ಚೇಳೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
1 min readಚೇಳೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಆಗ್ರಹ
ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಮನವಿ
ಚೇಳೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರಮಣ ನೇತೃತ್ವದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಚೇಳೂರು ಕೃಷಿ ಮಾರುಕಟ್ಟೆ ಸಮೀಪದಿಂದ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ, ಘೋಷಣೆ ಕೂಗಲಾಯಿತು.
ಚೇಳೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರಮಣ ನೇತೃತ್ವದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಚೇಳೂರು ಕೃಷಿ ಮಾರುಕಟ್ಟೆ ಸಮೀಪದಿಂದ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ, ಘೋಷಣೆ ಕೂಗಲಾಯಿತು. ಬಳಿಕ ತಾಲ್ಲೂಕು ಕಚೇರಿ ಮುಂದೆ ನಡೆದ ಭರಣಿಯಲ್ಲಿ ಕಡ್ಡೀಲು ವೆಂಕಟರಮಣ ಮಾತನಾಡಿ, ಚೇಳೂರಿಗೆ ಹೊಂದಿಕೊoಡಿರುವ ಸರ್ಕಾರಿ ಜಮೀನು ಅಧಿಕಾರಿಗಳ ಸಹಾಯದಿಂದ ಖಾಸಿಗಿ ವ್ಯಕ್ತಿಗಳು ಅಕ್ರಮವಾಗಿ ಪಡೆದು ಐಶರಾಮಿ ಜೀವನ ಮಾಡುತ್ತಿದ್ದಾರೆ. ಕೂಡಲೇ ಸಂಬoಧಿಸಿದ ಅಧಿಕಾರಗಳು ಎಚ್ಚೆತ್ತುಕೊಂಡು ಸರ್ಕಾರದ ಆಸ್ತಿ ಕಾಪಾಡಬೇಕು ಎಂದರು.
ಚೇಳೂರು ಸ.ನಂ. 37 ರಲ್ಲಿ 3 ಎಕರೆ 30 ಗುಂಟೆ ಇದು, ಸರ್ಕಾರಿ ಜಮೀನು ಹೆಚ್ಚು ಬೆಲೆ ಬಾಳುವ ಜಮೀನಾಗಿದೆ. ಇದರಲ್ಲಿ ಖಾಸಗಿಯವರು ಅಕ್ರಮವಾಗಿ 30 ಗುಂಟೆಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಅದನ್ನು ಕೂಡಲೇ ನಿಲ್ಲಿಸಿ ಬಡವರಿಗೆ ಖಾಲಿ ನಿವೇಶನೆಗಳಿಗಾಗಿ ಮೀಸಲಿಟ್ಟು, ನಿವೇಶನಗಳನ್ನು ಹಂಚಬೇಕು ಎಂದು ಒತ್ತಾಯಿಸಿದರು. ತಾಲ್ಲೂಕಿಗೆ ಸಂಬoದಿಸಿದ ಎಲ್ಲಾ ಸರ್ಕಾರಿ ಕಚೇರಿಗಳು ಕೂಡಲೇ ಸ್ಥಾಪಿಸಬೇಕು, ಚೇಳೂರಿನಲ್ಲಿ ಅಂಬೇಡ್ಕರ್ ಭವನ ಮತ್ತು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು. ಸ.ನಂ.91 ರಲ್ಲಿ ಬಡವರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ಚೇಳೂರು ಆಸ್ಪತ್ರೆಗೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಿ ಮೇಲ್ದರ್ಜೆಗೆ ಏರಿಸಬೇಕು, ರಾಷ್ಟಿಕೃತ ಬ್ಯಾಂಕ್ ಸ್ಥಾಪಿಸಬೇಕು, ಪ.ಜಾತಿ ಮತ್ತು ಪ.ಪಂ ಕಾಲೋನಿಗಳಿಗೆ ಸ್ಮಶಾನ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಈ ವೇಳೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ದಲಿತ ಸಮಿತಿಗಳ ಕೋಡಿಗಲ್ ರಮೇಶ್, ವಿ. ಅಮರ್, ಬಿ.ವಿ. ವೆಂಕಟರಮಣ, ಎಂ.ಜಿ. ಕಿರಣ್ ಕುಮಾರ್, ಜಿ. ನರಸಿಂಹಪ್ಪ, ತಹಶಿಲ್ದಾರ್ ಶ್ರೀನಿವಾಸ ನಾಯುಡು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಮಚಂದ್ರ, ಎಂ. ಈಶ್ವರಪ್ಪ, ಪಿ.ಮಂಜುನಾಥ, ಪ್ರೇಮ್, ಶಂಕರ, ಶ್ರೀನಾಥ್ ಇದ್ದರು.