ಇಸ್ರೋ ಮುಖ್ಯಸ್ಥ ಸೋಮನಾಥನ್ ಸೇರಿ ಹಲವು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
1 min readಇಸ್ರೋ ಮುಖ್ಯಸ್ಥಎಸ್ ಸೋಮನಾಥನ್,ಖ್ಯಾತ ಹಾಸ್ಯ ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಸಾಹಿತಿ ಲಕ್ಷ್ಮೀಪತಿ ಕೋಲಾರ, ಯಕ್ಷಗಾನದ ಖ್ಯಾತ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ಸೇರಿದಂತೆ 68 ಸಾಧಕರಿಗೆ ಮತ್ತು 10 ಸಂಘಟನೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಸಂಗೀತ ಕ್ಷೇತ್ರದಲ್ಲಿ ಬೆಂಗಳೂರಿನ ಡಾ ನಯನ ಎಸ್ ಮೋರೆ, ಧಾರವಾಡದ ನೀಲಾ ಎಂ ಕೊಡ್ಗಿ, ಬೆಂಗಳೂರಿನ ಶಬ್ಬೀರ್ ಅಹಮದ್, ಚಲನಚಿತ್ರ ಕ್ಷೇತ್ರದಲ್ಲಿ ಬೆಂಗಳೂರಿನ ಡಿಂಗ್ರಿ ನಾಗರಾಜ ಮತ್ತು ಬ್ಯಾಂಕ್ ಜನಾರ್ದನ, ರಂಗಭೂಮಿ ಕ್ಷೇತ್ರದಲ್ಲಿ ಶಿವಮೊಗ್ಗದ ಎ ಜಿ ಚಿದಂಬರ ರಾವ್ ಜಂಬೆ, ಮೈಸೂರಿನ ಪಿ ಗಂಗಾಧರ ಸ್ವಾಮಿ, ಧಾರವಾಡದ ಎಚ್ ಬಿ ಸರೋಜಮ್ಮ, ಬಾಗಲಕೋಟೆಯ ತಯ್ಯಬಖಾನ್ ಎಂ ಇನಾಮದಾರ, ಡಾ ವಿಶ್ವನಾಥ್ ವಂಶಾಕೃತ ಮಠ, ಚಿತ್ರದುರ್ಗದ ಪಿ ತಿಪ್ಪೇಸ್ವಾಮಿ ಅವರಿಗೆ ಲಭಿಸಿದೆ.
ಇವನ್ನು ಶಿಲ್ಪಕಲೆ, ಚಿತ್ರಕಲೆ, ಕರಕುಶಲ ಕ್ಷೇತ್ರಗಳಲ್ಲಿ ದಾವಣಗೆರೆಯ ಟಿ ಶಿವಶಂಕರ್, ರಾಯಚೂರಿನ ಕಾಳಪ್ಪ ವಿಶ್ವಕರ್ಮ, ಬೆಂಗಳೂರಿನ ಮಾರ್ಥಾ ಜಾಕಿಮೋವಿಚ್, ಮೈಸೂರಿನ ಪಿ ಗೌರಯ್ಯ, ಯಕ್ಷಗಾನ ಮತ್ತು ಬಯಲಾಯ ಕ್ಷೇತ್ರಗಳಲ್ಲಿ ಉಡುಪಿಯ ಅರ್ಗೋಡು ಮೋಹನ್ ದಾಸ್ ಶೆಣೈ, ದಕ್ಷಿಣ ಕನ್ನಡದ ಕೆ ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ(ಹಂದಿಜೋಗಿ) ಅವರಿಗೆ ನೀಡಲಾಗುವುದು.
ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಚಾರವಾಗಿ ಐದು ಉಪ ಸಮಿತಿ ಮಾಡಿದ್ದೆವು. ಪ್ರಶಸ್ತಿ ವಿಚಾರವಾಗಿ ಒತ್ತಡವನ್ನು ಯಾರೂ ಹೇರಲಿಲ್ಲ. ಪ್ರಾಮಾಣಿಕವಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಿಗೆ ಐದು ಲಕ್ಷ ರೂಪಾಯಿ ಹಣ ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಿದ್ದೇವೆ ಎಂದು ತಿಳಿಸಿದರು.
2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ. ಇದೇವೇಳೆ ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. 100 ವರ್ಷ ದಾಟಿದ ಇಬ್ಬರಿಗೆ, 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಮತ್ತು ಒಬ್ಬರು ಮಂಗಳ ಮುಖಿ ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ ಎಂದು ಹೇಳಿದರು.
ಪ್ರಶಸ್ತಿ ವಿಜೇತರ ಪಟ್ಟಿ
ಕ್ಷೇತ್ರ: ಸಂಗೀತ/ನೃತ್ಯ
ಕ್ರಸಂ | ಹೆಸರು | ಜಿಲ್ಲೆ |
1 | ಡಾ ನಯನ ಎಸ್ ಮೋರೆ | ಬೆಂಗಳೂರು |
2 | ನೀಲಾ ಎಂ ಕೊಡ್ಗಿ | ಧಾರವಾಡ |
3 | ಶಬ್ಬೀರ್ ಅಹಮದ್ | ಬೆಂಗಳೂರು |
4 | ಡಾ ಎಸ್ ಬಾಳೇಶ ಭಜಂತ್ರಿ | ಬೆಳಗಾವಿ |
ಕ್ಷೇತ್ರ ಸಿನಿಮಾ
ಕ್ರಸಂ | ಹೆಸರು | ಜಿಲ್ಲೆ |
1 | ಡಿಂಗ್ರಿ ನಾಗರಾಜ | ಬೆಂಗಳೂರು |
2 | ಬಿ ಜನಾರ್ದನ್(ಬ್ಯಾಂಕ್ ಜನಾರ್ದನ್) | ಬೆೆಂಗಳೂರು |
ಕ್ಷೇತ್ರ: ರಂಗಭೂಮಿ
ಕ್ರ ಸಂ | ಹೆಸರು | ಜಿಲ್ಲೆ |
1 | ಎಜಿ ಚಿದಂಬರ ರಾವ್ ಜಂಬೆ | ಶಿವಮೊಗ್ಗ |
2 | ಗಂಗಾಧರ ಸ್ವಾಮಿ | ಮೈಸೂರು |
3 | ಎಚ್ ಜಿ ಸರೋಜಮ್ಮ | ಧಾರವಾಡ |
4 | ತಯ್ಯಬಖಾನ್ ಎಂ ಇನಾಮದಾರ | ಬಾಗಲಕೋಟೆ |
5 | ಡಾ ವಿಶ್ವನಾಥ್ ವಂಶಾಕೃತ ಮಠ | ಬಾಗಲಕೋಟೆ |
6 | ಪಿ ತಿಪ್ಪೇಸ್ವಾಮಿ | ಚಿತ್ರದುರ್ಗ |
ಕ್ಷೇತ್ರ: ಯಕ್ಷಗಾನ/ಬಯಲಾಟ
ಕ್ರ ಸಂ | ಹೆಸರು | ಜಿಲ್ಲೆ |
1 | ಅರ್ಗೋಡು ಮೋಹನ್ ದಾಸ್ ಶೆಣೈ | ಉಡುಪಿ |
2 | ಕೆ ಲೀಲಾವತಿ ಬೈಪಾಡಿತ್ತಾಯ | ದಕ್ಷಿಣ ಕನ್ನಡ |
3 | ಕೇಶಪ್ಪ ಶಿಳ್ಳಿಕ್ಯಾತರ | ಕೊಪ್ಪಳ |
4 | ದಳವಾಯಿ ಸಿದ್ದಪ್ಪ(ಹಂದಿಜೋಗಿ) | ವಿಜಯನಗರ |