ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಕಾರ್ಯ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

1 min read

ಕಾರ್ಯ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ
ಇತಿಹಾಸ ಪ್ರಸಿದ್ಧ ಕಾರ್ಯ ಸಿದ್ಧೇಶ್ವರ ಸ್ವಾಮಿ ಜಾತ್ರೆ ನಾಳೆ

ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ನವೆಂಬರ್ 3ರ ಭಾನುವಾರ ನಡೆಯುವ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಈ ಬಾರಿ ಕಾರಣಾಂತರಗಳಿ0ದ ಜಾತ್ರೆ ನಡೆಯುವುದಿಲ್ಲ ಎಂಬ ಅನುಮಾನ ಕಾಡುತ್ತಿತ್ತು. ಕೊನೆಗೂ ಗ್ರಾಮಸ್ಥರು ಸಭೆ ಸೇರಿ ಚರ್ಚೆ ನಡೆಸಿ ಈ ಬಾರಿ ಜಾತ್ರೆ ಮಾಡಲು ನಿರ್ಧರಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ನವೆಂಬರ್ 3ರ ಭಾನುವಾರ ನಡೆಯುವ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ನಡೆಯುವ ರಥೋತ್ಸವಕ್ಕೆ ಗ್ರಾಮಸ್ಥರು ಮುಂಜಾನೆಯಿ0ದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ನಡೆಯುತ್ತದೆ.

ನವೆಂಬರ್ 3ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಸಿದ್ದೇರ ಸ್ವಾಮಿಯ ಪಲ್ಲಕ್ಕಿ ಉತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ. ಸುಮಾರು 25 ಅಡಿ ಎತ್ತರದ ಖುರ್ಜು ರಥೋತ್ಸವ ತಯಾರು ಮಾಡಿ ವಸ್ತಲಂಕಾರ, ಹೂವಿನ ಅಲಂಕಾರಗಳಿ0ದ ಆ ತೇರನ್ನು ಶೃಂಗರಿಸಿ ಕಳಸರೋಹಣ ಮಾಡಿ ಮಧ್ಯಹ್ನ 12 ಗಂಟೆಗೆ ಸರಿಯಾಗಿ ಆರು ಅಡಿ ಎತ್ತರದ ರಥದ ಸಹಾಯದಿಂದ ಕಾರ್ಯ ಗ್ರಾಮದ ಕೊನೆಯ ಭಾಗದವರೆಗೂ ರಥವನ್ನು ಎಳೆದು ನಂತರ ಎರಡು ಟನ್ ಧರವುಳ್ಳ ತೇರನ್ನು ಸುಮಾರು 200ಕ್ಕೂ ಹೆಚ್ಚು ಜನರು ಹೆಗಲ ಮೇಲೆ ಹೊತ್ತು ಸುಮಾರು 600 ಅಡಿ ಎತ್ತರದ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ಹೋಗುತ್ತಾರೆ. ಇದು ಪ್ರಮುಖ ಆಕರ್ಷಣೆಯಾಗಿದೆ.

ಅದನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಾರೆ. ನವೆಂಬರ್ ೪ ರಂದು ಪಲ್ಲಕ್ಕಿ ಉತ್ಸವ, ಪಂಚ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ, ನವೆಂಬರ್ 5 ರಂದು ಗ್ರಾಮದ ದರೋಬರೋ ಕೆರೆಯಲ್ಲಿ ರಾತ್ರಿ 8 ಗಂಟೆಗೆ ಶ್ರೀ ಸ್ವಾಮಿಯ ತೆಪ್ರೋತ್ಸವ ನಡೆಯಲಿದೆ. ನವೆಂಬರ್ 10ರ ಭಾನುವಾರ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಚಿಕ್ಕ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ.

 

About The Author

Leave a Reply

Your email address will not be published. Required fields are marked *