ಮಾಲೂರಿನಲ್ಲಿ ಡಿಎಸ್‌ಎಸ್ ಕಾರ್ಯಕರ್ತರಿಂದ ಪ್ರತಿಭಟನೆ
1 min readಜಿಲ್ಲಾ ಉಪನಿರ್ದೇಶಕ ಡಾ.ತುಳಸಿ ರಾಮ್ ವರ್ಗಾವಣೆಗೆ ಆಗ್ರಹ
ಮಾಲೂರಿನಲ್ಲಿ ಡಿಎಸ್‌ಎಸ್ ಕಾರ್ಯಕರ್ತರಿಂದ ಪ್ರತಿಭಟನೆ
ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಆಗ್ರಹ
ಹೈನುಗಾರಿಕೆ ಮತ್ತು ರೈತರನ್ನು ಶೋಷಣೆ ಮಾಡುತ್ತಿರುವ ಜಿಲ್ಲಾ ಉಪನಿರ್ದೇಶಕ ಡಾ.ತುಳಸಿ ರಾಮ್ ಮತ್ತು ಮಾಲೂರು ಸಹಾಯಕ ನಿರ್ದೇಶಕಿ ವೀಣಾ ಅವರನ್ನು ಕರ್ತವ್ಯದಿಂದ ಅಮಾನತು ಗೊಳಿಸಿ ಪಶು ಇಲಾಖೆಯಲ್ಲಿ ನಡೆದಿರುವ ಅಕ್ರಮಗಳನ್ನು ವಿಶೇಷ ತನಿಖಾ ಸಂಸ್ಥೆ ನೇಮಿಸಿ ತನಿಖೆ ನಡೆಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಮಾಲೂರು ಪಟ್ಟಣದ ಪಶು ಸಂಗೋಪನಾ ಇಲಾಖೆ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ವಿಜಿ ನೇತೃತ್ವದಲ್ಲಿ ಹಸು, ಕೋಳಿ, ಎಮ್ಮೆ, ಮೇಕೆಯೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮಾತನಾಡಿದ ಎಸ್.ಎಂ. ವೆಂಕಟೇಶ್, ಕೋಲಾರ ಜಿಲ್ಲೆಗೆ ಪಶು ಸಂಗೋಪನ ಮತ್ತು ಪಶು ವೈದ್ಯಕೀಯ ಇಲಾಖೆಗೆ ಉಪ ನಿದೇರ್ಶಕರಾಗಿ ಡಾ.ತುಳಸಿ ರಾಮ್ ಬಂದಾಗಿನಿoದ ಇಲಾಖೆಯಲ್ಲಿ ರಾಷ್ಟಿಯ ಜಾನುವಾರು ವಿಷನ್, ಕುರಿ, ಹಂದಿ, ಗೋಶಾಲೆ-ಉತ್ತೇಜನ ಅಮೃತ ಯೋಜನೆ, ಗೋಶಾಲೆ ನಿರ್ವಹಣೆಯಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ಯೋಜನೆಗಳನ್ನು ನಿಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವ ಉಪ ನಿರ್ದೇಶಕ ಡಾ.ತುಳಸಿರಾಮ್ ಹಾಗೂ ರೈತರ ಬಳಿ ಅಸಧ್ಯವಾಗಿ ವರ್ತಿಸುತ್ತಿದ್ದಾರೆ. ಇಲಾಖೆಕೆಗೆ ಸಮಯಕ್ಕೆ ಸರಿಯಾಗಿ ಬಾರದೆ ಜಾನುವರುಗಳಿಗೆ ಹಾಗೂ ಹೈನುಗಾರಿಕೆಗೆ
ಹಸು, ಎಮ್ಮೆಗಳ ರೋಗಗಳೀಗೆ ಸಂಬoಧಿಸಿ ವೀಣಾ ರವರು ಕ್ರಮ ಕೈಗೊಳ್ಳದೆ ಇರುವುದರಿಂದ ಇವರನ್ನು ಕರ್ತವ್ಯದಿಂದ ಅಮಾನಾತುಗೊಳಿಸಬೇಕೆಂದು ಒತ್ತಾಯಿಸಿದರು.
2021 ರಿಂದ 2024 ರವರೆಗೆ ಕೋಲಾರ ಜಿಲ್ಲಾ ಪಶು ಪಾಲನಾ ಮತ್ತು ಪಶು ಇಲಾಖೆಯಲ್ಲಿ ನಡೆದಿರುವ ರಾಷ್ಟಿಯ ಜಾನುವಾರು ವಿಷನ್, ಗೋಶಾಲೆ-ಹೈನುಗಾರಿಕೆ, ಉತ್ತೇಜನ ಅಮೃತ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಶೇಷ ತನಿಖಾ ಸಂಸ್ಥೆಯಿoದ ತನಿಖೆ ಮಾಡಿ ತಪ್ಪಿಸ್ತರ ಮೇಲೆ ಕಾನೂನು ಕ್ರಮ ಜರಿಗಿಸಬೇಕು. ಅಕ್ರಮಗಳಿಗೆ ಕಾರಣವಾಗಿರುವ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಲೂರು ಪಶುಸಂಗೋಪನ ಇಲಾಖೆಯಲ್ಲಿ ಸುಮಾರು ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಾಗಿದ್ದು, ಆ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ಮಾಲೂರು ತಾಲ್ಲೂಕು, ಪಶು ಸಂಗೋಪನ ಮತ್ತು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು ಸಮಯಕ್ಕೆ ಸರಿಯಾಗಿ ಕಛೇರಿಗೆ ಬರದೆ ಹೈನುಗಾರರಿಗೆ ಮತ್ತು ರೈತರಿಗೆ ತೊಂದರೆಯಾಗಿದ್ದು, ಸಹಾಯಕ ನಿರ್ದೇಶಕರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಖಜಾಂಚಿ ಶ್ಯಾಮಣ್ಣ, ಡಿ.ಎನ್. ನಾರಾಯಣಸ್ವಾಮಿ, ಹಾರೋಹಳ್ಳಿ ಮುನಿರಾಜು, ಗಾಂಧಿ ವೃತ್ತ ಬಾಬು, ಉಳ್ಳೇರಹಳ್ಳಿ ಮುನಿರಾಜು, ಯಶವಂತಪುರ ಮುನಿರಾಜು, ತಿರುಮಲೇಶ್, ಅಂಬರೀಶ್, ವರದಪುರ ನಾರಾಯಣಸ್ವಾಮಿ, ಬಿಂಗೀಪುರ ವೆಂಕಟೇಶ್ ಇದ್ದರು.