ರೈತಸಂಘದ ಸದಸ್ಯರಿಂದ ಶಿರಸ್ತೇದಾರ್‌ಗೆ ಮನವಿ
1 min readರೈತಸಂಘದ ಸದಸ್ಯರಿಂದ ಶಿರಸ್ತೇದಾರ್‌ಗೆ ಮನವಿ
ಶಿಡ್ಲಘಟ್ಟ ಶಿರಸ್ತೇದಾರ್ ಆಸೀಯಾ ಆವರಿಗೆ ಮನವಿ
ರಾಗಿ ಕಟಾವು ಯಂತ್ರದ ಮಾಲೀಕರು ಹಾಗೂ ಮಧ್ಯವರ್ತಿಗಳು ಹೆಚ್ಚಾಗಿ ಹಣ ಪಡೆಯುತ್ತಿರುವ ಕಾರಣ ರೈತರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ತಹಶೀಲ್ದಾರ್‌ಗೆ ಹಕ್ಕು ದಾಖಲೆ ಶಿರಸ್ತೇದಾರ್ ಆಸೀಯಾ ಆವರಿಗೆ ಮನವಿ ಸಲ್ಲಿಸಿದರು.
ರಾಗಿ ಬೆಳೆ ಕಟಾವು ಮಾಡುವ ಹಂತದಲ್ಲಿದ್ದು, ಕೂಲಿಯಾಳುಗಳ ಸಮಸ್ಯೆ ಮನಗಂಡು ಜಿಲ್ಲಾಧಿಕಾರಿ ಅವರು ಕಟಾವು ