ಮರಕೆಲಸ ಕಾರ್ಮಿಕರ ಜೀವನೋಪಾಯಕ್ಕೆ ಆರ್ಥಿಕ ನೆರವು ನೀಡಲು ಪ್ರತಿಭಟನೆ
1 min readಬಾಗೇಪಲ್ಲಿ ಪಟ್ಟಣದ ಮರ ಕೆಲಸ ಮತ್ತು ಕಾರ್ಪೆಂಟರ್ಸ್ ಮತ್ತು ವೆಲ್ಡರ್ ಕಾರ್ಮಿಕರ ಒಕ್ಕೂಟದ ವತಿಯಿಂದ ಗೂಳೂರು ವೃತ್ತದಿಂದ ಪುರಸಭೆ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು, ನಂತರ ಪುರಸಭೆ ಕಚೇರಿ ಮುಂಭಾಗದಲ್ಲಿ ಜಮಯಿಸಿ ಬಾಗೇಪಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಗೂಳೂರು ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ರಸ್ತೆಯ ಮದ್ಯ ಬಾಗದಿಂದ ೪೧ ಅಡಿ ನಿಗದಿ ಮಾಡಿ ತೆರವು ಕಾರ್ಯಾಚರಣೆ ಆರಂಬಿಸಿದ್ದಾರೆ. ಇದರಿಂದಾಗಿ ಕಟ್ಟಡ ಕಾರ್ಮಿಕರ ಮತ್ತು ಕಾರ್ಪೆಂಟರ್ಸ್ ಕಾರ್ಮಿಕರ ಹಿತಕ್ಕಾಗಿ ಸರ್ಕಾರದಿಂದ ಎಲ್ಲಾ ಕಟ್ಟಡ ಕಾರ್ಮಿಕರು ಮತ್ತು ಕಾರ್ಪೆಂಟರ್ಸ್ಗಳಿಗೆ ಉಚಿತವಾಗಿ ಸುಸರ್ಜಿತವಾದ ಬಡಾವಣೆಯನ್ನು ನಿರ್ಮಿಸಿಕೊಳ್ಳಲು ಸೂಕ್ತ ಸ್ಥಳವನ್ನು ನೀಡಿ ಆರ್ಥಿಕ ಸಹಾಯದಿಂದ ಮನೆ ನಿರ್ಮಾಣಮಾಡಿ ಕೊಳ್ಳಲು ಆನುಕೂಲ ಮಾಡಿಕೊಡಬೇಕು.. ನಮ್ಮ ಪಕ್ಕದ ಆಂಧ್ರ ಪ್ರದೇಶದ ಹಿಂದೂಪುರ, ಗೋರಂಟ್ಲ ಮತ್ತಿತರ ಕಡೆ ಕಾರ್ಮಿಕರಿಗೆ ಉಚಿತ ಸ್ಥಳ ನೀಡಿದ ರೀತಿಯಲ್ಲಿ ಈಗಿನ ಸರ್ಕಾರವು ಮಾನವೀಯ ದೃಷ್ಟಿಯಿಂದ ನಮ್ಮ ಮರ ಕೆಲಸ ಕಾರ್ಮಿಕರಿಗೆ ಉಚಿತ ನಿವೇಶನ ನೀಡಿ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ನೀಡಬೇಕೆಂದು ಒತ್ತಾಯಿಸಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು..
ಈ ಸಂಧರ್ಭದಲ್ಲಿ ತಾಲ್ಲೂಕು ಕಟ್ಟಡ ಕಾರ್ಮಿಕರ ಹಾಗೂ ಮರಕೆಲಸ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು….