ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕನ ಶವ ಇಟ್ಟು ಕಾರ್ಖಾನೆ ಮುಂದೆ ಪ್ರತಿಭಟನೆ
1 min readನಂಜನಗೂಡು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಹಾರಿಜನ್ ಕಾರ್ಖಾನೆಯ ಮುಂದೆ ಮೃತ ಕಾರ್ಮಿಕನ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ನಂಜನಗೂಡು ಶ್ರೀರಾಂಪುರ ಬಡಾವಣೆಯ ನಿವಾಸಿ ಮೃತ ಕಾರ್ಮಿಕ ಸುರೇಶ್, ಕಳೆದ ೨೫ ವರ್ಷಗಳಿಂದ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಖಾನೆಯಲ್ಲಿ ಮಿಷಿನ್ ಆಪರೇಟರ್ ಆಗಿದ್ದರು. ಸಾಕಷ್ಟು ಬಾರಿ ಸುರೇಶ್ ಉದ್ಯೋಗ ಕಾಯಂ ಮಾಡುವಂತೆ ಪ್ರತಿಭಟನೆ ನಡೆಸಿದ್ದರು. ೨೫ ವರ್ಷಗಳ ಕಾಲ ಕೆಲಸ ಮಾಡಿದರೂ ಕಾಯಂ ಮಾಡದ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಕಾರ್ಮಿಕ ಸುರೇಶನಿಗೆ ಕಳೆದ ಆರು ತಿಂಗಳಿನಿAದ ವೇತನ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದರು. ಕಾರ್ಖಾನೆ ಸಿಬ್ಬಂದಿ ಮೃತ ಕಾರ್ಮಿಕ ಸುರೇಶನಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಕಾರ್ಖಾನೆ ಮಾಲೀಕರು ಮತ್ತು ಸಿಬ್ಬಂದಿ ಕಿರುಕುಳಕ್ಕೆ ಮೃತ ಕಾರ್ಮಿಕ ಸುರೇಶ್ ಕುಗ್ಗಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಮನನೊಂದಿದ್ದರು. ನೆನ್ನೆ ಏಕಾಏಕಿ ಕುಸಿದು ಬಿದ್ದು ಸುರೇಶ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ಕಾರ್ಮಿಕ ಸುರೇಶ್ ಸಾವಿಗೆ ಕಾರ್ಖಾನೆ ಮಾಲೀಕರು ಮತ್ತು ಸಿಬ್ಬಂದಿ ಕಾರಣ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಸುರೇಶ್ ಸಾವಿಗೆ ಕಾರಣವಾಗಿರುವ ಕಾರ್ಖಾನೆ ಮಾಲೀಕರು ೨೦ ಲಕ್ಷ ರೂ. ಪರಿಹಾರ ನೀಡಬೇಕು. ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಕಾಯಂ ಉದ್ಯೋಗ ನೀಡಬೇಕು. ಪರಿಹಾರ ನೀಡುವ ತನಕ ಶವ ಎತ್ತುವುದಿಲ್ಲ ಎಂದು ಪಟ್ಟು ಹಿಡಿದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು