ಅನೈತಿಕ ಚಟುವಟಿಕೆಗಳ ತಾಣವಾದ ರಂಗಸ್ಥಳ ದೇವಾಲಯ
1 min readಅನೈತಿಕ ಚಟುವಟಿಕೆಗಳ ತಾಣವಾದ ರಂಗಸ್ಥಳ ದೇವಾಲಯ
ರಂಗನಾಥ ಸ್ವಾಮಿ ದೇವಾಲಯದಲ್ಲಿ ಇಸ್ಪೀಟ್ ಸೇರಿ ಹಲವು ಚಟುವಟಿಕೆ
ಕರವೇ ಮುಖಂಡ ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಆರೋಪ
ದೇವಾಲಯ ಭೂಮಿ ಒತ್ತುವರಿ ತೆರುವುಗೊಳಿಸಲು ಆಗ್ರಹ
ಚಿಕ್ಕಬಳ್ಳಪುರದ ಪ್ರಸಿದ್ಧ ಐತಿಹಾಸಿಕ ಕ್ಷೇತ್ರ ರಂಗಸ್ಥಳ ದೇವಾಲಯ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಅರ್ಚಕರೂ ಶಿಸ್ತು ಪಾಲಿಸದೆ ದೇವಾಲಯ ಅಪವಿತ್ರತೆಗೆ ಒಳಗಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಕೂಡಲೇ ಕ್ರಮ ವಹಿಸಬೇಕೆಂದು ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರವೇ ಮುಖಂಡ ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಪವಿತ್ರ ಪುಣ್ಯಕ್ಷೇತ್ರವಾಗಿದ್ದು, ಇಲ್ಲಿಗೆ ರಾಜ್ಯದಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ, ದೇವರ ದರ್ಶನ ಪಡೆಯುತ್ತಾರೆ. ಮೂರು ಪ್ರಮುಖ ರಂಗಳಲ್ಲಿ ಈ ರಂಗಸ್ಥಳವೂ ಒಂದಾಗಿದ್ದು, ರಾಮಾಯಣ ಕಾಲದಿಂದಲೂ ಈ ದೇವಾಲಯಕ್ಕೆ ಇಥಿಹಾಸವಿದೆ ಎಂದು ಅವರು ಹೇಳಿದರು.
ಇಂತಹ ದೇವಾಲಯದಲ್ಲಿ ಪಾವಿತ್ರö್ಯತೆ ಕಾಪಾಡಬೇಕಾದ ಅರ್ಚಕರು ಶಿಸ್ತು ಉಳ್ಲಂಘಿಸಿ, ಒಗೆದ ಬಟ್ಟೆಗಳನ್ನು ಒಣಗಿಸಲು ದೇವಾಲಯದ ಆವರಣದಲ್ಲಿಯೇ ಹಾಕುತ್ತಿದ್ದಾರೆ. ನೆನ್ನೆ ತಾನೇ ವೈಕುಂಠ ಏಕಾದಶಿ ಮುಗಿದಿದ್ದು, ಜಿಲ್ಲಾಧಿಕಾರಿಗಳೂ ರಂಗಸ್ಥಳ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಇಂತಹ ದೇವಾಲಯದಲ್ಲಿ ಇಸ್ಪೀಟ್ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ರಂಗನಾಥ ಸ್ವಾಮಿ ದೇವಾಲಯದ ಉತ್ತರ ಭಾಗದಲ್ಲಿರುವ ಕಲ್ಲಿನ ಗಣೇಶ ವಿಗ್ರಹದ ಎಡ ಕೈ ಮುರಿದು ಹಾಕಿದ್ದಾರೆ. ಕೈಇಲ್ಲದ ವಿಗ್ರಹಣ ದೇವಾಲಯದಲ್ಲಿರುವುದು ಅಶುಭ. ಹಾಗಿದ್ದರೂ ಕೈ ಮುರಿದವರು ಯಾರು, ಯಾಕೆ ಮುರಿದರು ಎಂಬ ಬಗ್ಗೆ ಈವರೆಗೂ ಅರ್ಚಕರು ಗಮನ ಹರಿಸಿಲ್ಲ. ಅಲ್ಲಿನ ಪುಂಡ ಪೋಕಿರಿಗಳ ಅಡ್ಡವಾಗಿ ದೇವಾಲಯ ಪರಿವರ್ತನೆಯಾಗಿದ್ದು, ಅಲ್ಲಿ ಇಸ್ಪೀಟ್ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ದೇವಾಲಯಕ್ಕೆ ಸೇರಿದ ೪೦ ಎಕರೆ ಜಮೀನು ಇದ್ದು, ಈ ಭೂಮಿಯನ್ನು ಅಕ್ಕ ಪಕ್ಕದ ರೈತರು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ರಂಗಸ್ಥಳ ದೇವಾಲಯದ ಪ್ರಸ್ತುತ ಸ್ಥಿತಿಯ ಬಗ್ಗೆ ಗಮನ ಹರಿಸಿ, ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಜೊತೆಗೆ ಅರ್ಚಕರಿಗೆ ಎಚ್ಚರಿಕೆ ನೀಡಬೇಕಿದೆ. ಜೊತೆಗೆ ದೇವಾಲಯದ ಆಸ್ತಿಯನ್ನು ಸರ್ವೇ ಮಾಡಿ, ರಕ್ಷಣೆ ಮಾಡಬೇಕಿದೆ. ಇಲ್ಲವಾದಲ್ಲಿ ತಾಲೂಕು ಆಡಳಿತದ ವಿರುದ್ಧ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.