ಚಿಕ್ಕಬಳ್ಳಾಪುರದಲ್ಲಿ ಹೂ, ಹಣ್ಣು ತರಕಾರಿ ಬೆಲೆ ಇಳಿಕೆ
1 min readನಿರಂತರ ಮಳೆಗೆ ರೈತರ ಬದುಕು ಬೀದಿಗೆ
ಚಿಕ್ಕಬಳ್ಳಾಪುರದಲ್ಲಿ ಹೂ, ಹಣ್ಣು ತರಕಾರಿ ಬೆಲೆ ಇಳಿಕೆ
ನಿರಂತರ ತುಂತರು ಮಳೆಯಿಂದ ರೈತರು ಹೈರಾಣು
ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರು
ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊಂದಿಕೊ0ಡೇ ಇರೋ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಪ್ರಸ್ತುತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಗಲು ರಾತ್ರಿ ಅನ್ನದೆ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಪಾತಾಳದಿಂದ ನೀರು ಬಗೆದು ಹೂ, ಹಣ್ಣು, ತರಕಾರಿ ಬೆಳೆದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಈಗ ಮೂರು ದಿನಗಳಿಂದ ಸುರಿತಿರೋ ಮಳೆಯಿಂದ ರೈತರ ಬದುಕು ಬೀದಿಗೆ ತಂದಿದೆ. ನಿರಂತರ ಮಳೆಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗೆ ಮಳೆಯಿಂದ ಬೆಲೆ ಕಡಿಮೆಯಾಗಿ ಬೆಳೆದಿದ್ದ ಹೂಗಳನ್ನೇ ತಿಪ್ಪಗೆ ಸುರಿದಿರೋ ರೈತರು ಒಂದು ಕಡೆ, ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಗದೆ ಬೀದಿಯಲ್ಲೆ ಬಿದ್ದಿರೋ ಸೌತೆಕಾಯಿ ಸೇರಿದಂತೆ ತರಹೇವಾರಿ ತರಕಾರಿಗಳು. ಅಂದಹಾಗೆ ಈ ಎಲ್ಲಾ ದೃಶ್ಯಗಳು ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆ ಹಾಗೂ ಎಪಿಎಂಸಿ ತರಕಾರಿ ಮಾರುಕಟ್ಟೆಗಳಲ್ಲಿ ಕಂಡುಬ0ದವು. ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರೋ ಮಳೆಗೆ ಹೂ ಬೆಳೆಗಾರರ ಬದುಕು ಬೀದಿಗೆ ಬರುವಂತಾಗಿದೆ. ಜಿಟಿ ಜಿಟಿ ಮಳೆಯಿಂದ ಹೂ ತೋಟಗಳೆಲ್ಲವೂ ಮಳೆ ನೀರಿನಿಂದ ಜಲಾವೃತವಾಗಿ, ಅತಿಯಾದ ತೇವಾಂಶದಿ0ದ ಹೂತೋಟಗಳು ನಾಶವಾಗುವ ಆತಂಕ ಎದುರಾಗಿದೆ.
