ಸೇನೆಯಲ್ಲಿರುವ ಸಹೋದರನ ಸುರಕ್ಷತೆಗಾಗಿ ರಾಷ್ಟ ಧ್ವಜಕ್ಕೆ ರಾಖಿ
1 min readಸೇನೆಯಲ್ಲಿರುವ ಸಹೋದರನ ಸುರಕ್ಷತೆಗಾಗಿ ರಾಷ್ಟ ಧ್ವಜಕ್ಕೆ ರಾಖಿ
ಸಹೋದರನ ಸ್ಮರಿಸಿ ರಾಷ್ಟ್ರ ಧ್ವಜಕ್ಕೆ ರಾಖಿ ಕಟ್ಟಿದ ಸಹೋದರಿ ವಚನಶ್ರೀ
ಭಾರತಿಯ ಸೇನೆಗೆ ಇತ್ತೀಚೆಗೆ ಸೇವೆಗೆ ಸೇರಿದ ಸಹೋದರ ಬಸವಕೀರಣ ಬಿರಾದರ ಪ್ರಸ್ತುತ ದೇಶ ಸೇವೆಯಲ್ಲಿ ನಿರತರಾಗಿದ್ದು, ಸಹೋದರ ಬಸವಕಿರಣನನ್ನು ಸ್ಮರಿಸಿ ಆತನ ಸಹೋದರಿ ವಚನಶ್ರೀ ಬಿರಾದಾರ ರಾಷ್ಟ್ರದ ಧ್ವಜಕ್ಕೆ ಗೌರವ ಸಲಿಸಿ, ರಾಖಿ ಕಟ್ಟಿದ ಘಟನೆ ಇಂದು ನಡೆಯಿತು.
ಅಣ್ಣ ಸೇನೆಯಲ್ಲಿ ದೇಶ ಕಾಯುತ್ತಿದ್ದಾರೆ. ಇಂದು ರಕ್ಷಾಬಂಧನ್ ಹಬ್ಬ. ಅಣ್ಣನ ಕ್ಷೇಮ ಕೋರಿ ಅಣ್ಣನಿಗೆ ರಾಖಿ ಕಟ್ಟಬೇಕಿದ್ದ ಸಹೋದರಿಗೆ ಅಣ್ಣನ ಗೈರು ತೀವ್ರವಾಗಿ ಕಾಡುತ್ತಿದೆ. ಹಾಗಾಗಿ ದೇಶ ಕಾಯುತ್ತಿರುವ ಅಣ್ಣನ ನೆನಪಲ್ಲಿ ರಾಷ್ಟ್ರ ಧ್ವಜಕ್ಕೆ ರಕ್ಷಾಬಂಧನ್ ಕಟ್ಟುವ ಮೂಲಕ ಸಹೋದರ ಪ್ರೀತಿಯ ಜೊತೆಗೆ ರಾಷ್ಟ್ರ ಪ್ರೇಮವನ್ನೂ ಮೆರೆದಿದ್ದಾರೆ ಇಲ್ಲಿನ ಸಹೋದರಿಯೊಬ್ಬರು.
ಕಳೆದ ಐದು ತಿಂಗಳ ಹಿಂದೆ ಭಾರತೀಯ ಸೇನೆಗೆ ಸೇರಿದ ಸಹೋದರ ಬಸವಕಿರಣ ಬೀರಾದರ ಮೂಲತಹ ಭಾಲ್ಕಿ ತಾಲೂಕಿನ ಚೆಂದಾಪುರ ಗ್ರಾಮದವರು. ನಗರದ ಆದರ್ಶ ಕಾಲೋನಿಯ ಮನೆಯಲ್ಲಿ ರಕ್ಷಾ ಬಂಧನ ಹಬ್ಬ ಆಚರಿದರು. ಅಕ್ಕಾ ವಚನಶ್ರೀ ಬಿರಾದಾರ ನಗರದ ಶ್ರೀರಾಮ ಫೈನಾನ್ಸ್ನಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಹೋದರ-ಸಹೋದರಿಯರ ನಡುವಿನ ಬಾಂಧವ್ಯ ವೃದ್ಧಿಸುವ ಹಬ್ಬ ರಕ್ಷಾ ಬಂಧನ ದಿನ ರಾಷ್ಟ್ರ ಧ್ವಜವನ್ನೇ ಸಹೋದರನೆಂದು ಭಾವಿಸಿ ರಾಖಿ ಕಟ್ಟಿದ್ದಾರೆ.
ಸಹೋದರಿ ತಮ್ಮ ಸಹೋದರನ ಕೈಗೆ ರಾಖಿ ಕಟ್ಟುವ ಬದಲು ರಾಷ್ಟ್ರದ ದ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟçದ ಧ್ವಜಕ್ಕೆ ರಾಖಿ ಕಟ್ಟಿ, ಸಹೋದರನ ಯೋಗಕ್ಷೇಮ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದರು. ಸಹೋದರಿಯರ ಸುರಕ್ಷತೆಗಾಗಿ ಸಹೋದರ ಸದಾ ಬದ್ಧನಾಗಿರುತ್ತಾನೆ ಎಂಬುದು ಈ ಹಬ್ಬದ ಸಂಕೇತ. ರಕ್ಷಾ ಬಂಧನ ಹಬ್ಬ ಬೀದರ್ ನಗರದಲ್ಲಿ ಸಂಭ್ರಮದಿ0ದ ಆಚರಿಸಲಾಯಿತು.