ಅಯೋಧ್ಯೆಯಲ್ಲಿ ‘ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
1 min readಅಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ ಅವರು ಇಂದು ‘ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆ ಧಾಮ್ ರೈಲ್ವೆ ನಿಲ್ದಾಣವನ್ನುಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ 15 ಕಿ.ಮೀ ಮೆಗಾ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ಬಳಿಕ ಪ್ರಧಾನಿ ಮೋದಿ ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ನಂತರ ಪ್ರಧಾನಿ ಮೋದಿ ರೈಲ್ವೇ ನಿಲ್ದಾಣವನ್ನು ವೀಕ್ಷಿಸಿ ರೈಲ್ವೇ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು.
ಶನಿವಾರ ಬೆಳಿಗ್ಗೆ ಪಟ್ಟಣದ ಬೀದಿಗಳಲ್ಲಿ ಭಗವಾನ್ ರಾಮನಿಗೆ ಸಮರ್ಪಿತವಾದ ಭಕ್ತಿಗೀತೆಗಳು ಮೊಳಗುತ್ತಿದ್ದರೆ, ಹಲವಾರು ದೇವಾಲಯಗಳಲ್ಲಿ ಗಂಟೆಗಳು ಮತ್ತು ಪವಿತ್ರ ಮಂತ್ರಗಳು ಮೊಳಗುತ್ತಿದ್ದವು.