ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಆರಂಭ
1 min readಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಆರಂಭ
ಎಸ್‌ಪಿ ಕುಶಾಲ್ ಚೌಕ್ಸೆ, ವಿಬಾಗೀಯ ಅಧಿಕಾರಿಯಿಂದ ಚಾಲನೆ
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಜನಸಂಚಾರ ಹೆಚ್ಚಾಗಿದೆ, ಇಶಾ ಪ್ರಾರಂಬವಾದ ನಂತರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಬಸ್ ಗಳಲ್ಲಿ ಮೊಬೈಲ್, ಚಿನ್ನದ ಒಡವೆ ಕಲವು ಪ್ರಕರಣಗಳೂ ಹೆಚ್ಚಾಗುತ್ತಿವೆ. ಈ ಹಿನ್ನೆಯಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಇಂದಿನಿ0ದ ಪೂಲೀಸ್ ಚೌಕಿ ಆರಂಭಿಸಲಾಗಿದೆ.
ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಂದಿನಿ0ದ ಪೊಲೀಸ್ ಚೌಕಿ ಪ್ರಾರಂಬಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗಿಯ ಅಧಿಕಾರಿ ಬಸವರಾಜ್ ಚೌಕಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಎಸ್‌ಪಿ ಕುಶಾಲ್ ಚೌಕ್ಸೆ, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇಲ್ಲೆ0ದು ಪೊಲೀಸ್ ಚೌಕಿ ಅಗತ್ಯವಿದೆ ಎಂದು ಇಲಾಖೆ ಒತ್ತಡ ಹಾಗು ಸಾರ್ವಜನಿಕರು ಅಗ್ರಹವಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸ್ ಚೌಕಿ ಪ್ರಾರಂಬಿಸಲಾಗಿದೆ, ಬಸ್ ನಿಲ್ದಾಣದಲ್ಲಿ ಅಪರಾದಗಳ ಸಂಖ್ಯೆ ಕಡಿಮೆಯಾಗಲಿದೆ ಜನರು ನಿರ್ಬೀತಿಯಿಂದ ಪ್ರಯಾಣಿಸಲು ಸಹಾಯವಾಗಲಿದೆ ಎಂದರು.
ಕೆಎಸ್‌ಅರ್‌ಟಿಸಿ ವಿಭಾಗೀಯ ಅಧಿಕಾರಿ ಬಸವರಾಜ್ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಗೆ ಎಲ್ಲ ತಯಾರಿ ನಡೆಯುತ್ತಿದೆ, ಈಗಾಗಲೆ ಬಿಎಂಟಿಸಿ ಬಸ್ ಗಳಲ್ಲಿ ಡಬಿಟ್ ಕಾರ್ಡ್ ಸ್ವೆಪ್ ಮಾಡುವ ವ್ಯವಸ್ಥೆ ಬಂದಿದೆ. ಕೆಎಸ್‌ಆರ್ ಟಿಸಿ ಬಸ್ ಗಳಲ್ಲೂ ಶೀಘ್ರದಲ್ಲಿಯೇ ಆ ವ್ಯವಸ್ಥೆ ಆಗಲಿದೆ. ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ಪ್ರಾರಂಬಾವಗಿರುವುದರಿ0ದ ಇಲಾಖೆಯೂ ನೆಮ್ಮದಿಯಾಗಿ ಕಾರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ. ಜತೆಗೆ ಬಸ್ ನಿಲ್ದಾಣದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲಾಗುವುದು, ಬೇಕಾಬಿಟ್ಟಿ ತಿರುಗಾಡುವವರಿಗೂ ಬ್ರೇಕ್ ಹಾಕಿ ಸಂಚಾರ ಸುಗಮವಾಗಲು ಅನುಕೂಲವಾಗಲಿದೆ ಎಂದರು.
ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ ನಿರ್ಮಾಣಕ್ಕೆ ಟೌನ್ ಪೊಲೀಸ್ ಎಎಸ್‌ಐ ರಂಗನಾಥ್ ಮತ್ತು ಸ್ಟಾಂಡ್ ಇಂಚಾರ್ಜ್ ನಾಗೇಶ್ ಶ್ರಮವಹಿಸಿ ಇಂದು ಪೊಲೀಸ್ ಚೌಕಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇಂದು ನಡೆದ ಪೊಲೀಸ್ ಚೌಕಿ ಉದ್ಘಾಟನೆ ವೇಳೆ ಎಎಸ್‌ಪಿ ರಾಜಾ ಇಬ್ರಾಹಿಂ ಖಾಸಿಂ, ವೃತ್ತ ನಿರೀಕ್ಷಕ ಮಂಜುನಾಥ್, ಸಂಚಾರಿ ಪೊಲೀಸ್ ಠಾಣೆ ಎಸ್‌ಐ ಮಂಜುಳ ಇದ್ದರು.