ಮಳೆಯಿಂದ ಹೂ ಕಟಾವು ಮಾಡಲು ಕೂಲಿಯಾಳುಗಳು ಬರುತ್ತಿಲ್ಲ. ಕೂಲಿಯಾಳುಗಳು ಸಿಕ್ರೂ ಹೂ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮಳೆ ನೀರಿನಿಂದ ಅತಿಯಾಗಿ ಹೂ ಗಳು ನೆಂದು ಹೂ ಬೆಲೆಯಲ್ಲಿ ಭಾರೀ ಕಡಿಮೆಯಾಗಿದೆ. ಕಳೆದ 2-3 ದಿನಗಳ ಹಿಂದೆ 300 ರಿಂದ 400 ರೂಪಾಯಿಯಿದ್ದ ಮೇರಾಬುಲ್, ಗುಲಾಬಿ ಹೂವಿನ ಬೆಲೆ ಇಳಿಕೆಯಾಗಿದೆ. ಸೇವಂತಿಗೆ ಹೂ ಬೆಲೆಯುಲ್ಲೂ ಇಳಿಕೆಯಾಗಿದೆ. ಇದ್ರಿಂದ ರೈತರು ದಿಕ್ಕುತೋಚದಂತಾಗಿದ್ದಾರೆ. ಹೂತೋಟದಲ್ಲಿ ಹೂವು ಹಾಗೆ ಬಿಡುವ ಹಾಗಿಲ್ಲ, ಬಿಟ್ಟರೆ ಗಿಡ ಹಾಳಾಗಲಿದೆ. ಕಟಾವು ಮಾಡೋಣ ಅಂದ್ರೆ ಮಳೆ ಕಾಟ, ಕಟಾವು ಮಾಡಿ ಮಾರ್ಕೆಟ್ ತೆಗದುಕೊಂಡು ಹೋದರೆ ರೇಟ್ ಇಲ್ಲ, ಹೀಗಾಗಿ ರೈತರು ಅಕ್ಷರಶಃ ಮಳೆಯಿಂದ ಹೈರಾಣಾಗಿ ಹೋಗುವಂತಾಗಿದೆ.
ಹೂಗಳ ಪರಿಸ್ಥಿತಿ ಇದಾದರೆ, ತರಕಾರಿ ಮಾರುಕಟ್ಟೆಯಲ್ಲೂ ತರಕಾರಿ ಬೆಲೆ ಭಾರೀ ಇಳಿಕೆಯಾಗಿದೆ. ನಿರಂತರ ಮಳೆಗೆ ತರಕಾರಿ ರೇಟ್ ಪುಲ್ ಡೌನ್ ಆಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲೆ ಭಾರೀ ಕುಸಿತಗೊಂಡಿದೆ. ಮಳೆಯಿಂದ ಅರ್ಧಕ್ಕೆ ಅರ್ಧ ಬೆಲೆಗೆ ಕುಸಿದಿದ್ದು, ಒಂದು ಮೂಟೆ ಸೌತೆಕಾಯಿ ಕೇವಲ ೫೦ ರೂಪಾಯಿಗೆ ಬಿಕರಿಯಾಗುತ್ತಿದೆ. ಮಳೆಯಿಂದ ಸೌತೆಕಾಯಿ ಸೇವನೆ ಮಾಡೋರ ಸಂಖ್ಯೆ ಕೂಡಾ ಕಡಿಮೆಯಾಗಿ, ಮಾರುಕಟ್ಟೆಗೆ ಸಾವಿರಾರು ಮೂಟೆ ಸೌತೆಕಾಯಿ ಬಂದ್ರೂ ಖರೀದಿಸೋವರೆ ಇಲ್ಲ. ಮೂರು ದಿನದ ಹಿಂದೆ 600 ರೂಪಾಯಿ ಇದ್ದ ಟೊಮೇಟೋ ಇಂದು 200 ರೂಪಾಯಿಯಾಗಿದೆ. 1,600 ರೂಪಾಯಿ ಇದ್ದ ಬೀನ್ಸ್ ಇಂದು 900 ರೂಪಾಯಿಗೆ ಮಾರಾಟವಾಗಿದೆ.
ಒಟ್ನಲ್ಲಿ ಶಾಶ್ವತ ನದಿ ಮೂಲಗಳು ಇಲ್ಲದಿದ್ರೂ ಅಂರ್ತಜಲವನ್ನೇ ನಂಬಿ ಬೊಂಬಾಟ್ ಬೆಳೆ ಬೆಳೆಯುವ ಚಿಕ್ಕಬಳ್ಳಾಪುರ ರೈತರಿಗೆ ಮೂರು ದಿನದ ಮಳೆ ಇನ್ನಿಲ್ಲದ ತೊಂದರೆ ನೀಡುತ್ತಿದೆ. ಮಳೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸುತ್ತಿದ್ದು, ಸಂಕಷ್ಟಕ್ಕೆ ಸಿಲುಕಿರೋ ರೈತರಿಗೆ ದಿಕ್ಯಾರು ಅನ್ನೋದು ಯಕ್ಷ ಪ್ರಶ್ನೆಯಾಗಿದೆ.