ರಾಹುಲ್ ಗಾಂಧಿ ಬರ್ತಡೇ: ದೆಹಲಿಯ ಆಶ್ರಯ ಮನೆ ನಿವಾಸಿಗಳಿಗೆ ಏರ್‌ಕೂಲರ್ ವಿತರಣೆ
1 min readಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ತಮ್ಮ 54ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ನಾಯಕನ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ವಿಭಿನ್ನವಾಗಿ ಆಚರಿಸಿದ್ದಾರೆ.
ದೆಹಲಿಯ ಆಶ್ರಯ ಮನೆ ನಿವಾಸಿಗಳಿಗೆ ಏರ್ ಕೂಲರ್‌ಗಳನ್ನು ವಿತರಿಸುವ ಮೂಲಕ ಯುವ ಕಾಂಗ್ರೆಸ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ಮಧ್ಯ ದೆಹಲಿಯ ಆಶ್ರಯ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 70 ಕುಟುಂಬಗಳಿಗೆ ಏರ್ ಕೂಲರ್‌ಗಳನ್ನು ವಿತರಿಸಲಾಗಿದೆ.
ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಅದೇ ಹಣವನ್ನು ಮಾನವೀಯ ಕೆಲಸಗಳಿಗಾಗಿ ವಿನಿಯೋಗಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಮನವಿ ಮಾಡಿದ್ದರು.
ದೆಹಲಿಯಲ್ಲಿ ಬಿಸಿ ಗಾಳಿ ವಾತಾವರಣ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲ ತಾಪಕ್ಕೆ ದೆಹಲಿ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಮಂಗಳವಾರ ರಾತ್ರಿ ವೇಳೆಯ ದೆಹಲಿಯ ತಾಪಮಾನ 12 ವರ್ಷಗಳಲ್ಲೇ ಅತ್ಯಧಿಕ 35.2 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.
2012ರಲ್ಲಿಯೂ ದೆಹಲಿಯಲ್ಲಿ ತಾಪಮಾನ ಏರಿಕೆ ಕಂಡುಬಂದಿದ್ದು, ಆಗ ಕನಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿತ್ತು.