ಜ.1ಕ್ಕೆ ಭೀಮ ಕೋರೆಗಾಂವ್ ವಿಜಯೋತ್ಸವಕ್ಕೆ ಸಿದ್ಧತೆ
1 min readಜ.1ಕ್ಕೆ ಭೀಮ ಕೋರೆಗಾಂವ್ ವಿಜಯೋತ್ಸವಕ್ಕೆ ಸಿದ್ಧತೆ
ಶೋಷಿತರು ಶೌರ್ಯ ಮೆರೆದ ಇತಿಹಾಸದ ಯುದ್ಧವೇ ಕೋರೇಗಾಂವ್
ಗೌರಿಬಿದನೂರು ತಾಲ್ಲೂಕಿನ ಎಲ್ಲಾ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಜ.೧ರಂದು ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ದಲಿತ ಮುಖಂಡ ಚೆನ್ನಪ್ಪ ಹೇಳಿದರು.
ಗೌರಿಬಿದನೂರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಚೆನ್ನಪ್ಪ, ಭಾರತದ ಇತಿಹಾಸದಲ್ಲೆ ಹೆಸರಾದ ಕದನವೊಂದಿದ್ದರೆ ಅದು ಭೀಮ ಕೋರೆಗಾಂವ್ ಯುದ್ಧ. 1818ರಲ್ಲಿ 28 ಸಾವಿರ ಮಂದಿಯ ವಿರುದ್ಧ 500 ಮಂದಿ ಮಹರ್ ಸೈನಿಕರು ನಿರಂತರ ೧೨ಗಂಟೆ ಹೋರಾಟ ನಡೆಸಿ, ಗೆಲುವು ಸಾಧಿಸಿದ ಯುದ್ಧವಾಗಿದೆ. ಇದು ಕೇವಲ ದಲಿತ ಜನಾಂಗ ಮಾತ್ರವಲ್ಲ ಎಲ್ಲಾ ಶೋಷಿತರ ವಿಮೋಚನೆಗಾಗಿ, ಶಿಕ್ಷಣ, ಸ್ವಾಭಿಮಾನ, ಸಮಾನತೆಗಾಗಿ ಹೋರಾಟ ನಡೆಸಿದ ಯುದ್ಧದ ಬಗ್ಗೆ ಎಲ್ಲರೂ ತಿಳಿಯುವ ಅವಶ್ಯಕತೆ ಇದೆ ಎಂದರು.
ಸಿ.ಜಿ. ಗಂಗಪ್ಪ ಮಾತನಾಡಿ, ಎಸ್ಸಿ, ಎಸ್ಟಿ, ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ. ಮೇಲ್ವರ್ಗದವರು ಮಾತ್ರ ಆಡಳಿತ ಹಾಗೂ ಯುದ್ಧ ಮಾಡಲು ಯೋಗ್ಯರು. ಕೆಳವರ್ಗದವರು ಮೇಲ್ವರ್ಗದವರ ಸೇವೆ ಮಾಡಲು ಮಾತ್ರ ಎಂಬ ಪೇಶ್ವೆಗಳ ಆಡಳಿತ ಮಹರ್ ಜನಾಂಗವನ್ನು ನಡೆಸಿಕೊಳ್ಳುತ್ತಿತ್ತು. ಮಹರ್ ಜನಾಂಗದ ಮಕ್ಕಳಿಗೆ ಶಿಕ್ಷಣ, ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರೂ ನಿರ್ಲಕ್ಷ ತೋರಿದ್ದರಿಂದ ಇಂಗ್ಲಿಷ್ ಆಡಳಿತ ಮಹರ್ ಸೇರಿ ಶೋಷಿತರ ಪರ ಶಿಕ್ಷಣ ಮೂಲಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪ್ಪಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲೀಷ್ ಸೈನಿಕರ ಮಧೆÉ್ಯ ನಡೆದ ಯುದ್ದದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು 500 ಮಂದಿ ಮಹರ್ ಸೈನಿಕರು ಸೋಲಿಸಿ ಶೌರ್ಯ ಮೆರೆದಿದ್ದಾರೆ ಎಂದರು.
ನಾಗಾರ್ಜುನ, ಜಿವಿಕಾ ಲಕ್ಷö್ಮಣ್, ಲಕ್ಷ್ಮೀ ನಾರಾಯಣ, ಹುದಗೂರು ನಂಜು0ಡಪ್ಪ, ಮಲ್ಲಸಂದ್ರ ಗಂಗಾಧರಪ್ಪ, ರಾಜು , ನರಸಿಂಹಮೂರ್ತಿ, ಸುನಂದ ಕುಮಾರ್, ನಾಗಾರ್ಜುನ ಇದ್ದರು.