Pushpa 2: ಅಲ್ಲು ಅರ್ಜುನ್ ಜೊತೆ ಮತ್ತೇ ಹೆಜ್ಜೆ ಹಾಕಲು ಸಮಂತಾ ಸಜ್ಜು
1 min readಪುಷ್ಪ ಸಿನಿಮಾ ಹಿಟ್ ಆಗಲು ‘ಹುಂ ಅಂಟವಾ ಮಾವ’ ಐಟಂ ಸಾಂಗ್ ಕೂಡ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಮಂತಾ ಈ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದರು. ಪಡ್ಡೆಗಳ ಹೃದಯದಲ್ಲಿ ಚಿಟ್ಟೆ ಹಾರಿಸಿದ್ದರು. ಈ ಹಾಡು ಹಿಟ್ ಆಗಿದ್ದರಿಂದ, ಚಿತ್ರದ ಗೆಲುವಿಗೂ ಅದು ಸಹಕಾರಿ ಆಯಿತು.
ಪುಷ್ಪ 2ನಲ್ಲೂ ಅಂಥದ್ದೊಂದು ಫಾರ್ಮುಲಾವನ್ನು ಮತ್ತೆ ವರ್ಕ್ ಮಾಡುತ್ತಿದ್ದಾರೆ ನಿರ್ದೇಶಕರು. ಪುಷ್ಪ 2ನಲ್ಲೂ ಒಂದು ಐಟಂ ಸಾಂಗ್ ಇರಲಿದ್ದು, ಈ ಬಾರಿಯೂ ಆ ಸ್ಪೆಷಲ್ ಸಾಂಗ್ನಲ್ಲಿ ನಟಿ ಸಮಂತಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಒಂದು ವಿಶೇಷ ಹಾಡಿದ್ದು, ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಎದುರು ನೋಡುತ್ತಿದೆ. ಈ ಹಿಂದೆ ‘ಪುಷ್ಪ ದಿ ರೈಸ್’ ಭಾಗದಲ್ಲಿದ್ದ ‘ಹು ಅಂಟವಾ ಉಹೂ ಅಂಟವಾ’ ಹಾಡಿನಲ್ಲಿ ಸಮಂತಾ ಅದ್ದೂರಿಯಾಗಿ ಕಾಣಿಸಿಕೊಂಡಿದ್ದರು. ಈ ಹಾಡು ಪಡ್ಡೆ ಹುಡಗರ ನಿದ್ದೆಗೆಡಿಸಿದ್ದಲ್ಲದೇ, ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಇದೀಗ ಚಿತ್ರ ತಯಾರಕರು ಪುಷ್ಪ 2 ಚಿತ್ರದ ವಿಶೇಷ ಹಾಡಿಗೆ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಪುಷ್ಪ 1ರ ಹಾಡನ್ನು ಮೆಗಾ ಹಿಟ್ ಮಾಡಿದಂತೆ ಸಮಂತಾ ಈ ಸಾಂಗ್ನ ಕೂಡ ಸಕ್ಸಸ್ ಮಾಡುತ್ತಾರೆ ಎಂಬುದು ನಿರ್ದೇಶಕರ ಯೋಜನೆ.
ಸದ್ಯದ ಮಾಹಿತಿ ಪ್ರಕಾರ ಪ್ರಕಾರ, ನಟಿ ಸಮಂತಾ ‘ಪುಷ್ಪ 2’ ಸಿನಿಮಾದ ವಿಶೇಷ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಹಾಡಿನಲ್ಲಿ ಅಲ್ಲು ಅರ್ಜುನ್ ಜತೆಗೆ ಹೆಜ್ಜೆ ಹಾಕುವುದು ಖಚಿತ ಎನ್ನಲಾಗಿದೆ. ಈ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಕುರಿತಂತೆ ಇಲ್ಲಿಯವರೆಗೂ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.