ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ದಿನಭವಿಷ್ಯ 31-10-2023:

1 min read

ಅಕ್ಟೋಬರ್‌ನ ಕೊನೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ.  ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ದಿನಭವಿಷ್ಯ ಹೇಗಿದೆ ತಿಳಿಯೋಣ…

ಮೇಷ ರಾಶಿ:  
ಮೇಷ ರಾಶಿಯವರು ಇಂದು ತಮ್ಮ ಬಾಲ್ಯದ ಗೆಳೆಯರನ್ನು ಭೇಟಿಯಾಗಬಹುದು. ನೀವು ಮಾಡಿದ ಒಳ್ಳೆಯ ಕಾರ್ಯಗಳು ನಿಮಗೂ ಒಳ್ಳೆಯ ಫಲಗಳನ್ನು ನೀಡಲಿವೆ. ಯೋಜಿಸಿ ಕೆಲಸ ಮಾಡುವುದರಿಂದ ಕಾರ್ಯಸಿದ್ಧಿಯಾಗಲಿದೆ.

ವೃಷಭ ರಾಶಿ:  
ವೃಷಭ ರಾಶಿಯವರೇ ನಿಮ್ಮ ಹಾದಿಯಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಆರೋಗ್ಯದ ದೃಷ್ಟಿಯಿಂದಲೂ ದಿನ ಅತ್ಯುತ್ತಮವಾಗಿದೆ. ಜೀವನದಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ತರಲು ಚಿಂತಿಸುತ್ತಿದ್ದರೆ ಇಂದು ಸೂಕ್ತ ಸಮಯ

ಮಿಥುನ ರಾಶಿ:   
ಮಿಥುನ ರಾಶಿಯವರು ಯಾವುದೇ ವಿಚಾರದಲ್ಲಿ ಮುಂದುವರೆಯುವ ಮೊದಲು ನಿಮ್ಮ ತಂದೆ-ತಾಯಿ, ಇಲ್ಲವೇ ಗುರುಗಳಿಂದ ಸಲಹೆ ಪಡೆಯುವುದು ಉತ್ತಮ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆದರೆ, ಅನಾವಶ್ಯಕ ಖರ್ಚನ್ನು ತಪ್ಪಿಸಿ,ಭವಿಷ್ಯಕ್ಕಾಗಿ ಕೂಡಿಡಿ.

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರು ಇಂದು ನಿಮ್ಮ ಕುಟುಂಬದವರೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ನಿಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಯೋಚಿಸಿ ನಿರ್ಧರಿಸಿ. ಆರೋಗ್ಯದ ವಿಷಯದಲ್ಲಿ, ಪರಿಸ್ಥಿತಿಗಳು ಇಂದು ನಿಮ್ಮ ಪರವಾಗಿರುತ್ತವೆ.

ಸಿಂಹ ರಾಶಿ:   
ಸಿಂಹ ರಾಶಿಯವರೇ ನಿಮ್ಮ ಮಾತಿನ ಬಗ್ಗೆ ಸಂಯಮ ಕಾಯ್ದುಕೊಳ್ಳಿ. ಆಡಿದ ಮಾತು ಒಡೆದ ಮುತ್ತು ಎಂದಿಗೂ ಸರಿಹೋಗುವುದಿಲ್ಲ ಎಂಬುದನ್ನೂ ಮರೆಯಬೇಡಿ. ನಿಮ್ಮ ಆಪ್ತರಿಗೆ ನಿಮ್ಮ ಮಾತುಗಳು ನೋವುಂಟು ಮಾಡುವ ಸಾಧ್ಯತೆ ಇರುವುದರಿಂದ ಮಾತಿನ ಬಗ್ಗೆ ಎಚ್ಚರವಿರಲಿ. ಆರ್ಥಿಕವಾಗಿ ಉತ್ತಮ ದಿನ.

