ಹೆಚ್ಚು ಅಗಲೀಕರಣ ಮಾಡಿ, ಜನರನ್ನು ಬೀದಿಗೆ ತಳ್ಳದಂತೆ ಕೋರಿಕೆ
1 min readಅಗತ್ಯವಿರುವಷ್ಟು ಮಾತ್ರ ರಸ್ತೆ ಮಾಡಲು ಮನವಿ
ಹೆಚ್ಚು ಅಗಲೀಕರಣ ಮಾಡಿ, ಜನರನ್ನು ಬೀದಿಗೆ ತಳ್ಳದಂತೆ ಕೋರಿಕೆ
ಚಿಕ್ಕಬಳ್ಳಾಪುರ ನಗರದ ಅಭಿವೃದ್ದಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಷ್ಟಿಯ ಹೆದ್ದಾರಿಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ರಸ್ತೆ ಅಭಿವೃದ್ದಿ ಪಡಿಸಿ ನಗರವನ್ನು ಉಳಿಸುವಂತೆ ಚಿಕ್ಕಬಳ್ಳಾಪುರ ನಗರದ ಸಾರ್ವಜನಿಕರು ಕೋರಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕರು, ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ, ಸಾರ್ವಜನಿಕರ ಆಸ್ತಿ ಉಳಿಸಬೇಕೆಂದು ಮನವಿ ಮಾಡಿದರು. ಬಸ್ ನಿಲ್ದಾಣ, ನಗರಸಭೆೆಗೆ ಸೇರಿದಂತೆ ಚೆನ್ನಯ್ಯ ಪಾರ್ಕ್ ಹೈಕೋರ್ಟ್ ನಲ್ಲಿರುವುದರಿಂದ ಅದನ್ನು ಟಚ್ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಆದರೆ ಜನಸಾಮಾನ್ಯರಿಗೆ ಯಾವುದೇ ಪರಿಹಾರ ನೀಡಿಲ್ಲ. ಇದರಿಂದ ಅವರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಅವರು ವಿಧಾನಸಭೆ, ಲೋಕಸಭೆ, ನಗರಸಭೆ ಚುನಾವಣೆಗಳಲ್ಲಿ ಮತ ಹಾಕಿದ್ದಾರೆ, ಮುಂದೆಯೂ ಹಾಕುತ್ತಾರೆ. ಆದರೆ ಅವರಿಗೆ ಅನ್ಯಾಯ ಆಗಿದೆ. ಆದರಿಂದ ಸಭೆಯನ್ನು ಕರೆದು ಅವರಿಗೆ ನ್ಯಾಯಯುತವಾಗಿ ರಸ್ತೆ ಅಗಲಿಕರಣ ಮಾಡುವಂತೆ ಮನವಿ ಮಾಡಿಕೊಂಡರು.
ಸರ್‌ಎವಿ ಶಾಲೆ ಬಳಿ ಮೂರು ಅಡಿ ಜಾಗ ಹೋದ್ರೆ ಅಲ್ಲಿ ಸುಮಾರು ೧ ಎಕರೆ ಪ್ರದೇಶ ಹೋಗುತ್ತೆ. ಆದರಿಂದ ಈ ಭಾಗದಲ್ಲಿ ಇಷ್ಟೊಂದು ಅನ್ಯಾಯ ಆಗುತ್ತಿದೆ. ರಸ್ತೆ ಮಾಡಲು ಎಷ್ಟು ಅವಶ್ಯಕತೆ ಇದೆಯೋ ಅಷ್ಟಕ್ಕೇ ರಸ್ತೆಯನ್ನು ನಿರ್ಮಣ ಮಾಡುವಂತೆ ಇದೇ ವೇಳೆ ರಾಷ್ಟಿಯ ಹೆದ್ದಾರಿ ಪ್ರಾದಿಕಾರಕ್ಕೆ ಮನವಿ ಮಾಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶ್, ಮಂಜುನಾಥ್, ರಾಜೇಶ್, ಪರಶಿವಮೂರ್ತಿ ಇದ್ದರು.