ಎನ್ ಎಂ ಒ ಪಿ ಎಸ್ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ
1 min readಎನ್ ಎಂ ಒ ಪಿ ಎಸ್ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ
ರಾಜ್ಯ ಸರ್ಕಾರಿ ಎನ್ ಎಂ ಒ ಪಿ ಎಸ್ ನೌಕರರ ಸಂಘದಿ0ದ ಮನವಿ
ಎನ್‌ಎಮ್‌ಒಪಿಎಸ್ ರಾಷ್ಟಿಯ ಕಾರ್ಯಕಾರಿಣಿ ನಿರ್ಧಾರದಂತೆ ಎನ್ ಎಂ ಒ ಪಿ ಎಸ್ ಮತ್ತು ಯುಪಿಎಸ್ ಜಾರಿಗೆ ತರಲು ಉದ್ದೇಶಿಸುವ ಕ್ರಮ ಹಿಂಪಡೆದು ಎನ್ ಎಂ ಒ ಪಿ ಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್ ಎಂ ಒ ಪಿ ಎಸ್ ನೌಕರರ ಸಂಘ ಇಂದು ಪ್ರತಿಭಟನೆ ನಡೆಸಿತು.
ಚಿಕ್ಕಬಳ್ಳಾಪುರ ನಗರದ ತಾಲೂಕು ಕಚೇರಿ ಮುಂದೆ ರಾಜ್ಯ ಸರ್ಕಾರಿ ಎನ್ ಎಂ ಒ ಪಿ ಎಸ್ ನೌಕರರ ಸಂಘದಿ0ದ ಕಳೆದ ಹತ್ತು ವರ್ಷಗಳಿಂದ ಹಳೆಯ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವ ವಿಷಯದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರ ಎನ್ ಎಂ ಒ ಪಿ ಎಸ್ ಯೋಜನೆ ಬದಲಾಯಿಸಿ, ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ತರಲು ತೀರ್ಮಾನಿಸಿದೆ. ಆದರೆ ಇದರಲ್ಲಿ ಸರ್ಕಾರಿ ನೌಕರರ ಬದುಕಿಗೆ ಯಾವುದೇ ಭದ್ರತೆಯ ಅಂಶಗಳು ಹೊಂದಿಲ್ಲ ಎಂದು ರಾಜ್ಯಮಟ್ಟದಲ್ಲಿ ಇಂದು ಎನ್.ಎಮ್.ಒ.ಪಿ.ಎಸ್ ಸಂಘಟನೆ ಒಪಿಎಸ್ ಜಾರಿಗೊಳಿಸುವಂತೆ ರಾಷ್ಟç ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಕಛೇರಿ ಮುಂದೆ ರಾಜ್ಯ ಸರ್ಕಾರಿ ಎನ್ ಎಂ ಒ ಪಿ ಎಸ್ ನೌಕರರ ಸಂಘ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರಿ ನೌಕರರ ಬೇಡಿಕೆಯ ಮನವಿ ಅಧಿಕಾರಿಗಳ ಗಮನಕ್ಕೆ ತಂದು ರಾಜ್ಯ ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುವುದಾಗಿ ತಾಲೂಕು ಕಛೇರಿಯ ಶೀರಸ್ತೆದಾರ ಮಲ್ಲಿಕಾ ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರಿ ಎನ್ ಎಂ ಒ ಪಿ ಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿಷ್ಣುವರ್ಧನ್, ಬಾಲರಾಜ್, ನಾರಾಯಣಸ್ವಾಮಿ, ಶಶಿಧರ್, ಸುನಿಲ್, ನಾಗರಾಜಪ್ಪ, ಕೆ.ಜೆ ಶ್ರೀನಿವಾಸ್, ಚಂದ್ರಕಲಾ, ಕಸ್ತೂರಿ, ಪದ್ಮಾವತಿ ಇದ್ದರು.