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇಂದು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ನೀವು ಸಹಾಯಕ್ಕಾಗಿ ಬೇರೆಯವರ ಮುಂದೆ ಕೈಚಾಚುವ ಮುನ್ನ ನೂರು ಬಾರಿ ಯೋಚಿಸಿ. ಇದಲ್ಲದೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಇಂದು ನಿಮ್ಮನ್ನು ಹೆಚ್ಚು ಬಾಧಿಸಬಹುದು. ಆದಾಗ್ಯೂ, ಹಣಕಾಸಿನ ಸ್ಥಿತಿ ಸ್ಥಿರವಾಗಿರಲಿದೆ.

ತುಲಾ ರಾಶಿ:  
ತುಲಾ ರಾಶಿಯವರಿಗೆ ಇಂದು ವ್ಯಾಪಾರ-ವ್ಯವಹಾರಗಳು ತುಂಬಾ ಏರಿಳಿತಗಳಿಂದ ಕೂಡಿರಲಿದೆ. ಆದಾಗ್ಯೂ, ನಿಮ್ಮ ಪರಿಶ್ರಮದ ಬಗ್ಗೆ ವಿಶ್ವಾಸದಿಂದಿರಿ. ಕತ್ತಲು ಕಳೆದ ಬಳಿಕ ಬೆಳಕು ಮೂಡಲೇಬೇಕು. ಅಂತೆಯೇ, ದಿನಗಳೆದಂತೆ ನಿಮ್ಮ ಕಷ್ಟಗಳು ಕೂಡ ಮಂಜಿನಂತೆ ಕರಗಲಿವೆ.

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಇಂದು ನಿಮ್ಮ ಸಂಗಾತಿಯೊಂದಿಗೆ ಸುಖಾಸುಮ್ಮನೆ ಕೋಪಗೊಳ್ಳುವುದನ್ನು ತಪ್ಪಿಸಿ. ಆರೋಗ್ಯವು ಉತ್ತಮವಾಗಿರಲಿದೆ. ಇಂದು ನೀವು ನಿಮ್ಮ ಭವಿಷ್ಯದ ಬಗ್ಗೆ ಯೋಜಿಸಲು ಸೂಕ್ತವಾಗಿದೆ.

ಧನು ರಾಶಿ:  
ಧನು ರಾಶಿಯವರು ಇಂದು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವಿರಿ. ಆದಾಗ್ಯೂ, ನಿಮ್ಮ ಸೋಮಾರಿತನ ನಿಮ್ಮನ್ನು ಆವರಿಸಲು ಬಿಡಬೇಡಿ. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಟ್ಟ ಗಮನ ಹರಿಸಿ.

ಮಕರ ರಾಶಿ:  
ಮಕರ ರಾಶಿಯವರೇ ಬೆಣ್ಣೆಯಂತೆ ಮಾತನಾಡುವ ಅಪರಿಚಿತರ ಬಗ್ಗೆ ತುಂಬಾ ಜಾಗರೂಕರಾಗಿರಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಒರಟಾಗಿ ಮಾತನಾಡುವುದನು ತಪ್ಪಿಸಿ. ಹಣಕಾಸಿನ ಹರಿವು ಉತ್ತಮವಾಗಿರಲಿವೆ. ಆದಾಗ್ಯೂ, ಭವಿಷ್ಯದ ಹಿತದೃಷ್ಟಿಯಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಕುಂಭ ರಾಶಿ:  
ಕುಂಭ ರಾಶಿಯವರು ಇಂದು ನಿಮ್ಮ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಬಹುದು. ಈ ಸಂಬಂಧ ಹಿರಿಯರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಯೋಗ, ಧ್ಯಾನ ಮಾಡುವುದನ್ನು ಪರಿಗಣಿಸಿ.

ಮೀನ ರಾಶಿ:  
ಮೀನ ರಾಶಿಯವರು ದೀರ್ಘ ಸಮಯದ ಬಳಿಕ ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಆನಂದಿಸುವಿರಿ. ಇದು ನಿಮ್ಮ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವೂ ಇದೆ.

About The Author

Leave a Reply

Your email address will not be published. Required fields are marked *