ವಿಜಯ ದಶಮಿ ಪ್ರಯುಕ್ತ ಸಪ್ತ ದೇವತೆಗಳ ಮೆರವಣಿಗೆ
1 min readವಿಜಯ ದಶಮಿ ಪ್ರಯುಕ್ತ ಸಪ್ತ ದೇವತೆಗಳ ಮೆರವಣಿಗೆ
ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ ದಸರಾ ಮೆರುಗು
ಗೌರಿಬಿದನೂರು ನಗರ ಸಮೀಪದ ಹಿರೇಬಿದನೂರು ಗ್ರಾಮದಲ್ಲಿ ವಿಜಯ ದಶಮಿ ಪ್ರಯುಕ್ತ ಗ್ರಾಮದ ಸಪ್ತ ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ ವಿಜೃಂಭಣೆಯಿ0ದ ನಡೆಯಿತು. ನವರಾತ್ರಿ ಪ್ರಯುಕ್ತ ಕಳೆದ 9 ದಿನಗಳಿಂದ ವಿಶೇಷ ಪೂಜೆಗಳನ್ನು ಮಾಡಿದ್ದ ಗ್ರಾಮಸ್ಥರು ಇಂದು ಸಪ್ತ ದೇವರ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.
ಹಿರೇಬಿದನೂರು ಗ್ರಾಮದಲ್ಲಿ ಸುಮಾರು 250 ವರ್ಷಗಳಿಂದಲೂ ಗ್ರಾಮದ ಹಿರಿಯರು ವಿಜಯ ದಶಮಿ ಅಂಗವಾಗಿ ಗ್ರಾಮದ ದೇವಾಲಯಗಳಾದ ಶ್ರೀ ಬಸವೇಶ್ವರ, ಶ್ರೀ ರಾಮಲಿಂಗೇಶ್ವರ, ಶ್ರೀ ಆಂಜನೆಯ ಸ್ವಾಮಿ, ಶ್ರೀ ಧರ್ಮಮ್ಮ ದೇವಿ, ಶ್ರೀ ಗಂಗಮ್ಮದೇವಿ, ಶ್ರೀ ಪ್ರಸನ್ನಾಂಜನೇಯ, ಶ್ರೀ ಚೌಡಮ್ಮ ದೇವಿಗೆ ವಿಶೇಷ ಪೂಜೆ ಹಮ್ಮಿಕೊಳ್ಳುತ್ತಿದ್ದು, ಈ ವರ್ಷವೂ ವಿಜೃಂಭಣೆಯಿ0ದ ನೆರವೇರಿಸಿದರು.
ವಿಜಯ ದಶಮಿ ದಿನ ಸಂಜೆ ವೇಳೆ ಎಲ್ಲಾ ದೇವಾಲಯಗಳಿಂದ ಉತ್ಸವ ಮೂರ್ತಿಗಳ ಸಾಮೂಹಿಕ ಮೆರವಣಿಗೆ ನಡೆಸಿ , ಗ್ರಾಮದ ಶ್ರೀ ಬಸವೇಶ್ವರ ದೇವಲಯದ ಬಳಿ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಜಯ ದಶಮಿಯನ್ನು ಆಚರಿಸಲಾಯಿತು. ಗ್ರಾಮದ ಪ್ರತಿ ಮನೆಯಿಂದಲೂ ಹೂವು ಕಾಯಿ ಹಣ್ಣು ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ, ಗ್ರಾಮದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲಸುತ್ತದೆ ಎಂದು ಹಿರಿಯರು ಈ ವಿಶೇಷ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಾಣದ ಮೂಲಕ ಬಿಲ್ಲನ್ನು ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಪಣಸ್ಥರಾದ ಕೃಷ್ಣಮೂರ್ತಿ , ರಾಜಣ್ಣ, ನಟೇಶ್, ಚಂದ್ರಶೇಖರ್, ಮಹೇಶ್ ಮುಂತಾದವರು ಭಗವಹಿಸಿದ್ದರು. ಸಪ್ತ ದೇವತೆಗಳ ಉತ್ಸವ ಮೂರ್ತಿಯೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಮೆರಗು ನೀಡಿದವು. ಗ್ರಾಮದ ಸೋಮಯ್ಯ ನವರ ರಾಜಣ್ಣ, ಸವಿತಾ, ತೇಜಸ್ಸ್, ಮೋಹನ್ ಕುಮಾರ್, ಚನ್ನಬಸವ, ಮಹೇಶ್, ವೆಂಕಟಾದ್ರಿ, ಛತ್ರಂ ಶ್ರೀಧರ್, ಕೃಷ್ಣಮೂರ್ತಿ, ತಿಪ್ಪೇರುದ್ರಪ್ಪ, ಶಶಿದರ್ ಇದ್ದರು.