ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
1 min readಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರದ ಹಿಂದು ಪರ ಸಂಘಟನೆಗಳಿ0ದ ಬೃಹತ್ ಮೆರವಣಿಗೆ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ರಕ್ಷಣೆಗೆ ಅಗ್ರಹಿಸಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಹಿಂದೂಗಳ ರಕ್ಷಣೆಗಾಗಿ ನಾವೆಲ್ಲ ಹಿಂದೂ-ನಾವೆಲ್ಲ ಒಂದು ನಾವೆಲ್ಲರೂ ಒಗ್ಗೂಡೋಣ ಎಂಬ ಘೋಷಣೆಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಹಿಂದೂ ಹಿತ ರಕ್ಷಣಾ ವೇದಿಕೆಯಿಂದ ಚಿಕ್ಕಬಳ್ಳಾಪುರದ
ಬಲಮುರಿ ವೃತ್ತದಿಂದ ಬಜಾರ್ ರಸ್ತೆ,ಗಂಗಮ್ಮಗುಡಿ ರಸ್ತೆ, ಎಂ. ಜಿ. ರಸ್ತೆ, ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ, ಭಾರತದಲ್ಲಿ ಪ್ರತಿಭಟನೆ, ಹಿಂದುಗಳನ್ನು ರಕ್ಷಣೆ ಮಾಡಲು ಹಿಂದುಗಳು ಸಂಘಟಿತರಾಗಬೇಕು, ಹಿಂದು ಯುವಕರು ಹಿಂದುಗಳನ್ನು ರಕ್ಷಣೆ ಮಾಡಲು ಧನಸಹಾಯ ನಾವೇ ಮಾಡಬೇಕು ಎಂದು ಕರೆ ನೀಡಿದರು
ಓಂಕಾರೇಶ್ವರ ಆಶ್ರಮದ ಕಾಳಿ ತನಯ ಉಮಾ ಮಹೇಶ್ವರಿ ಸ್ವಾಮೀಜಿ ಮಾತನಾಡಿ, ಹಿಂದುಗಳು ಒಂದಾಗಬೇಕು ಹಿಂದೂ ನಾವೆಲ್ಲ ಒಂದು ಎಂದು ಸಂದೇಶ ಸಾರಿದರು. ಈ ಪ್ರತಿಭಟನೆಯಲ್ಲಿ ಹಿಂದು ನಾವೆಲ್ಲ ಒಂದು ಎಂಬ ಘೋಷಣೆಯ ಮೂಲಕ ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು, ಮಠಾಧಿಧಿಪತಿಗಳು, ಪಕ್ಷದ ಹಿರಿಯ ಮುಖಂಡರು, ರಾಜ್ಯ ಜಿಲ್ಲೆ ಮತ್ತು ಮಂಡಲದ ಎ¯್ಲÁ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.