ಚಿಕ್ಕಬಳ್ಳಾಪುರ ಕರಡು ಮತದಾರರ ಪಟ್ಟಿ ಬಿಡುಗಡೆ
1 min readಚಿಕ್ಕಬಳ್ಳಾಪುರ ಕರಡು ಮತದಾರರ ಪಟ್ಟಿ ಬಿಡುಗಡೆ
ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೆ ಅಧಿಕ
ಚುನಾವಣಾ ಆಯೋಗದ ಆದೇಶದಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025ಕ್ಕೆ ಸಂಬ0ಧಿಸಿ ಪರಿಷ್ಕೃತ ಕರಡು ಮತದಾರರ ಪಟ್ಟಿ ಜಿಲ್ಲಾಡಳಿತ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪುರಷರಿಗಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ 5 ಕ್ಷೇತ್ರಗಳ ವಿಧಾನಸಭೆ ಕ್ಷೇತ್ರಗಳ ಆರು ತಾಲ್ಲೂಕುಗಳ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರ ಕರಡು ಪಟ್ಟಿ ಪ್ರಕಟಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ 10,59,981 ಮಂದಿ ಮತದಾರರಿದ್ದು,ಇದರಲ್ಲಿ 5,22,298 ಪುರುಷ ಮತದಾರರು, 5,37,593 ಮಹಿಳಾ ಮತದಾರರು ಮತ್ತು 90 ಮಂದಿ ಇತರೆ ಮತದಾರರು ಇದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ತಿಳಿಸಿದರು. ಜಿಲ್ಲಾಡಳಿತ ಭಾವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾ0ಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ 20,076ಮಂದಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, 9931 ಮತದಾರರು ಬೇರಡೆ ತಮ್ಮ ಹೆಸರು ವರ್ಗಾಯಿಸಿ ಕೊಂಡಿದ್ದಾರೆ. ಕಳೆದ ಜನವರಿಯಿಂದ ಈವರೆಗೂ ಒಟ್ಟು 10,085 ಮತದಾರರು ಹೆಚ್ಚಾಗಿದ್ದಾರೆ ಎಂದರು.
ಭಾರತ ಚುನಾವಣಾ ಆಯೋಗದ ಇತ್ತೀಚಿನ ತಿದ್ದುಪಡಿ ನಿಯಮಗಳಂತೆ ಪ್ರಸ್ತುತ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು 4 ಅರ್ಹತಾ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಪ್ರಸಕ್ತ 2025ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಅಕ್ಟೋಬರ್ 1, 2025ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷ ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ. ಅಲ್ಲದೆ ಮಧ್ಯ0ತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ ಎಂದರು.
ಜಿಲ್ಲೆಯ ಮತದಾರರ ಲಿಂಗಾನುಪಾತದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಇದ್ದಾರೆ. ಅದರಲ್ಲಿ ಗೌರಿಬಿದನೂರಲ್ಲಿ 3,527, ಬಾಗೇಪಲ್ಲಿ ಕ್ಷೇತ್ರದಲ್ಲಿ 2,520, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 3,889. ಶಿಡ್ಲಘಟ್ಟ ವಿಧಾನ ಸಭೆ ಕ್ಷೇತ್ರದಲ್ಲಿ 1,343, ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿ 4,016ಮಹಿಳೆಯರು ಸೇರಿ ಜಿಲ್ಲೆಯಲ್ಲಿ ಒಟ್ಟು 15,295 ಮಹಿಳೆಯರ ಸಂಖ್ಯೆ ಏರಿಕೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ 1,03,416 ಪುರುಷ ಮತದಾರರು, 1,06,943 ಮಹಿಳಾ ಮತದಾರರು ಮತ್ತು 3 ಮಂದಿ ಇತರರು ಸೇರಿ ಒಟ್ಟು 2,10,369 ಮತದಾರರು ಇದ್ದಾರೆ.
ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ 1,00,399 ಪುರುಷ ಮತದಾರರು, 1,02,889 ಮಹಿಳಾ ಮತದಾರರು ಮತ್ತು 27 ಮಂದಿ ಇತರರು ಸೇರಿ ಒಟ್ಟು 9,03,295 ಮತದಾರರು ಇದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ 1,03,114 ಪುರುಷ ಮತದಾರರು, 1,07,003 ಮಹಿಳಾ ಮತದಾರರು ಮತ್ತು 12 ಮಂದಿ ಇತರರು ಸೇರಿ ಒಟ್ಟು 2,10,129 ಮತದಾರರು ಇದ್ದಾರೆ. ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಲ್ಲಿ 1,02,760 ಪುರುಷ ಮತದಾರರು, 1,04,103 ಮಹಿಳಾ ಮತದಾರರು ಮತ್ತು 9 ಮಂದಿ ಇತರರು ಸೇರಿ ಒಟ್ಟು 2,06,872 ಮತದಾರರು ಇದ್ದಾರೆ. ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿ 1,12,639 ಪುರುಷ ಮತದಾರರು, 1,16,665 ಮಹಿಳಾ ಮತದಾರರು ಮತ್ತು 39 ಮಂದಿ ಇತರರು ಸೇರಿ ಒಟ್ಟು 2,29,333 ಮತದಾರರು ಇದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟು 1,293ಮತಗಟ್ಟೆಗಳಿದ್ದು, ಇದರಲ್ಲಿ ನಗರ ಪ್ರದೇಶದಲ್ಲಿ 235 ಮತಗಟ್ಟೆಗಳು ಮತ್ತು ಗ್ರಾಮಾಂತರ ಪ್ರಧಶಗಳಲ್ಲಿ 958 ಮತಗಟ್ಟೆಗಳಿವೆ. ಕರಡು ಮತದಾರರ ಪಟ್ಟಿ ಬಗ್ಗೆ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ ೨೮ರ ಒಳಗಾಗಿ ಸಂಬ0ಧಪಟ್ಟ ಮತಗಟ್ಟೆ ಅಧಿಕಾರಿ, ತಹಶೀಲ್ದಾರ್, ಪೌರಾಯುಕ್ತರು, ಸಹಾಯಕ ಮತದಾರರ ನೋಂದಾಣಾಧಿಕರಿಗಳಿಗೆ ಮತ್ತು ಉಪವಿಭಾಗಾಧಿಕಾರಿ ಮೂಲಕ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಮತದಾರರ ಸಹಾಯವಾಣಿ 1950 ಅಥವಾ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರವರ ಅಂತರ್ಜಾಲದಲ್ಲಿ ಮತದಾರರ ಪಟ್ಟಿಗೆ ಸಂಬ0ಧಿಸಿ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ. ತಿದ್ದುಪಡಿ. ತೆಗೆದು ಹಾಕಲು. ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು ಮತ್ತು ಇ-ಎಪಿಕ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವೋಟರ್ ಸಹಾಯವಾಣಿ ಮೊಬೈಲ್ ಆ್ಯಪ್ ನಲ್ಲಿ ಚುನಾವಣೆಗೆ ಹಾಗೂ ಮತದಾರರ ಪಟ್ಟಿಗೆ ಸಂಬ0ಧಿಸಿ ಇತರೆ ಮಾಹಿತಿ ಆಳವಡಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಡೌನ್ಲೋಡ್ ಮಾಡಿಕೊಂಡು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಲು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಚುನಾವಣಾ ತಹಸೀಲ್ದಾರ್ ಕೆ. ಶ್ವೇತಾ, ವಾರ್ತಾ ಮತ್ತು ಸಂಪರ್ಕಇಲಾಖೆಯ ಸಹಾಯಕ ನಿರ್ದೇಶಕ ಜುಂಜಣ್ಣ ಇದ್ದರು.