ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ಚುನಾವಣೆ ಮುಂದೂಡಿಕೆ

1 min read

ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ಚುನಾವಣೆ ಮುಂದೂಡಿಕೆ

ಎರಡು ಮತಪತ್ರಗಳು ನಾಪತ್ತೆ, ಅಧ್ಯಕ್ಷ ಸ್ಥಾನದ ಮತ ಎಣಿಕೆ ರದ್ದು

ಚಿಕ್ಕಬಳ್ಳಾಪುರ ವಕೀಲರ ಸಂಘದ ಮುಂದಿನ ಎರಡು ವರ್ಷಗಳ ಅವದಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹೊರತು ಪಡಿಸಿ ಉಳಿದೆಲ್ಲಾ ಸ್ಥಾನಗಳ ಅಬ್ಯರ್ಥಿಗಳ ಘೋಷಣೆ ಮಾಡಲಾಗಿದೆ, ಅಧ್ಯಕ್ಷ ಸ್ಥಾನದ ಎರಡು ಮತಪತ್ರ ನಾಪತ್ತೆಯಾದ ಕಾರಣ ಗೊಂದಲಗಳಿಗೆ ತೆರೆ ಎಳೆದ ಚುನಾವಣಾದಿಜಾರಿ ಪಿ.ಸುಬ್ರಮಣ್ಯ, ಡಿಸೆಂಬರ್ 3 ರಂದು ಮರು ಚುನಾವಣೆಗೆ ಆದೇಶ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ವಕೀಲರ ಸಂಘದ ಆಡಳಿತ ಮಂಡಳಿಯ ಮುಂದಿನ ಅವಧಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲ ಕೆ ಹೆಚ್ ತಮ್ಮೇಗೌಡ ಹಾಗು ಯುವ ವಕೀಲ ಕೆ.ವಿ. ಅಭಿಲಾಷ್ ನಡುವೆ ಕೇವಲ ಎರಡು ಮತಗಳ ಅಂತರ ಏರ್ಪಟ್ಟಿದೆ. ಆದರೆ ಚಿಕ್ಕಬಳ್ಳಾಪುರ ವಕೀಲರ ಸಂಘದಲ್ಲಿ ಒಟ್ಟು 420 ಮತದಾರರಿದ್ದು, ಇವರಲ್ಲಿ 413 ಮಂದಿ ಮತ ಚಲಾಯಿಸಿದ್ದರು. ಆದರೆ ಚಲಾವಣೆಯಾದ 413 ಮತಗಳಲ್ಲಿ ಎರಡು ಮತಪತ್ರಗಳೇ ಮಾಯವಾಗಿವೆ. ಇಂದರಿ0ದ ಗೊಂದಲ ಸೃಷ್ಟಿಯಾಯಿತು.

ಗುರುವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕೆ.ಹೆಚ್ ತಮ್ಮೇಗೌಡ ಅವರಿಗೆ 109 ಮತ ಲಬಿಸಿದ್ದರೆ, ಅಭಿಲಾಷ್ ಅವರಿಗೆ 107 ಮತ ಲಭಿಸಿವೆ. ಮರು ಎಣಿಕೆ ಮಾಡಿದ ವೇಳೆ ಎರಡು ಮತಪತ್ರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಗೊಂದಲ ಸೃಷ್ಟಿಯಾಗಿ, ಗುರುವಾರ ರಾತ್ರಿ 11 ಗಂಟೆವರೆಗೂ ವಕೀಲರ ಭವನದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮುಕಿ ನಡೆಯಿತು. ಇದರಿಂದಾಗಿ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು. ನಂತರ ಚುನಾವಣಾದಿಕಾರಿ ಪಿ ಸುಬ್ರಮಣಿ ಎರಡು ಮತಪತ್ರಗಳು ಕಾಣೆಯಾಗಿರುವ ಕಾರಣ ಡಿಸೆಂಬರ್ರ 3 0ದು ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಮರುಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದರು.

 

ಇನ್ನು ಫಲಿತಾಂಶ ಪ್ರಕಟವಾದ ೧೧ ಸ್ಥಾನಗಳಲ್ಲಿ ಉಪಾಧ್ಯಕ್ಷರಾಗಿ ಹೆಚ್. ಮುನಿರಾಜು, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ ವೆಂಕಟೇಶ್, ಸಹಕಾರ್ಯದರ್ಶಿಯಾಗಿ ಚಂದ್ರಶೇಖರ್, ಖಜಾಂಚಿಯಾಗಿ ಅಯೂಧ್ ಖಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಮುನಿರಾಜು, ಪ್ರವೀಣ್ ಕುಮಾರ್, ಅಶ್ಬಥ್ ನಾರಾಯಣ್, ನರಸಿಂಹಮೂರ್ತಿ, ರಾಘವೇಂದ್ರ, ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ.

About The Author

Leave a Reply

Your email address will not be published. Required fields are marked *