ಗೌರಿ ಗಣೇಶ ಹಬ್ಬದ ನಂತರ ಬರುವ ದೊಡ್ಡ ಹಬ್ಬವೆಂದರೆ ನವರಾತ್ರಿ, ಈ ನವರಾತ್ರಿ ಹಬ್ಬದಲ್ಲಿ ಒಂದೊAದು ದಿನವೂ ವಿಭಿನ್ನ, ಇನ್ನು ಒಂಬತ್ತನೇ ದಿನ ಮಹಾನವಮಿ, ಅಂದರೆ ಈ ಮಹಾನವಮಿಯಂದು ಆಯುಧ ಪೂಜೆ ಮಾಡಲಾಗುತ್ತದೆ, ವರ್ಷವಿಡೀ ಬಳಕೆಯ ಎಲ್ಲಾ ಆಯುಧಗಳನ್ನು ಶುಬ್ರಮಾಡಿ ಎಲ್ಲವನ್ನೂ ಜೋಡಿಸಿ ಅದಕ್ಕೆ ಸಂಪ್ರದಾಯದAತೆ ಪೂಜೆಯನ್ನು ಮಾಡುವುದು ಒಂದೆಡೆಯಾದರೆ, ಇನ್ನು ವಾಹನಗಳನ್ನೂ ತೊಳೆದು ಪೂಜೆ ಮಾಡುತ್ತಾರೆ, ಹಾ ಅದರನ್ವಯವೇ ನಮ್ಮ ಸಿಟಿವಿ ವಾಹಿನಿಯಲ್ಲಿಯೂ ಪೂಜೆಯನ್ನು ಶ್ರದ್ದಾ-ಭಕ್ತಿಗಳಿಂದ ಆಚರಿಸಲಾಯಿತು, ಸಿಟಿವಿ ಆಫೀಸ್ ಹಾಗೂ ಚಾನಲ್ ಮತ್ತು ಸಿಬ್ಬಂದಿಯವರ ವಾಹನಗಳಿಗೂ ಪೂಜೆಯನ್ನು ಮಾಡಿ ಸಿಹಿಯನ್ನು ವಿತರಿಸಲಾಯಿತು. ಈ ಸಮಯದಲ್ಲಿ ಚಾನಲ್ ಮುಖ್ಯಸ್ಥರಾದ ಕುಮಾರಸ್ವಾಮಿ, ಚಾನಲ್ ಸಿಬ್ಬಂದಿ, ಚಾನಲ್ ವರದಿಗಾರರು ಸೇರಿದಂತೆ ಆಹ್ವಾನಿತರು ಹಾಜರಿದ್ದರು.