ಜಂಗಮಕೋಟೆ ವ್ಯಾಪ್ತಿಯ ರೈತರೊಂದಿಗೆ ಪೂವಭಾವಿ ಸಭೆ
1 min readಜಂಗಮಕೋಟೆ ವ್ಯಾಪ್ತಿಯ ರೈತರೊಂದಿಗೆ ಪೂವಭಾವಿ ಸಭೆ
ಕೃಷಿ ಭೂಮಿ ರೈತರಿಂದ ಕಸಿಯುತ್ತಿರುವುದಕ್ಕೆ ಖಂಡನೆ
ಜುಲೈ 12 ರಂದು ಶಿಡ್ಲಘಟ್ಟ ನಗರದಲ್ಲಿ ಪ್ರತಿಭಟನೆ
ಕೈಗಾರಿಕಾ ಪ್ರದೇಶ ವಿಸ್ತರಣೆ ನೆಪದಲ್ಲಿ ಯೋಗ್ಯ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಳ್ಳುವ ಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ಕ್ರಮ ಖಂಡಿಸಿ ಜುಲೈ 12 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ರಾಜ್ಯ ಕಾರ್ಯಾಧ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಕೈಗಾರಿಕಾ ಪ್ರದೇಶ ವಿಸ್ತರಣೆ ನೆಪದಲ್ಲಿ ಯೋಗ್ಯ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಳ್ಳುವ ಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ಕ್ರಮ ಖಂಡಿಸಿ ಜುಲೈ 12 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ರಾಜ್ಯ ಕಾರ್ಯಾಧ ಭಕ್ತರಹಳ್ಳಿ ಬೈರೇಗೌಡ ಹೇಳಿದರು. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 12 ಗ್ರಾಮಗಳ 2,823 ಎಕರೆ ಜಮೀನು ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಅಧಿಸೂಚನೆ ವಿರೋಧಿಸಿ ಜಂಗಮಕೋಟೆ ಕ್ರಾಸ್ ಬಳಿಯಿರುವ ಹೊಸಪೇಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಸೋಮವಾರ ಜಂಗಮಕೋಟೆ ಸುತ್ತಮುತ್ತಲ ಗ್ರಾಮಗಳ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಅನ್ನ ನೀಡುವ ಭೂಮಿ ಮಾರಿಕೊಂಡ ರೈತ ಬೇರೆ ಎಲ್ಲಿಯೂ ಬದುಕಲು ಆಗಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು. ಕೃಷಿ ಮಾಡುವ ಪ್ರತಿಯೊಬ್ಬರೂ ರೈತರೆ. ರೈತರಿಗೆ ಯಾವುದೇ ಜಾತಿಯಿಲ್ಲ, ಪ್ರತಿಯೊಬ್ಬ ರೈತರೂ ಒಗ್ಗಟ್ಟಾಗಿ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಮ್ಮ ಭೂಮಿ ನಮಗೆ ಉಳಿಯುತ್ತದೆ ಎಂದರು.
ಸರ್ಕಾರ ಕೈಗಾರಿಕೆ ಪ್ರದೇಶಗಳನ್ನು ವಿಸ್ತರಿಸಬೇಕು ಎಂದಾದರೆ ಕೃಷಿಯೇತರ ಭೂಮಿಗಳಲ್ಲಿ ಕೈಗಾರಿಕಾ ಕೇಂದ್ರಗಳನ್ನು ತೆರಯಲಿ ನಮ್ಮದೇನೂ ಅಭತರವಿಲ್ಲ. ಅದು ಬಿಟ್ಟು ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಳ್ಳುವುದನ್ನು ಸಹಿಸುವುದಿಲ್ಲ. ರೈತರನ್ನು ಕೆಣಕಿದ ಯಾವುದೇ ಸರ್ಕಾರ ಉಳಿದುಕೊಂಡ ಇತಿಹಾಸವಿಲ್ಲ, ಹಾಗಾಗಿ ಇಂತಹ ದುಸ್ಸಾಹಸವನ್ನು ಸರ್ಕಾರ ಹಾಗು ಕೆಐಎಡಿಬಿ ಕೂಡಲೇ ಬಿಡಬೇಕು ಇಲ್ಲವಾದಲ್ಲಿ ಮುಂಭಾರುವ ದಿನಗಳಲ್ಲಿ ರಾಜಾಧತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.