ಆರ್.ಎಲ್. ಜಾಲಪ್ಪ ವಿದ್ಯಾ ಸಂಸ್ಥೆಯಿ0ದ ಪರಿಕರ ಕೊಡುಗೆ
1 min readಆರ್.ಎಲ್. ಜಾಲಪ್ಪ ವಿದ್ಯಾ ಸಂಸ್ಥೆಯಿ0ದ ಪರಿಕರ ಕೊಡುಗೆ
ಕಂದಾಯ ಇಲಾಖೆಗೆ ತಾಂತ್ರಿಕ ಪರಿಕರಗಳ ವಿತರಣೆ
ದೊಡ್ಡಬಳ್ಳಾಪುರ ನಗರದ ದೇವರಾಜ ಅರಸ್ ಎಜುಕೇಶನಲ್ ಟ್ರಸ್ಟ್ನಿಂದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಆರ್.ಎಲ್. ಜಾಲಪ್ಪ ಅವರ 99ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಕಂದಾಯ ಇಲಾಖೆಗೆ ತಾಂತ್ರಿಕ ಪರಿಕರಗಳ ವಿತರಣೆ ಮಾಡಲಾಯಿತು.
ದೊಡ್ಡಬಳ್ಳಾಪುರ ನಗರದ ದೇವರಾಜ ಅರಸ್ ಎಜುಕೇಶನಲ್ ಟ್ರಸ್ಟ್ನಿಂದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಆರ್.ಎಲ್. ಜಾಲಪ್ಪ ಅವರ 99ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಕಂದಾಯ ಇಲಾಖೆಗೆ ತಾಂತ್ರಿಕ ಪರಿಕರಗಳ ವಿತರಣೆ ಮಾಡಲಾಯಿತು. ಸುಮಾರು 4.5 ಲಕ್ಷ ವೆಚ್ಚದ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳನ್ನು ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ. ರಾಜೇಂದ್ರ ಅವರು ತಹಶೀಲ್ದಾರ್ ವಿಭವಿದ್ಯಾ ರಾಥೋಡ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ. ರಾಜೇಂದ್ರ, ಜಾಲಪ್ಪ ಅವರ ಸಾಮಾಜಿಕ ಕಾಳಜಿ ಮತ್ತು ದೂರದೃಷ್ಟಿಯ ಆಲೋಚನೆಗಳಿಗೆ ಪೂರಕವಾಗಿ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಜನಪರ ಆಲೋಚನೆಯನ್ನೂ ಅನುಷ್ಠಾನದ ಭಾಗವಾಗಿಸಿಕೊಂಡಿದೆ ಎಂದರು.
ಅಧಿಕಾರಿಗಳ ಬೇಡಿಕೆಗೆ ಅನುಗುಣವಾಗಿ ಸಂಸ್ಥೆಯಿ0ದ ಅಗತ್ಯ ನೆರವು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಕಚೇರಿ ಪಾಳ್ಯಕ್ಕೆ ಹೊಂದಿಕೊ0ಡ0ತೆ ಇರುವ ಸಾರ್ವಜನಿಕ ಶೌಚಾಲಯವನ್ನು ಪುನಶ್ಚೇತನಗೊಳಿಸಿ ಹೈಟೆಕ್ ಶೌಚಾಲಯವಾಗಿ ಅಭಿವೃದ್ದಿ ಪಡಿಸಲು ಶಿಕ್ಷಣ ಸಂಸ್ಥೆಯಿ0ದ ತೀರ್ಮಾನಿಸಲಾಗಿದ್ದು, ಶೀಘ್ರ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.