ನುಡಿ ನಮನ ಕಾರ್ಯಕ್ರಮದಲ್ಲಿ ಕಿರು ಹೊತ್ತಿಗೆ ಬಿಡುಗಡೆ
1 min readನುಡಿ ನಮನ ಕಾರ್ಯಕ್ರಮದಲ್ಲಿ ಕಿರು ಹೊತ್ತಿಗೆ ಬಿಡುಗಡೆ
ಮಾಜಿ ಬಮೂಲ್ ಅಧ್ಯಕ್ಷ ಅಪ್ಪಯ್ಯಣ್ಣ ನುಡಿನಮನ
ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜೆಡಿಎಸ್ ಕಟ್ಟಲು ಅವಿರತ ಹೋರಾಟ ನೆಡೆಸಿದ ಅಪ್ಪಯ್ಯಣ್ಣ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ, ಸಹಕಾರ ಹಾಗೂ ಪಂಚಾಯತಿ ರಾಜಕೀಯಕ್ಕೆ ಅವರ ಪ್ರಾಮಾಣಿಕ ಸೇವೆ ಸ್ಮರಣಿಯ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ರಂಗಮ0ದಿರದಲ್ಲಿ ಆಯೋಜಿಸಿದ್ದ ನುಡಿ ನಮನ ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ದೆಹಲಿಯಲ್ಲಿ ಅಪ್ಪಯ್ಯಣ್ಣ ಸಾವಿನ ವಿಷಯ ತಿಳಿದಾಗ ನಂಬಲು ಸಾಧ್ಯ ವಾಗಲಿಲ್ಲ, ಈ ಕುರಿತು ತಪ್ಪು ಮಾಹಿತಿ ಇರಬೇಕು ನೋಡಿ ಎಂದು ಹೇಳ್ಳಿದ್ದೆ. ಕಾರಣ ಅವರ ಜೀವನ ಶೈಲಿ, ಅವರು ಉತ್ತಮ ಆರೋಗ್ಯ ಹೊಂದಿದ್ದ ವ್ಯಕ್ತಿಯಾಗಿದ್ದರು. ಆದರೆ ಅವರ ಸಾವು ಅನಿರೀಕ್ಷಿತ ಎಂದರು.
ಅವರ ನೆಡೆದು ಬಂದ ದಾರಿ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕ ಅವರನ್ನು ಕುರಿತು ಕಿರು ಮಾಹಿತಿ ನೀಡಲಿದೆ, ನಮ್ಮ ಅವರ ಒಡನಾಟ ಬಹಳ ಹತ್ತಿರವಾದದ್ದು , ಸಣ್ಣ ಹಳ್ಳಿಯ ರೈತನ ಮಗನಾಗಿ ಜನಿಸಿದ ಅವರು ತಾಲ್ಲೂಕಿನ ನಾಯಕನಾಗಿ ಬೆಳೆದದ್ದು ಸುಲಭವಾಗಿರಲಿಲ್ಲ , ರಾಜ್ಯದಲ್ಲಿ ದೊಡ್ಡಬಳ್ಳಾಪುರ ಹಾಗೂ ಕನಕಪುರದಲ್ಲಿ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ, ಸ್ಥಳೀಯ ಮಟ್ಟದ ಜೆಡಿಎಸ್ ಸಂಘಟನೆ ಮಾಡುವಲ್ಲಿ ಅವರ ಕೊಡುಗೆ ಅಪಾರ, ತಳಮಟ್ಟದಿಂದ ಬೆಳೆದು ಬಂದ ನಾಯಕ ಎಂದರೇ ತಪ್ಪಾಗಲಾರದು ಎಂದರು.ದೆಹಲಿಯಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ನಿರ್ಧಾರವಾಗಿದ್ದ ಕಾರಣ ನಾನು ಅವರ ಸಾವಿನ ಸಂದರ್ಭದಲ್ಲಿ ಬರಲು ಸಾಧ್ಯವಾಗಲಿಲ್ಲ, ಅದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದರು.