ಅಕ್ರಮ ಸಾಗಣೆ ಮಡುತ್ತಿದ್ದ ಕಾಡು ಹಂದಿಗಳ ರಕ್ಷಣೆ
1 min read
ಅಕ್ರಮ ಸಾಗಣೆ ಮಡುತ್ತಿದ್ದ ಕಾಡು ಹಂದಿಗಳ ರಕ್ಷಣೆ
ಅರಣ್ಯ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ
ವಾಹನ ಸಮೇತ ಆರು ಕಾಡುಹಂದಿಗಳ ವಶ
ಬಾಗೇಪಲ್ಲಿ ತಾಲೂಕು ಅರಣ್ಯ ಇಲಾಖೆಯವರು ಕಾಡು ಹಂದಿಗಳನ್ನು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ. ತಾಲೂಕು ವಲಯ ಅರಣ್ಯಾಧಿಕಾರಿ ಚಂದ್ರಶೇಖರ ರೆಡ್ಡಿ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಬೀಚಗಾನಹಳ್ಳಿಯಿಂದ ಮಿಟ್ಟೆಮರಿ ಮಾರ್ಗವಾಗಿ 6 ಕಾಡು ಹಂದಿಗಳನ್ನು ಬೊಲೇರೋ ವಾಹನದಲ್ಲಿ ಸಾಗಿಸುತ್ತಿರುವ ಬಗ್ಗೆ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ನಡೆಸಿ ರಕ್ಷಣೆ ಮಾಡಲಾಗಿದೆ.
ಬಾಗೇಪಲ್ಲಿ ತಾಲೂಕು ಅರಣ್ಯ ಇಲಾಖೆಯವರು ಕಾಡು ಹಂದಿಗಳನ್ನು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ. ತಾಲೂಕು ವಲಯ ಅರಣ್ಯಾಧಿಕಾರಿ ಚಂದ್ರಶೇಖರ ರೆಡ್ಡಿ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಬೀಚಗಾನಹಳ್ಳಿಯಿಂದ ಮಿಟ್ಟೆಮರಿ ಮಾರ್ಗವಾಗಿ 6 ಕಾಡು ಹಂದಿಗಳನ್ನು ಬೊಲೇರೋ ವಾಹನದಲ್ಲಿ ಸಾಗಿಸುತ್ತಿರುವ ಬಗ್ಗೆ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ನಡೆಸಿ ರಕ್ಷಣೆ ಮಾಡಲಾಗಿದೆ. ಬೊಲೇರೋ ವಾಹನವನ್ನು ಬೆನ್ನು ಹತ್ತಿದ ಅರಣ್ಯಾಧಿಕಾರಿಗಳು, ವಾಹನ ಸಮೇತ ಕಾಡು ಹಂದಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅರಣ್ಯಾಧಿಕಾರಿಗಳು ವಾಹನವನ್ನು ವಶಕ್ಕೆ ಪಡೆಯುವ ವೇಳೆಗೇ ವಾಹನದಲ್ಲಿದ್ದ ಎರಡು ಕಾಡುಹಂದಿಗಳು ಮೃತಪಟ್ಟದ್ದು, 4 ಕಾಡುಹಂದಿಗಳು ಜೀವಂತ ಇದ್ದು, ಅವುಗಳ ಸಂರಕ್ಷಣೆ ಮಾಡಲಾಗಿದೆ. ಈ ಘಟನೆಗೆ ಸಂಬoಧಿಸಿ ಆರೋಪಿಗಳಾದ
ಗುಡಿಬಂಡೆ ತಾಲೂಕಿನ ಕಡೆಹಳ್ಳಿ ಗ್ರಾಮದ ನಿವಾಸಿ ನವೀನ್, ಯಾದಗಿರಿ ಜಿಲ್ಲೆಯ ಶಹಾಪುರದ ಹನುಮಂತ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.
ಈ ಕಾಡು ಹಂದಿ ಸಾಗಣೆ ಪ್ರಕರಣದಲ್ಲು ಇನ್ನೂ ಮೂರ್ನಾಲ್ಕು ಆರೋಪಿಗಳು ಪರಾರಿಯಾಗಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ವನ್ಯ ಪ್ರಾಣಿಗಳ ಸಂರಕ್ಷಣೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ಬಾಗೇಪಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವೇಳೆ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ರೆಡ್ಡಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ಎಂ.ಜಿ.,ರಾಘವೇoದ್ರ. ಗಸ್ತು ಪಾಲಕ ನರಸಿಂಹಮೂರ್ತಿ, ಶ್ರೀರಾಮಪ್ಪ, ಸಿಬ್ಬಂದಿ ವೆಂಕಟೇಶ್, ವಾಹನ ಚಾಲಕ ಮಧುಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.