ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ.
1 min readಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ಹಾಗೂ ಸಂಸದ ವಿ.ಮುನಿಸ್ವಾಮಿ ಅವರು ಡಾ.ಕೆ.ಸುಧಾಕರ್ ಅವರ ಜೊತೆ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ನೀಡದೆ ಇಡೀ ರಾಜ್ಯವನ್ನು ಕತ್ತಲೆಗೆ ದೂಡಿದೆ. ಕಿಸಾನ್ ಸಮ್ಮಾನ್ ನಿಧಿ ಕಡಿತ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕಡಿತ, ಸಾವಯವ ಕೃಷಿಗೆ ಸಹಾಯಧನ ಸ್ಥಗಿತ ಮೊದಲಾದವುಗಳಿಂದ ಇದು ರೈತ ವಿರೋಧಿ ಸರ್ಕಾರ ಎಂಬುದು ಸಾಬೀತಾಗಿದೆ. ಬಡಜನ ವಿರೋಧಿ ಹಾಗೂ ರೈತ ವಿರೋಧಿಯಾದ ಈ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ ಎಂದರು.
ಇನ್ನು ಈ ಸಮಯದಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್ ನವೆಂಬರ್ ೩೦ ರೊಳಗೆ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ನೀಡದಿದ್ದರೆ, ಡಿಸೆಂಬರ್‌ನಲ್ಲಿ ಬಾಗೇಪಲ್ಲಿಯಿಂದ ವಿಧಾನಸೌಧ ಚಲೋ ಪಾದಯಾತ್ರೆ ಮಾಡಲಾಗುವುದು. ೭ ಗಂಟೆ ವಿದ್ಯುತ್ ನೀಡದಿದ್ದರೆ ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ನೀಡಿದ್ದರು. ಆದರೆ ಸ್ವಾತಂತ್ರ‍್ಯ ಬಂದಾಗಿನಿAದಲೂ ರೈತರಿಗೆ ಟೋಪಿ ಹಾಕುವ ಸಂಪ್ರದಾಯವನ್ನು ಈಗಿನ ಕಾಂಗ್ರೆಸ್À ಮುಂದುವರಿಸಿಕೊAಡು ಬಂದಿದೆ. ಹಸ್ತದ ಗುರುತು ಬಂದ ನಂತರ ಕೈ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಕುಟುಕಿದರು.
ಉಚಿತ ಗ್ಯಾರಂಟಿ ನೆಪದಲ್ಲಿ ಜನರಿಗೆ ಟೋಪಿ ಹಾಕಿ ಅಧಿಕಾರ ಪಡೆಯಲಾಗಿದೆ. ಕೋವಿಡ್ ಬಂದಾಗ ಪ್ರಧಾನಿ ನರೇಂದ್ರ ಮೋದಿ ೮೪ ಕೋಟಿ ಕುಟುಂಬಗಳಿಗೆ ಅಕ್ಕಿ, ಉಚಿತ ಚಿಕಿತ್ಸೆ, ಉಚಿತ ಲಸಿಕೆ ನೀಡಿದ್ದರು. ಬಿಜೆಪಿ ಇವುಗಳ ಬಗ್ಗೆ ಭರವಸೆಯನ್ನೇ ನೀಡದೆ ಉಚಿತವಾಗಿ ನೀಡಿತ್ತು. ಆದರೀಗ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತರಿಗೆ ನೋವು ಖಚಿತ, ಆತ್ಮಹತ್ಯೆ ನಿಶ್ಚಿತ ಎಂಬAತಾಗಿದೆ. ಸುಳ್ಳು ಹೇಳಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್‌ಗೆ ಜನರ ಶಾಪ ತಟ್ಟಲಿದೆ ಎಂದರು.
ಚಿಕ್ಕಬಳ್ಳಾಪುರದ ರೈತರು ಪ್ರತಿ ದಿನ ನಾಲ್ಕೂವರೆ ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಅದಕ್ಕಾಗಿ ಹಾಲು ಒಕ್ಕೂಟ ರೂಪಿಸಲಾಗಿತ್ತು. ಆದರೆ ಕಾಂಗ್ರೆಸ್ ನನ್ನ ಮೇಲಿನ ದ್ವೇಷದಿಂದ ಒಕ್ಕೂಟ ರದ್ದುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಗಾದರೂ ಅಧಿಕಾರ ಪಡೆಯಬೇಕೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಈ ಕಾಂಗ್ರೆಸ್ ಸರ್ಕಾರ ದೀರ್ಘಕಾಲ ಇರುವುದಿಲ್ಲ. ನಾವು ಹೋಬಳಿಗೊಂದು ಆಸ್ಪತ್ರೆ ನಿರ್ಮಿಸಿದರೆ ಈ ಸರ್ಕಾರ ಪಂಚಾಯಿತಿಗೊAದು ಮದ್ಯದಂಗಡಿ ನಿರ್ಮಿಸಲು ಮುಂದಾಗಿದೆ ಎಂದರು.