮ ನಿವಾಸಕ್ಕೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಮಗಳ ಅಗಲಿಕೆಯಿಂದ ಪೋಷಕರು ಹಾಗೂ ಕುಟುಂಬಸ್ಥರು ಭಾರೀ ಆಘಾತಕ್ಕೊಳಗಾಗಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ತಂದೆ ಕೊಚಾರ್, ‘ನಾನು ಇನ್ನೂ ಲಂಡನ್‌ನಲ್ಲಿ ನನ್ನ ಮಗಳು ಚೀಸ್ತಾ ಕೊಚ್ಚರ್‌ನ ಮೃತದೇಹ ಪಡೆಯಲು ಮಾಹಿತಿಗಾಗಿ ಪ್ರಯತ್ನಿಸುತ್ತಿದ್ದೇನೆ. ಪಿಎಚ್‌ಡಿ ಮಾಡುತ್ತಿದ್ದ ನನ್ನ ಪುತ್ರಿ ಮಾರ್ಚ್ 19ರಂದು ಸೈಕ್ಲಿಂಗ್ ಮಾಡಿಕೊಂಡು ಮನೆಗೆ ಹಿಂತಿರುಗುವಾಗ ಟ್ರಕ್ ಗುದ್ದಿದ ಪರಿಣಾಮ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದು ನಮ್ಮನ್ನು ಮತ್ತು ಅವಳ ಅಪಾರ ಸ್ನೇಹ ಬಳಗವನ್ನು ಕುಸಿಯುವಂತೆ ಮಾಡಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ನೀತಿ ಆಯೋಗ್‌ನ ಮಾಜಿ ಸಿಇಒ ಅಮಿತಾಭ್ ಕಾಂತ್ ಚೀಸ್ತಾ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದು, ‘ಚೀಸ್ತಾ ನಮ್ಮೊಂದಿಗೆ ನೀತಿ ಆಯೋಗ್ನಲ್ಲಿ ಲೈಫ್ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಅವರು ನಡ್ಜ್ ಘಟಕದಲ್ಲಿದ್ದರು ಮತ್ತು ಎಸ್ಇನಲ್ಲಿ ವಿಜ್ಞಾನದಲ್ಲಿ ತಮ್ಮ ಪಿ.ಎಚ್ಡಿ ಮಾಡುತ್ತಿದ್ದರು. ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ನಡೆದ ಭೀಕರ ಅಪಘಾತದಲ್ಲಿ ಅವರು ನಿಧನರಾದರು. ತೇಜಸ್ವಿ, ಪ್ರತಿಭಾವಂತ ಮತ್ತು ಧೈರ್ಯಶಾಲಿಯಾದ ಚೀಸ್ತಾರವರು ಇಂದು ನಮ್ಮನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಂತಾಪ ಸೂಚಿಸಿದ್ದಾರೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura