ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಹೋಗಿ ಪಿಸ್ತೂಲ್ ಕಳೆದುಕೊಂಡ ಪಿಎಸ್‌ಐ
1 min readಬೆಂಗಳೂರು ಕೆಆರ್ ಪುರಂ ಪೊಲೀಸ್ ಠಾಣೆಯ ಪಿಎಸ್‌ಐ ಕಲ್ಲಪ್ಪ ಅವರು ಸರ್ವಿಸ್ ಪಿಸ್ತೂಲ್, 10 ಗುಂಡುಗಳನ್ನು ಕಳೆದುಕೊಂಡಿದ್ದಾರೆ.
ಪ್ರಕರಣವೊಂದರ ತನಿಖೆಗಾಗಿ ದಾವಣಗೆರೆಗೆ ತೆರಳಿದ್ದ ಕಲ್ಲಪ್ಪ ವಾಪಸ್ ಆಗುವ ವೇಳೆ ಚಿತ್ರದುರ್ಗ ಮಾರ್ಗದ ಜಾನುಕೊಂಡ ಬಳಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮಧ್ಯಾಹ್ನ ಊಟ ಮಾಡಿದ್ದಾರೆ.
ಅಲ್ಲಿಂದ ಹೊರಡುವಾಗ ಪಿಸ್ತೂಲ್ ಮತ್ತು ಗುಂಡುಗಳಿದ್ದ ಬ್ಯಾಗ್ ಮರೆತು ಹೋಗಿದ್ದಾರೆ.
ಸರ್ವಿಸ್ ಪಿಸ್ತೂಲ್ ಹಾಗೂ 10 ಗುಂಡುಗಳನ್ನು ಪಿಎಸ್‌ಐ ಕಲ್ಲಪ್ಪ ಕಳೆದುಕೊಂಡಿದ್ದಾರೆ. ಮರೆತುಹೋಗಿದ್ದ ಅವರಿಗೆ ಮಾರ್ಗ ಮಧ್ಯೆ ಪಿಸ್ತೂಲ್ ಮತ್ತು ಗುಂಡುಗಳಿರುವ ಬ್ಯಾಗ್ ಬಿಟ್ಟು ಬಂದಿರುವುದು ನೆನಪಾಗಿದೆ. ಕೂಡಲೇ ವಾಪಸ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದು ವಿಚಾರಿಸಿದ್ದಾರೆ. ಆದರೆ, ಈ ವೇಳೆಗಾಗಲೇ ಪಿಸ್ತೂಲ್ ಹಾಗೂ ಗುಂಡುಗಳಿದ್ದ ಬ್ಯಾಗ್ ನಾಪತ್ತೆಯಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಕೂಡ ಪರಿಶೀಲನೆ ನಡೆಸಿದ್ದು, ಪಿಸ್ತೂಲ್ ಪತ್ತೆಯಾಗಿಲ್ಲ.