ಮಿಟ್ಟೇಮರಿ ರಸ್ತೆ ಕಾಮಗಾರಿಗೆ ಸಹಕರಿಸಲು ಮನವಿ
1 min readಮಿಟ್ಟೇಮರಿ ರಸ್ತೆ ಕಾಮಗಾರಿಗೆ ಸಹಕರಿಸಲು ಮನವಿ
ಕಾಮಗಾರಿ ವಿರೋಧಿಸಿ ತಡೆಯಾಜ್ಞೆ ತಂದಿರುವುದಕ್ಕೆ ಅಸಮಾಧಾನ
ಮಿಟ್ಟೇಮರಿ ಅಂಗಡಿ ಮಾಲೀಕರಿಂದ ಸುದ್ದಿಗೋಷ್ಠಿ
ಮಿಟ್ಟೆಮರಿಯಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತಿದ್ದು, ಮೂರ್ನಾಲ್ಕು ಮಂದಿ ಮಾಹಿತಿ ಕೊರತೆಯಿಂದ ಕೋರ್ಟ್ ಗೆ ಹೋಗಿದ್ದಾರೆ. ಅವರೂ ಅಭಿವೃದ್ದಿಗೆ ಬೆಂಬಲವಿದ್ದು, ಸಹಕಾರ ಮತ್ತು ಸಾಮರಸ್ಯದಿಂದ ಸಮಸ್ಯೆ ಪರಿಹರಿಸಕೊಳ್ಳಬಹುದಾಗಿದೆ ಎಂದು ಕಾಂಗ್ರೇಸ್ ಮುಖಂಡ ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ ತಿಳಿಸಿದರು.
ತಾಲೂಕಿನ ಮಿಟ್ಟೆಮರಿ ಹೋಬಳಿ ಕೇಂದ್ರದಲ್ಲಿ ಶುಕ್ರವಾರ ಅಂಗಡಿ ಮಾಲಿಕರು ಪತ್ರಿಕಾಗೋಷ್ಟಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ- ಬಂಗಾರಪೇಟೆಗೆ ರಾಜ್ಯ ಹೆದ್ದಾರಿಯನ್ನಾಗಿಸಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದಾಗಿ ರಸ್ತೆ ಅಗಲೀಕರಣ ಕಾರ್ಯ ಕೈಗೆತ್ತಿಕೊಂಡಿದ್ದು,ಕೆಲವರು ಅಡ್ಡಿ ಪಡಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆಯನ್ನು ತರಲಾಗಿದೆ. ಹಾಗಾಗಿ ರಸ್ತೆ ಅಗಲೀಕರಣದ ವಿಚಾರದಲ್ಲಿ ಗೊಂದಲ ಬೇಡ, ರಸ್ತೆ ಅಭಿವೃದ್ಧಿಯಾದರೆ ಶಾಲಾ,ಕಾಲೇಜು, ಆಸ್ಪತ್ರೆ, ವ್ಯಾಪಾರ ವಹಿವಾಟು ಚಟುವಟಿಕೆಗಳಿಗೆ ಉಪಯುಕ್ತವಾಗಲಿದೆ. ಹಾಗಾಗಿ ಎಲ್ಲರ ಸಹಕಾರ,ಸಾಮರಸ್ಯದಿಂದ ಈ ಅಗಲೀಕರಣ ಸುಸೂತ್ರವಾಗಿ ನಡೆಯಲಿ. ಹಾಗೇಯೇ ಕೋರ್ಟ್ ಗೆ ಹೋದವರೂ ಮುಂದಿನ ಭವಿಷ್ಯದ ದೂರದೃಷ್ಟಿಯಿಂದ ಯೋಚಿಸಬೇಕು. ತಡೆಯಾಜ್ಞೆಯನ್ನು ವಾಪಸ್ಸು ಪಡೆಯಬೇಕು ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬೂರಗಮಡುಗು ನರಸಿಂಹಪ್ಪ ಮಾತನಾಡಿ
ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರು ೪೯ ಅಡಿಗಳಷ್ಟು ಅಗಲೀಕರಣವಿದ್ದದ್ದನ್ನು, 43ಕ್ಕೆ ಕಾಮಾಗಾರಿ ನಡೆಸಲು ಕಡಿಮೆ ಮಾಡಿಸಿ,ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಹಾಗಾಗಿ ಎಲ್ಲರೂ ಅಭಿವೃದ್ಧಿಗೆ ಕೆಲಸಕ್ಕೆ ಒಮ್ಮತ ಸೂಚಿಸಿರುವುದು ಸಂತಸ ತಂದಿದೆ ಎಂದರು.
ಮಿಟ್ಟೇಮರಿ ಗ್ರಾಮದ ಅಂಗಡಿ ಮಾಲಿಕ ಅಶ್ವತ್ಥ ಮಾತನಾಡಿ
ಇದೇ ಅಂಗಡಿ ಮಾಲಿಕರು ಒಮ್ಮತ ಸೂಚಿಸಿದ್ದಾರೆ.ಹಾಗೆಯೇ 43 ಅಡಿಗಳಷ್ಟು ರಸ್ತೆ ಅಗಲೀಕರಣ ಮಾಡಿ, ನಂತರ ನಿವೇಶನ, ಕಟ್ಟಡ ಸೇರಿದಂತೆ ಆಸ್ತಿ ನಷ್ಟಕ್ಕೆ ಪರಿಹಾರವನ್ನೂ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಗಡಿ ಮಾಲೀಕರಾದ ರಾಮಾನಂದ, ವೆಂಕಟೇಶ್, ಆನಂದರಾಮಯ್ಯ ಶೆಟ್ಟಿ, ಗೋಪಿ, ಅಶ್ವತ್ಥ ಬಿ.ಕೆ, ಹೋಟಲ್ ನಾರಾಯಣಪ್ಪ,ಚೇಳೂರು ಶ್ರೀನಿವಾಸ್,ಮಂಜುನಾಥ, ವಿನೋದ್ ಕುಮಾರ್, ಅಶ್ವತ್ಥನಾರಾಯಣಶೆಟ್ಟಿ, ನರಸರೆಡ್ಡಿ,ಎಂ.ಆರ್ ಸುಬ್ರಮಣ್ಯ,ಎಂ.ಸಿ ಚೌಡಪ್ಪ, ಮತ್ತಿರೆಡ್ಡಿ, ಚಿನ್ನೇಪಲ್ಲಿ ನಾರಾಯಣಸ್ವಾಮಿ, ಬಾಬು ನೂರೂಸಾಬ್, ಚಂದ್ರಮ್ಮ, ಬಾಬು ನೂರುಸಾಬಿ, ಕಮ್ಮಡಿಕೆ ಶ್ರೀನಿವಾಸ, ಗಿರಿಯಪಲ್ಲಿ ನರಸಿಂಹಪ್ಪ ಮತ್ತಿತರರು ಇದ್ದರು.