22 ರಂದು ದೆಹಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ
1 min read22 ರಂದು ದೆಹಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ
21 ರಂದು ರೈತ ಹುತಾತ್ಮ ದಿನಾಚರಣೆ
ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ
ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಮಣಿದ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯಿದೆ ವಾಪಸ್ ಪಡೆಯುವುದಾಗಿ ಬರವಸೆ ನೀಡಿದ್ದರು. ಆದ್ರೆ ಚುನಾವಣೆ ಮುಗಿದ ಮೇಲೆ ಅದ್ಯಾವುದಕ್ಕೂ ಗಮನ ನೀಡದ ಕೇಂದ್ರ ಸರ್ಕಾರದ ವಿರುದ್ದ ಜುಲೈ 22 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ನೂರಾರು ಜನ ಬಾಗವಹಿಸುತ್ತಿರುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವಳ್ಳಿ ಲೋಕೇಶ್ ಗೌಡ ತಿಳಿಸಿದರು.
ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಮಣಿದ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯಿದೆ ವಾಪಸ್ ಪಡೆಯುವುದಾಗಿ ಬರವಸೆ ನೀಡಿದ್ದರು. ಆದ್ರೆ ಚುನಾವಣೆ ಮುಗಿದ ಮೇಲೆ ಅದ್ಯಾವುದಕ್ಕೂ ಗಮನ ನೀಡದ ಕೇಂದ್ರ ಸರ್ಕಾರದ ವಿರುದ್ದ ಜುಲೈ 22 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ನೂರಾರು ಜನ ಬಾಗವಹಿಸುತ್ತಿರುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಳುವಳ್ಳಿ ಲೋಕೇಶ್ ಗೌಡ ತಿಳಿಸಿದರು. ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಸಂಚಾಲಕ ಬಳುವನಹಳ್ಳಿ ಲೋಕೇಶ್ ಗೌಡ ಮಾತನಾಡಿ, ರೈತರ ಮೂರು ಕೃಷಿ ಕಾಯಿದೆಗಳ ವಾಪಸ್‌ಗೆ ಒತ್ತಾಯಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅನಿರ್ದಿಷ್ಟ ಧರಣಿ ನಡೆಸಿ 300ಕ್ಕೂ ಹೆಚ್ಚು ಜನ ಗಾಯಗೊಂಡು, ಒಬ್ಬರು ಹುತಾತ್ಮರಾದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಯಿದೆ ವಾಪಸ್ ತೆಗೆದುಕೊಳ್ಳುವುದಾಗಿ ಬರವಸೆ ನೀಡಿದ್ದರು. ಆದರೆ ನಂತರ ಮಾತಿಗೆ ತಪ್ಪಿದ್ದಾರೆ ಎಂದು ಆರೋಪಿಸಿದರು.
ಜತೆಗೆ ಮತ್ತಷ್ಟು ಬೇಡಿಕೆಗಳ ಈಡೇರಿಸಲು ಆಗ್ರಹಿಸಿ 22 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುನ್ನ ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ 44ನೇ ರೈತ ಹುತಾತ್ಮ ದಿನಾಚರಣೆ ನಡೆಸಲಾಗುತಿದೆ. ರಾಜ್ಯದ ನಾಲ್ಕೆದು ರೈತ ಸಂಘಟನೆಗಳ ರಾಜ್ಯ ನಾಯಕರು ಪಾಲ್ಗೊಂಡು ರೈತರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದರು.