ಕುತೂಹಲ ಮೂಡಿಸಿದೆ ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣ
1 min readನವದೆಹಲಿ,ಆ.14- ಕಳೆದ ಹತ್ತು ವರ್ಷಗಳಿಂದ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಈ ಬಾರಿ ಸ್ವಾತಂತ್ರ್ಯ ದಿನದ 11ನೇ ಭಾಷಣ ಮಾಡಲಿದ್ದಾರೆ.ಎಲ್ಲರಲ್ಲೂ ಸಾಕಷ್ಟು ಕುತೂಹಲ ಮೂಡಿಸುವ ಅವರ ಭಾಷಣದಲ್ಲಿ ಎಂದಿನಂತೆ ಏನಾದರೂ ವಿಶೇಷ ಇದ್ದೇ ಇರುತ್ತದೆ. ಹೀಗಾಗಿ ಅವರ ಭಾಷಣವನ್ನು ಕೇಳಲು ದೇಶದ ಮೂಲೆಮೂಲೆಯಲ್ಲೂ ಜನರು ಕಾತರರಾಗಿರುತ್ತಾರೆ.
ಮೂರನೇ ಅವಧಿಗೆ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು ಈ ಬಾರಿ ಸ್ವಾತಂತ್ರ್ಯ ದಿನವದ ಆ. 15ರಂದು ಗುರುವಾರ ತಮ್ಮ ಸತತ 11ನೇ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಲು ಸಿದ್ಧರಾಗಿದ್ದಾರೆ.
ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ದಾಖಲೆ ಬರೆದಿರುವ ಅವರು, ಈ ಅವಧಿಯ ಮೊದಲ ಸ್ವಾತಂತ್ರ್ಯ ದಿನದ ಭಾಷಣವಾಗಿದೆ. ಈ ಭಾಷಣದೊಂದಿಗೆ ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಯವರ ಅನಂತರ ಕೆಂಪು ಕೋಟೆಯಲ್ಲಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡುವ ಮೂರನೇ ಭಾರತೀಯ ಪ್ರಧಾನಿಯಾಗಲಿದ್ದಾರೆ.
ಮೋದಿಯವರ ಈ ಬಾರಿಯ 11ನೇ ಭಾಷಣ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಖ್ಯೆಯನ್ನು ಮೀರಿಸಲಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 10 ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿರುವ ದಾಖಲೆ ಹೊಂದಿದ್ದಾರೆ.
ಭಾರತದ ಮೊದಲ ಪ್ರಧಾನಿ ನೆಹರೂ ಅವರು 17 ಬಾರಿ ನಿರಂತರವಾಗಿ ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಜನವರಿ 1966ರಿಂದ ಮಾರ್ಚ್ 1977ರವರೆಗೆ ಮತ್ತು ಅನಂತರ ಜನವರಿ 1980ರಿಂದ ಅಕ್ಟೋಬರ್ 1984ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿ ಅವರು ಒಟ್ಟು 16 ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣಗಳನ್ನು ಮಾಡಿದ್ದರು.
ಲಿಸಿದರೆ ಮೋದಿಯವರೇ ಅತಿ ಉದ್ದದ ಭಾಷಣ ಮಾಡಿರುವ ಪ್ರಧಾನಿಯಾಗಿದ್ದರೆ. ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ಭಾಷಣವನ್ನೂ ಸರಾಸರಿ 82 ನಿಮಿಷಗಳ ಕಾಲ ನಡೆಸಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ಪ್ರಧಾನಿಯವರ ಅತಿ ಉದ್ದದ ಭಾಷಣವಾಗಿದೆ.ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರು 1997ರಲ್ಲಿ 71 ನಿಮಿಷಗಳ ಕಾಲ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ್ದರು. ಪಿಎಂ ಮೋದಿಯವರ ಭಾಷಣಗಳ ಉದ್ದವು 2017ರಲ್ಲಿ 55 ನಿಮಿಷಗಳ ಕಡಿಮೆ ಅವಧಿಯಿಂದ 2016ರಲ್ಲಿ 94 ನಿಮಿಷಗಳವರೆಗೆ ವಿಸ್ತರಿಸಿತ್ತು.
ಪ್ರಧಾನಿ ಮೋದಿ ಅವರು ಪ್ರತಿ ಬಾರಿಯೂ ಸ್ವಾತಂತ್ರ್ಯ ದಿನದಂದು ವಿಶೇಷ ಘೋಷಣೆಗಳನ್ನು ಮಾಡಿರುವುದು ಹಿಂದಿನ ದಾಖಲೆಗಳಿಂದ ತಿಳಿಯುತ್ತದೆ. 2014ರಲ್ಲಿ ಅವರು ತಮ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸ್ವಚ್ಛ ಭಾರತ ಮತ್ತು ಜನ್ ಧನ್ ಖಾತೆಗಳಂತಹ ಹೊಸ ಕಾರ್ಯಕ್ರಮಗಳನ್ನು ಘೋಷಿಸಿದರು. ಅಂದಿನಿಂದ ಅವರು ವಿವಿಧ ಪ್ರಮುಖ ಘೋಷಣೆಗಳನ್ನು ಮಾಡಲು ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಅಲ್ಲದೇ ಅವರ ಭಾಷಣಗಳ ಜೊತೆಗೆ ಅವರು ಧರಿಸುವ ವಿವಿಧ ರೀತಿಯ ಪೇಟಗಳು ಎಲ್ಲರ ಗಮನ ಸೆಳೆಯುತ್ತಿವೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday