ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ತೋಳ್ಳಪಲ್ಲಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ

1 min read

ತೋಳ್ಳಪಲ್ಲಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ
ಬಾಗೇಪಲ್ಲಿ ತಾಲೂಕಿನ ತೋಳ್ಳಪಲ್ಲಿಯಲ್ಲಿ ಅಧಿಕಾರಿಗಳ ದಂಡು
ಎನರ ಅಹವಾಲು ಸ್ವೀಕರಿಸಿದ ಶಾಸಕ ಸುಬ್ಬಾರೆಡ್ಡಿ

ಬಾಗೇಪಲ್ಲಿ ತಾಲೂಕಿನ ತೋಳ್ಳಪಲ್ಲಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ಇಂದು ನಡೆಯಿತು. ವಿವಿಧ ಸೌಲಭ್ಯಗಳ ಪ್ರಮಾಣ ಪತ್ರಗಳನ್ನು ಈ ವೇಳೆ ವಿತರಿಸಲಾಯಿತು. ಜನರ ಸಮಸ್ಯೆಗಳನ್ನು ಆಲಿಸಿ, ಅವರಿಂದ ಮನವಿ ಪಡೆದು, ತ್ವರಿತವಾಗಿ ಪರಿಹರಿಸಲು ತೋಳ್ಳಪಲ್ಲಿಯಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತಿಗಳಿ0ದ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಾಗೇಪಲ್ಲಿ ತಾಲೂಕಿನ ತೋಳ್ಳಪಲ್ಲಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ಇಂದು ನಡೆಯಿತು. ವಿವಿಧ ಸೌಲಭ್ಯಗಳ ಪ್ರಮಾಣ ಪತ್ರಗಳನ್ನು ಈ ವೇಳೆ ವಿತರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಜನಸ್ಪಂದನಾ ಕಾರ್ಯಕ್ರದ ಮೂಲಕ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ, ಪರಿಹಾರೋಪಾಯಗಳನ್ನು ನೀಡುತ್ತಾರೆ.ಹಾಗಾಗಿ ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರಸ್ತೆ, ನಿವೇಶನ, ವಸತಿ ಇಲ್ಲದವರಿಗೆ ನಿವೇಶನ ನೀಡಲು, ಪಡಿತರ, ಸಾರಿಗೆ ಸಮಸ್ಯೆ, ಕುಡಿಯುವ ನೀರು ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬ0ಧಿಸಿದ0ತೆ ಸಾಕಷ್ಟು ಅರ್ಜಿಗಳು ಬರುತ್ತಿವೆ.ಗೃಹಲಕ್ಷ್ಮೀ, ಅನ್ನ ಭಾಗ್ಯ ಪೀಡಿತರ ಕಾರ್ಡ್,ಜಮೀನು ಸಮಸ್ಯೆ, ಜಮೀನಿಗೆ ರಸ್ತೆ, ವಿದ್ಯುತ್ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ನೂರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಶಾಸಕರು ತಿಳಿಸಿದರು.

ಇದೇ ವೇಳೆ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವಾರು ರೈತ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಉಪಕರಣಗಳ ವಿತರಣೆ ಮಾಡಲಾಯಿತು.ನಂತರ ರೈತರ ಜಮೀನುಗಳಲ್ಲಿ ಕೈಗೊಂಡ ಬದುಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ನಂತರ ತೋಳ್ಳಪಲ್ಲಿ ಗ್ರಾಮದ ಕಾಲೋನಿಯಲ್ಲಿ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಬೇರ್ಡ್ಕ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ನೆರವೇರಿಸಿದರು.

ಪೆದ್ದರೆಡ್ಡಿಪಲ್ಲಿಯಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮನಿಷಾ ಮಹೇಶ್.ಎಸ್.ಪತ್ರಿ, ತಾಪಂ ಇಓ ರಮೇಶ್, ಬಿಇಓ ಎನ್.ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ, ಸರ್ಕಲ್ ಇನ್ಸ್ ಪೆಕ್ಟರ್ ಜನಾರ್ದನ್, ಬೆಸ್ಕಾಂ ಎಇಇ ಸೋಮಶೇಕರ್, ತೋಟಗಾರಿಕೆ ಇಲಾಖೆಯ ಶಿವಶಂಕರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ ವೆಂಕಟರವಣ, ಉಪಾಧ್ಯಕ್ಷ ಆಂಜನೇಯಲು ಇದ್ದರು.

About The Author

Leave a Reply

Your email address will not be published. Required fields are marked *