ಹಾಲು ಪ್ರೋತ್ಸಾಹ ಧನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ
1 min readಹಾಲು ಪ್ರೋತ್ಸಾಹ ಧನ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ
ಬಾಗೇಪಲ್ಲಿಯಲ್ಲಿ ಸಿಪಿಎಂ ನೇತೃತ್ವದಲ್ಲಿ ಹೈನು ರೈತರ ಹೋರಾಟ
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಬರ ಕಾಡುತ್ತಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಇನ್ನು ಜಾನುವಾರುಗಳ ಮೇವಿಗೆ ರೈತರು ತೀವ್ರ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಹೈನು ರೈತರ ಹಾಲಿನ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ ಆರೋಪಿಸಿದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಬರ ಕಾಡುತ್ತಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಇನ್ನು ಜಾನುವಾರುಗಳ ಮೇವಿಗೆ ರೈತರು ತೀವ್ರ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಹೈನು ರೈತರ ಹಾಲಿನ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ ಆರೋಪಿಸಿದರು. ಬರಗಾಲದಂಥ ಸಂಕಷ್ಟದ ಸಂದರ್ಭದಲ್ಲಿ ಹೈನು ರೈತರಿಗೆ ಆದಾಯದ ಮೂಲ ಹೈನುಗಾರಿಕೆ. ಆದರೆ ಕಳೆದ ಏಳು ತಿಂಗಳಿAದ ಸರಕಾರ ಪ್ರೊತ್ಸಾಹ ಧನ ಬಿಡುಗಡೆ ಮಾಡಿಲ್ಲ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದ ಜಿ.ವಿ.ಶ್ರೀರಾಮ ರೆಡ್ಡಿ ಪುತ್ಥಳಿ ಮುಂದೆ ಪ್ರತಿಭಟನೆ ಮಾಡಿ ಮಾತನಾಡಿ, ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ ೭೦೦ ಕೋಟಿ ರೂಪಾಯಿ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಬರದಿಂದ ಕಂಗೆಟ್ಟ ರೈತರ ಹಾಹಾಕಾರ ಒಂದೆಡೆಯಾದರೆ, ಹಾಲಿನ ಸಬ್ಸಿಡಿಯನ್ನೂ ಕೊಡದೇ ದೋಖಾ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ. ಹಾಲು ಉತ್ಪಾದಕರ ಸಬ್ಸಿಡಿ ಹಣ ೭೦೦ ಕೋಟಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಹಾಲಿನ ಮಾರಾಟ ಬೆಲೆ ಹೆಚ್ಚಿಸಿರುವ ರಾಜ್ಯ ಸರ್ಕಾರ ರೈತರಿಂದ ಖರೀದಿಸುತ್ತಿರುವ ಹಾಲಿನ ಭರವನ್ನು ಕಡಿತಗೊಳಿಸಿದೆ. ಅಲ್ಲದೆ ಪಶು ಆಹಾರ ಸೇರಿದಂತೆ ಇತರೆ ಬೆಲೆ ಗಗನಕ್ಕೇರಿದ್ದು, ಇಂತಹ ಸ್ಥಿತಿಯಲ್ಲಿ ರೈತರು ಹೈನುಗಾರಿಕೆಯನ್ನೇ ಬಿಟ್ಟು ದೂರ ಸರಿಯುವ ಆಲೋಚನೆ ಮಾಡುವ ಸ್ಥಿತಿಯನ್ನು ರಾಜ್ಯ ಸರ್ಕಾರ ತೊಂದೊಡ್ಡಿದೆ. ಜಿಲ್ಲೆಯಲ್ಲಿ ಮಳೆ ಇಲ್ಲದೆ ಸತತ ಬರ ಕಾಡುತ್ತಿರುವ ಪರಿಣಾಮ ಬೆಳೆ ಕೈಗೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಕಷ್ಟದ ಸಮಯದಲ್ಲಿ ಹೈನುಗಾರಿಕೆ ರೈತರ ಜೀವನಕ್ಕೆ ನೆರವಾಗಹಿತ್ತು. ಆದರೆ ರಾಜ್ಯ ಸರ್ಕಾರ ರೈತರ ಆ ನೆರವನ್ನೂ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕೂಡಲೇ ರೈತರಿಗೆ ನೀಡಬೇಕಾದ ಪ್ರೋತ್ಸಾಹಧನ ನಡಿಯುವ ಜೊತೆಗೆ ರೈತರಿಂದ ಖರೀದಿ ಮಡಾಉವ ಹಾಲಿನ ಬೆಲೆ ಕಡಿತಗೊಳಿಸಿರುವುದನ್ನು ವಾಪಸ್ ಪಡೆದು ರೈತರಿಗೆ ಎಂದಿನ ಬೆಲೆಯಂತೆ ಹಾಲು ಖರೀದಿಸಬೇಕು ಎಂದು ಆಗ್ರಹಿಸಿದರು.
ಬಾಗೇಪಲ್ಲಿ ತಾಲ್ಲೂಕು ಸಿಪಿಐಎಂ ಕಾರ್ಯದರ್ಶಿ ಎಂ.ಎನ್.ರಘುರಾಮ ರೆಡ್ಡಿ ಮಾತನಾಡಿ, ಹಸುವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವೂ ಸಿಗುತ್ತಿಲ್ಲ. ಇಂತಹ ಕಡು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಕೂಡಲೇ ರಾಜ್ಯ ಸರಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡ
ಚನ್ನರಾಯಪ್ಪ, ಡಿ.ಅಶ್ವತ್ತನಾರಾಯಣ, ನರಸಿಂಹಾರೆಡ್ಡಿ, ಜಿ. ಮುಸ್ಥಾಪ, ಜಿ. ಕೃಷ್ಣಪ್ಪ, ಚೆಂಚುರಾಯನಪಲ್ಲಿ ಮುನಿಯಪ್ಪ, ಕೃಷ್ಣಪ್ಪ. ಚಿನಾಗಪ್ಪ, ಅಂಜಿನಪ್ಪ ಇದ್ದರು.