ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ವಿಶ್ವಕಪ್​ ಫೈನಲ್​ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ: ಅದ್ಧೂರಿ ಕಾರ್ಯಕ್ರಮದ ಮೂಲಕ ಟೂರ್ನಿಗೆ ತೆರೆ

1 min read

ವಿಶ್ವಕಪ್​ ಫೈನಲ್​ ಪಂದ್ಯವನ್ನು ನೋಡಲು ಪ್ರಧಾನಿ ಮೋದಿ ಬರುತ್ತಾರೆ ಎಂಬುದನ್ನು ರಾಜ್ಯ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುತ್ತಾರೆ.

ನವೆಂಬರ್​ 19ರಂದು ಅಹಮದಾಬಾದ್​ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಬಗ್ಗೆ ರಾಜ್ಯ ಗೃಹ ಇಲಾಖೆಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುವುದರ ಜೊತೆಗೆ, ಭಾರತದ ಮಾಜಿ ಕ್ರಿಕೆಟ್​ ಆಟಗಾರರು ಈ ವೇಳೆ ಉಪಸ್ಥಿತರಿರುತ್ತಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಹ ಇರಲಿದ್ದಾರೆ ಎಂದು ಹೇಳಲಾಗಿದೆ. ಇನ್ನು 1983ರ ವಿಶ್ವಕಪ್​ ನಾಯಕ ಕಪಿಲ್​ ದೇವ್​, 2011ರ ನಾಯಕ ಎಂಎಸ್ ಧೋನಿ ಪಂದ್ಯವನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಲಿದ್ದಾರೆ. ಸಚಿನ್ ತೆಂಡೂಲ್ಕರ್ ವಿಶ್ವಕಪ್​ನ ರಾಯಬಾರಿ ಆಗಿರುವುದರಿಂದ ಅವರ ಉಪಸ್ಥಿತಿ ಇರಲಿದೆ. ಇವರುಗಳಲ್ಲದೇ ಭಾರತಕ್ಕೆ ಆಡಿದ ಮಾಜಿ ಆಟಗಾರರು ಪಂದ್ಯವನ್ನು ಮೈದಾನದಲ್ಲೇ ಕಣ್ತುಂಬಿಕೊಳ್ಳಲಿದ್ದಾರೆ.

ಮನರಂಜನಾ ಕಾರ್ಯಕ್ರಮದ ಮೂಲಕ ತೆರೆ: ಒಂದೂವರೆ ತಿಂಗಳ ಕಾಲ ನಡೆದ ವಿಶ್ವಮಟ್ಟದ ದೊಡ್ಡ ಈವೆಂಟ್​ಗೆ ನವೆಂಬರ್​ 19 ರಂದು ವಿಜೃಂಭಣೆಯಿಂದಲೇ ತೆರಬೀಳಲಿದೆ. ಹಾಲಿವುಡ್ ಪಾಪ್ ಐಕಾನ್ ದುವಾ ಲಿಪಾ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಪ್ರೀತಮ್ ಚಕ್ರವರ್ತಿ ಮತ್ತು ಆದಿತ್ಯ ಗಾಧ್ವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.

ಸೂರ್ಯ ಕಿರಣ್ ಏರ್ ಶೋ: ಫೈನಲ್ ಪಂದ್ಯ ಪ್ರಾರಂಭವಾಗುವ 10 ನಿಮಿಷಕ್ಕೂ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಏರ್ ಶೋ ಮೂಲಕ ಜನರನ್ನು ಪುಳಕಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ (ಶುಕ್ರವಾರ, ಶನಿವಾರ) ವೈಮಾನಿಕ ಪ್ರದರ್ಶನದ ತಾಲೀಮು ನಡೆಸಲಾಗುತ್ತಿದೆ. ಆಗಸದಲ್ಲಿ 9 ಜೆಟ್ ವಿಮಾನಗಳು ಇಂದು ಮುಂಜಾನೆಯಿಂದಲೇ ತಾಲೀಮು ನಡೆಸುತ್ತಿವೆ.

2003ರ ಸೇಡು ತೀರಿಸಿಕೊಳ್ಳಲು ತಂಡ ರೆಡಿ: 2003 ವಿಶ್ವಕಪ್​ ಫೈನಲ್​ನಲ್ಲಿ ಟೀಮ್​ ಇಂಡಿಯಾ 125 ರನ್‌ಗಳಿಂದ ಸೋಲನುಭವಿಸಿ, ಟ್ರೋಫಿ ಗೆಲ್ಲುವ ಕನಸನ್ನು ಕೈಚೆಲ್ಲಿತ್ತು. 20 ವರ್ಷದ ನಂತರ ಭಾರತ ಮತ್ತು ಆಸ್ಟ್ರೇಲಿಯಾ ಅದೇ ಹಂತದಲ್ಲಿ ಮುಖಾಮುಖಿ ಆಗುತ್ತಿದ್ದು, ಆ ಸೇಡನ್ನು ಭಾರತ ತೀರಿಸಿಕೊಳ್ಳಬೇಕಿದೆ. ಅಲ್ಲದೇ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿರುವ ತಂಡ ತವರಿನಲ್ಲಿ ಈ ಕೊರತೆಯನ್ನು ನೀಗಿಸಿಕೊಳ್ಳಲು ಚಿಂತಿಸುತ್ತಿದೆ.

2023ರ ವಿಶ್ವಕಪ್​ ಫೈನಲ್​: ರೋಹಿತ್​ ಶರ್ಮಾ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಏಷ್ಯಾಕಪ್​ ಗೆದ್ದ ವಿಶ್ವಾಸದಲ್ಲಿ ವಿಶ್ವಕಪ್​ ಫೈಟ್​ಗೆ ಇಳಿದಿತ್ತು. ಅದೇ ಆತ್ಮವಿಶ್ವಾಸದಲ್ಲಿ ತಂಡ ಲೀಗ್​ ಹಂತದ ಎಲ್ಲ ಪಂದ್ಯಗಳಲ್ಲಿ ಗೆದ್ದದ್ದಲ್ಲದೇ ಸೆಮೀಸ್​ನಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ ಪ್ರವೇಶಿಸಿದೆ. ಆಸ್ಟ್ರೇಲಿಯಾ ಮೊದಲೆರಡು ಪಂದ್ಯದಲ್ಲಿ ಸೋಲು ಕಂಡ ನಂತರ ಪುಟಿದೆದ್ದು, ಸತತ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಲ್ಲದೇ ಸೆಮಿಫೈನಲ್​ನ​ಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಅಂತಿಮ ಹಂತ ತಲುಪಿದೆ.

About The Author

Leave a Reply

Your email address will not be published. Required fields are marked *