ಜಾತಿಗಣತಿ ಬಿಡುಗಡೆ ಆದರೆ ಬಲಿಜ ಸಮುದಾಯಕ್ಕೆ ಒಳಿತು
1 min readಜಾತಿಗಣತಿ ಬಿಡುಗಡೆ ಆದರೆ ಬಲಿಜ ಸಮುದಾಯಕ್ಕೆ ಒಳಿತು
ಬಲಿಜ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ ಎಂದ ಶಾಸಕ
ಐಟಿ, ಇಡಿಯಿಂದ ಸಿದ್ದರಾಮಯ್ಯನ ಏನೂ ಮಾಡಲು ಸಾಧ್ಯವಿಲ್ಲ
ನಾನು ಬಲಿಜ ಸಮುದಾಯದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದವ, ಜಾತಿಗಣತಿ ಬಿಡುಗಡೆ ಆದರೆ ನಮ್ಮ ಸಮುದಾಯಕ್ಕೆ ಓಳಿತಾಗುವ ನಂಬಿಕೆ ಇದೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬ0ಧಿಸಿ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯನವರ ಬಳಿ ಸಮುದಾಯಕ್ಕೆ ಉದ್ಯೋಗದ ವಿಚಾರದಲ್ಲಿ 2 ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇನೆ, ಹೀಗಾಗಿ ಜಾತಿಗಣತಿ ಬಿಡುಗಡೆ ಆದರೆ ನಮ್ಮ ಸಮುದಾಯಕ್ಕೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ನನ್ನ ಸಮುದಾಯದ ಪರವಾಗಿ ಕೇಳೋದು ನನ್ನ `ಧರ್ಮ ಕರ್ತವ್ಯ ಎಂದರು.
ಅವರವರು ಅವರವರ ಸಮುದಾಯದ ಪರ ಇರಲಿದ್ದಾರೆ. ಹಾಗಂತ ಮಾಡಲೇಬೇಕು ಎಂದು ನಾನು ಆದೇಶ ಮಾಡಲು ಅಸಾಧ್ಯ, ಆದರೆ ನಾನು ಮುಂದಿನ ಬಾರಿ ಎಂಎಲ್‌ಎ ಆಗೋವಷ್ಟರಲ್ಲಿ 2ಎ ತರ್ತೇನೆ, ಇದು ನನ್ನ ಸಮುದಾಯಕ್ಕೆ ನಾನು ಕೊಡುವ `ಭರವಸೆ ಎಂದರು.
ಇನ್ನು ಮುಡಾ ಹಗರಣ ಸಂಬ0ಧ ಇಡಿ ತನಿಖೆ ಆರಂಭ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರದೀಪ್ ಈಶ್ವರ್, ಐಟಿ ಇಡಿ ಕೈಯಲ್ಲಿ ಸಿದ್ದರಾಮಯ್ಯನವರನ್ನ ಏನೂ ಮಾಡಲು ಆಗಲ್ಲ ಎಂದು ಹೇಳಿದರು.
ಡಿಕೆಶಿ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಎರಡು ಗುಂಡಿಗೆಗೆಳು, ಇಡಿ ನೋಟಿಸ್ ಗೆ ಹೆದರಲ್ಲ, ಇದು ರಾಜಕೀಯ ಪ್ರೇರಿತ. ಸಿದ್ದರಾಮಯ್ಯನವರೇ ನಮ್ಮ ಸಿಎಂ ಆಗಿ ಇರ್ತಾರೆ. ಒಂದಲ್ಲ ಸಾವಿರ ನೋಟಿಸ್ ಕೊಟ್ರೂ ನಾವು ಡೋಂಟ್ ಕೇರ್, ನೇರವಾಗಿ ಎದುರಿಸಲು ಸಾಧ್ಯವಾಗದೆ ಬಿಜೆಪಿಯವರು ಹಿಂಬಾಗಿಲ ಎಂಟ್ರಿ ಮಾಡ್ತಿದ್ದಾರೆ. ಆದ್ರೆ ನಾವು ಕಾನೂನು ಪ್ರಕಾರ ಎದುರಿಸುತ್ತೇವೆ ಗೆದ್ದು ತೋರಿಸುತ್ತೇವೆ ಎಂದರು.