ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಮಂಡಳಿ ಸ್ಥಾಪನೆಗೆ ಮನವಿ

1 min read

ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಮಂಡಳಿ ಸ್ಥಾಪನೆಗೆ ಮನವಿ
ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಕೇಂದ್ರಕ್ಕೆ ಮನವಿ
ಹೂವಿನ ರೈತರಿಗೆ ಅನುಕೂಲವಾಗುವ ಸಲಹೆ ನೀಡಿದ ಸಂಸದ

ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಮಂಡಳಿ ಸ್ಥಾಪಿಸುವಂತೆ ಲೋಕಸಭೆಯ ನಿಯಮ 377 ರಡಿ, ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಭಾಧ್ಯಕ್ಷರ ಅನುಮತಿಯೊಂದಿಗೆ ಕೆಲ ವಿಷಯಗಳ ಮೇಲೆ ಸರ್ಕಾರದ ಗಮನ ಸೆಳೆಯಲು ನಿಯಮ 377 ಅನುವು ಮಾಡಿಕೊಡಲಿದ್ದು, ಈ ನಿಯಮದಡಿ ಪುಷ್ಪ ಮಂಡಳಿ ಸ್ಥಾಪನೆಗೆ ಗಮನ ಹರಿಸುವಂತೆ ಅವರು ಕೋರಿದ್ದಾರೆ.

ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಅವರು, ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಮಂಡಳಿ ಸ್ಥಾಪಿಸುವಂತೆ ಲೋಕಸಭೆಯ ನಿಯಮ 377 ರಡಿ, ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಭಾಧ್ಯಕ್ಷರ ಅನುಮತಿಯೊಂದಿಗೆ ಕೆಲ ವಿಷಯಗಳ ಮೇಲೆ ಸರ್ಕಾರದ ಗಮನ ಸೆಳೆಯಲು ನಿಯಮ 377 ಅನುವು ಮಾಡಿಕೊಡಲಿದ್ದು, ಈ ನಿಯಮದಡಿ ಪುಷ್ಪ ಮಂಡಳಿ ಸ್ಥಾಪನೆಗೆ ಗಮನ ಹರಿಸುವಂತೆ ಅವರು ಕೋರಿದ್ದಾರೆ. ಭಾರತದಲ್ಲಿ ಹೂವು ಪಾರಂಪರಿಕ ಪ್ರಾಮುಖ್ಯತೆ ಪಡೆದಿದೆ. ಮನೆಗಳಲ್ಲಿ ನಿತ್ಯ ಪೂಜೆ, ದೇವಸ್ಥಾನಗಳಲ್ಲಿ ಕಾರ್ಮಿಕ ಆಚರಣೆ, ಉತ್ಸವ, ಸಮಾರಂಭಗಳಲ್ಲಿ ಮುಖ್ಯವಾಗಿ ಹೂಗಳು ಬೇಕು.

ಪುಷ್ಪ ಕೃಷಿ ಭಾರತದ ಪುರಾತನ ಕೃಷಿ ಪದ್ಧತಿಯಾಗಿದ್ದು, ಸಣ್ಣ ಮತ್ತು ಬಡ ರೈತರಿಗೆ ಲಾಭ ತರುವ ಜೊತೆಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುತ್ತದೆ. ಇಷ್ಟು ಮಹತ್ವವಿದ್ದರೂ ಭಾರತದಲ್ಲಿ ಪುಷ್ಪ ಕೃಷಿಯನ್ನು ಸರಿಯಾಗಿ ಬಳಸಿಕೊಂಡಿಲ್ಲ. 2022-23 ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಪುಷ್ಪ ಕೃಷಿಯಲ್ಲಿ 707.81 ಕೋಟಿ ರೂ ಹೂವಿನ ರಫ್ತು ವಹಿವಾಟು ನಡೆದಿದೆ. ಈ ಪೈಕಿ ಹೆಚ್ಚು ಪಾಲು ಕರ್ನಾಟಕದ್ದೇ ಆಗಿದೆ ಎಂಬುದು ವಿಶೇಷ.

ಕೃಷಿಯಲ್ಲಿ ಬದಲಾವಣೆ ತರುವ ಹಾಗೂ ರೈತರ ಬದುಕು ಬದಲಿಸುವ ಸಾಮರ್ಥ್ಯ ಹೊಂದಿರುವ ಪುಷ್ಪ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ. ಅಲ್ಲದೆ ಪುಷ್ಪ ಮಂಡಳಿ ಸ್ಥಾಪನೆಯಿಂದ ರಾಷ್ಟದಾದ್ಯಂತ ಪುಷ್ಪ ಕೃಷಿಗೆ ಉತ್ತೇಜನ ದೊರೆತು, ಕರ್ನಾಟಕ ಹಾಗೂ ಎಲ್ಲ ರಾಜ್ಯಗಳ ರೈತರಿಗೆ ಪ್ರಯೋಜನವಾಗುತ್ತದೆ. ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಯೇ ಆಗಿರುವ ಡಾ.ಕೆ.ಸುಧಾಕರ್, ತಾವು ಈ ಪ್ರದೇಶದಲ್ಲಿ ರೈತರ ಬದುಕಿನ ಗುಣಮಟ್ಟ ಸುಧಾರಿಸುವ ಹಾಗೂ ವಿಶಿಷ್ಟ ಕೃಷಿ ಪದ್ಧತಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಪುಷ್ಪ ಕೃಷಿ ಪರಿಣಾಮಕಾರಿ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ.

 

About The Author

Leave a Reply

Your email address will not be published. Required fields are marked *