ದಲಿತ ಸಂಘಟನೆ ಒಕ್ಕೂಟದಿಂದ ನಂಜನಗೂಡಿನಲ್ಲಿ ಪ್ರತಿಭಟನೆ
1 min readದಲಿತ ಯುವಕನಿಗೆ ಹೇರ್ ಕಟ್ ನಿರಾಕರಿಸಿದವನಿಗೆ ಶಿಕ್ಷೆಯಾಗಲಿ
ದಲಿತ ಸಂಘಟನೆ ಒಕ್ಕೂಟದಿಂದ ನಂಜನಗೂಡಿನಲ್ಲಿ ಪ್ರತಿಭಟನೆ
ನಂಜನಗೂಡು ತಾಲ್ಲೂಕು ದಲಿತ ಸಂಘಟನೆ ಒಕ್ಕೂಟದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮೈಸೂರು ಮತ್ತು ಊಟಿ ರಸ್ತೆಯನ್ನು ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ದಲಿತ ಯುವಕನಿಗೆ ಹೇರ್ ಕಟ್ ಮಾಡಲು ನಿರಾಕರಿಸಿ, ಇರಿದು ಕೊಂದಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಲಾಯಿತು.
ದಲಿತ ಯುವಕನಿಗೆ ಹೇರ್ ಕಟ್ ಮಾಡಲು ನಿರಾಕರಿಸಿ, ಇರಿದು ಕೊಂದಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಂಜನಗೂಡು ದಲಿತ ಸಂಘಟನೆಗಳಿ0ದ ಒತ್ತಾಯಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿದೆ, ಸಂವಿಧಾನ ಜಾರಿಯಾಗಿ 75 ವರ್ಷ ತುಂಬಿದೆ ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಅಸ್ಪಶ್ಯತೆ ಆಚರಣೆ ಮಾಡುತ್ತಿರುವುದು ದುರಂತ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಇಂತಹ ದುರ್ಘಟನೆಗಳು ನಡೆದಾಗಲೆಲ್ಲ ಸರ್ಕಾರಗಳು ತಾತ್ಕಾಲಿಕವಾಗಿ ಕಾನೂನು ಪರಿಹಾರವಾಗಿ ಕಂಡುಕೊ0ಡು ಮುಂದೆ ಸಾಗಿದೆ ಅಷ್ಟೇ, 70ರ ದಶಕದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ವಿಶೇಷ ಕಾಯ್ದೆ ಜಾರಿಗೆ ತಂದಿದರು ಪ್ರತಿನಿತ್ಯ ದೌರ್ಜನ್ಯಗಳು ನಡೆಯುತ್ತಲೇ ಇದೆ. ಇದಕ್ಕೆ ಸ್ಪಷ್ಟ ಉದಾಹರಣೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಘನಾಳ ಗ್ರಾಮದ ಪರಿಶಿಷ್ಟ ಜಾತಿಯ ಯುವಕನನ್ನು ಅದೇ ಗ್ರಾಮದ ಮುದುಕಪ್ಪ ಅಂದಪ್ಪ ಹಡಪಾದಪ್ಪ ಎಂಬುವವರು ಜಾತಿಯ ಹೆಸರಿನಲ್ಲಿ ಕೊಲೆ ಮಾಡಿರುವುದು ಸಾಕ್ಷಿಯಾಗಿದೆ ಎಂದರು.
ಯಾವುದೇ ಸರ್ಕಾರ ಬಂದರು ಅಸ್ಪಶ್ಯತೆ ಮಾತ್ರ ಉಳಿದುಕೊಂಡಿದೆ. ಅನೇಕ ಮುಖ್ಯಮಂತ್ರಿಗಳು ಅಸ್ಪಶ್ಯತೆ ತಡೆ ದೌರ್ಜನ್ಯ ಕಾನೂನು ಬಿಗಿಗೊಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಘಟನೆಗಳು ನಡೆದಾಗ ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕೆಂದು ಅನೇಕ ವರ್ಷಗಳಿಂದ ಸಂಘಟನೆಗಳು ಹೋರಾಡುತ್ತಲೇ ಇದ್ದರೂ ಉಪಯೋಗವಾಗಿಲ್ಲ ಎಂದರು.
ಈ ಘಟನೆಗೆ ಸಂಬ0ಧಿಸಿ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಸರ್ಕಾರ ಕಾನೂನು ತಿದ್ದುಪಡಿ ಮಾಡಿ ತಪ್ಪಿತಸ್ಥ ವ್ಯಕ್ತಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ದಲಿತ ಸಂಘಟನೆಯ ಮುಖಂಡರು ಒತ್ತಾಯಿಸಿದರು. ನಂತರ ತಹಸಿಲ್ದಾರ್ ಶಿವಕುಮಾರ್ ಕಾಸ್ನೂರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಒಕ್ಕೂಟದ ತಾಲೂಕು ಅಧ್ಯಕ್ಷ ನಗರ್ಲೆ ವಿಜಯಕುಮಾರ್, ಕಾರ್ಯ ಬಸವಣ್ಣ, ಅಭಿ ನಾಗಭೂಷಣ್ ಪ್ರಶಾಂತ್ ಜಯಶಂಕರ್ ಇದ್ದರು.