ರಾಷ್ಟಿಯ ಹೆದ್ದಾರಿ 234 ದುರಸ್ತಿ ಕಾಮಗಾರಿ ಆರಂಭ
1 min readರಾಷ್ಟಿಯ ಹೆದ್ದಾರಿ 234 ದುರಸ್ತಿ ಕಾಮಗಾರಿ ಆರಂಭ
ಪ್ರತಿನಿತ್ಯ ೩ ತಾಸು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್
ಸತತ 2 ತಿಂಗಳು ವಾಹನ ಸಂಚಾರಕ್ಕೆ ನಿಯಂತ್ರಣ ಹೇರಿದ ಜಿಲ್ಲಾಡಳಿತ
ಸಹಕರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮನವಿ
ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಷ್ಟಿಯ ಹೆದ್ದಾರಿ 234ರ ಕಾಮಗಾರಿ ನಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಅಂಗಡಿಗಳ ಮಾಲೀಕರು ಸ್ವಯಂಪ್ರೇರಿತವಾಗಿ ತೆರುವು ಮಾಡುವ ಮೂಲಕ ಹೆದ್ದಾರಿ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇದೀಗ ಕಣಿವೆ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ಪ್ರತಿನಿತ್ಯ ಮೂರು ತಾಸು ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ.
ಹೌದು, ರಾಷ್ಟಿಯ ಹೆದ್ದಾರಿ 234 ಅಭಿವೃದ್ಧಿ ಕಾಮಗಾರಿ ವೇಗ ಹೆಚ್ಚಿಸಿಕೊಳ್ಳುತ್ತಿದೆ. ಆದರೆ ಇದೀಗ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಮುಂದಿನ ಎರಡು ತಿಂಗಳ ಕಾಲ ಸಮಸ್ಯೆ ಕಾಡಲಿದೆ. ಇದಕ್ಕೆ ಕಾರಣ ಚಿಕ್ಕಬಳ್ಳಾಪುರ ಹೊರವಲಯದ ಕಣಿವೆ ಪ್ರದೇಶದಲ್ಲಿ ಬೃಹತ್ ಕಲ್ಲು ಬಂಡೆಗಳನ್ನು ಸಿಡಿ ಮದ್ದುಗಳಿಂದ ಸಿಡಿಸಬೇಕಿದ್ದು, ಈ ಕಾರ್ಯಕ್ಕಾಗಿ ಪ್ರತಿನಿತ್ಯ ಚಿಕ್ಕಬಳ್ಳಾಪುರ, ಗೌರಿಬಿದನೂರು ಮಾರ್ಗವನ್ನು ಮೂರು ತಾಸು ಬಂದ್ ಮಾಡಲಾಗುತ್ತಿದೆ.
ಇಂದಿನಿ0ದಲೇ ಗೌರಿಬಿದನೂರು ಚಿಕ್ಕಬಳ್ಳಾಪುರ ಮಾರ್ಗ ಬಂದ್‌ಗೆ ಚಾಲನೆ ನೀಡಲಾಗಿದ್ದು, ಮಧ್ಯಹ್ನ 12.30 ರಿಂದ 3.30ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಈ ಸಮಯದಲ್ಲಿ ಹೆದ್ದಾರಿ ಅಭಿವೃದ್ಧಿ ಮಾಡಲು ಕಣಿವೆ ಸೇರಿದಂತೆ ಹೆದ್ದಾರಿ ಹಾದುವ ಮಾರ್ಗದಲ್ಲಿ ಎದುರಾಗಿರುವ ಬೃಹತ್ ಕಲ್ಲುಬಂಡೆಗಳನ್ನು ಸಿಡಿಸಲು ಬ್ಲಾಸ್ಟ್ ಮಾಡಲಾಗುತ್ತಿದೆ. ಈ ಬ್ಲಾಸ್ಟ್ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಯಾವುದೇ ರೀತಿಯ ಅನಾಹುತ ಸಂಭವಿಸಬಾರದು ಎಂಬ ಉದ್ಧೇಶದಿಂದ ಇಂತಹ ನಿರ್ಧರ ಕೈಗೊಳ್ಳಲಾಗಿದೆ.
ಆದರೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾರ್ಗ ಬಂದ್ ಮಾಡುವ ಬಗ್ಗೆ ಕೇವಲಕ್ಸ್ ಸೇರಿದಂತೆ ಇತರೆ ನಾಮಲಕಗಳಿಗೆ ಮಾತ್ರ ಸೀಮಿತವಾಗಿದೆ. ಇವರು ಮುಂಚಿತವಾಗಿ ಸುದ್ದಿಗೋಷ್ಟಿ ನಡೆಸಿ ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಮಾಹಿತಿ ನೀಡಬೇಕಿತ್ತು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಹೆದ್ದಾರಿ ಅಭಿವೃದ್ಧಿಯ ಬಗ್ಗೆ ಯಾರ ವಿರೋಧವೂ ಇಲ್ಲವಾದರೂ ಪ್ರತಿನಿತ್ಯ ಮೂರು ತಾಸು ಹೆದ್ದಾರಿ ಬಂದ್ ಮಡಾಉವ ವಿಚಾರ ಸುದ್ದಿಗೋಷ್ಟಿ ನಡೆಸಿ, ಮಾಧ್ಯಮದ ಮೂಲಕ ಮಾಹಿತಿ ನೀಡದೆ ಏಕಾಏಕಿ ನಿರ್ಧರ ಕೈಗೊಂಡಿರುವುದಕ್ಕೆ ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಅಸಮಾಧನ ಹೊರ ಹಾಕಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ರೋಗಿಗಳು ಹೆದ್ದಾರಿ ಬಂದ್ ಮಾಡುವ ಕಾರಣ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಸಾರ್ವಜನಿಕರ ನೇರ ಆರೋಪವಾಗಿದೆ. ಅಲ್ಲದೆ ಗೌರಿಬಿದನೂರು ಕಡೆಯಿಂದ ಬರುವ ವಾಹನಗಳು ಪೋಶೆಟ್ಟಿಹಳ್ಳಿಯಿಂದ ಬಲಕ್ಕೆ ತಿರುವು ಪಡೆದು, ಜಡಲ ತಿಮ್ಮನಹಳ್ಳಿ ಮೂಲಕ ಚಿಕ್ಕಬಳ್ಳಾಪುರದ ಬಿಬಿ ರಸ್ತೆಗೆ ಪ್ರವೇಶ ಪಡ’ಎಯಬಹುದಾಗಿದೆ. ಇನ್ನು ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ತೆರಳುವ ವಾಹನಗಳು ಕಣಜೇನಹಳ್ಳಿಯ ಬಳಿ ಎಡ ತಿರುವು ಪಡೆದು ಪೋಶೆಟ್ಟಿಹಳ್ಳಿ ಮಾರ್ಗ ಸಂಪರ್ಕಿಸಬೇಕಿದೆ.
ಆದರೆ ಈ ಎರಡೂ ಮಾರ್ಗಗಳೂ ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ತಲುಪಿವೆ. ಇಂತಹ ಮಾರ್ಗದಲ್ಲಿಯೇ ಕಾರು, ಬಸ್ಸು, ಲಾರಿ ಸೇರಿದಂತೆ ಇತರೆ ವಾಹನಗಳು ಸಂಚರಿಸುತ್ತಿದ್ದು, ಮೊದಲೇ ಹದಗೆಟ್ಟಿದ್ದ ರಸ್ತೆ ಇದೀಗ ಮತ್ತಷ್ಟು ಹಾಳಾಗುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಳ್ಳುವ ಆತಂಕವೂ ಇದ್ದು, ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡಿ ನಂತರ ಹೆದ್ದಾರಿ ಕಾಮಗಾರಿ ಆರಂಭಿಸಬೇಕಿತ್ತು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ಕುರಿತು ಅಧಿಕಾರಿ ಗೋವಿಂದರಾಜಲು ಮಾತನಾಡಿ, ರಾಷ್ಟಿಯ ಹೆದ್ದಾರಿ 234 ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ಸತತವಾಗಿ ನಡೆಯುವುದರಿಂದ ಪ್ರತಿನಿತ್ಯ ಸಿಡಿ ಮದ್ದು ಸಿಡಟಿಸಡಲು ಮೂರು ತಾಸು ಸಂಚಾರಕ್ಕೆ ತಡೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಗೌರಿಬಿದನೂರು ಕಡೆಯಿಂದ ಪೋಶೆಟ್ಟಿಹಳ್ಳಿ ಮತ್ತು ಚಿಕ್ಕಬಹಳ್ಳಾಪುರದ ಕಡೆಯಿಂದ ಕಣಜೇನಹಳ್ಳಿಯಿಂದ ಸಂಚಾರ ತಿರುವು ಪಡೆಯಲಿದೆ. ಮುಂದಿನ ಎರಡು ತಿಂಗಳ ಕಾಲ ಹೆದ್ದಾರಿ ಕಾಮಗಾರಿ ನಡೆಯಲಿದ್ದು, ವಾಹನ ಸವಾರರು ಸಹಕರಿಸಬೇಕೆಂದು ಕೋರಿದ್ದಾರೆ.
ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕ ಚಂದ್ರಶೇಖರ್ ಮಾತನಾಡಿ, ಈ ಮಾರ್ಗ ಬಂದ್ ಮಾಡುತ್ತಿರುವ ಕಾರಣ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಜದನರಿಗೆ ಅರಿವು ಮೂಡಿಸಲು ಸುದ್ದಿಗೋಷ್ಟಿ ಮಾಡಿ ಮಾಹಿತಿ ನೀಡಬೇಕಿದ್ದ ಅಧಿಕಾರಿಗಳು ಏಕಾಏಕಿ ಇಂದು ನಾಮಲಕ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ರಸ್ತೆ ಅಭಿವೃದ್ಧಿಯಾಗುವುದು ಉತ್ತಮ ಆದರೆ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ರಾಷ್ಟಿಯ ಹೆದ್ದಾರಿ 234ರ ಕಾಮಗಾರಿ ವೆಗ ಹೆಚ್ಚಿಸಿಕೊಂಡಿದ್ದು, ಇದು ಆದಷ್ಟು ಶೀಘ್ರ ಸಿದ್ಧವಾಗಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯಿ0ದ ಪಾರು ಮಾಡಲಿ ಎಂದು ಹಾರೈಸೋಣ.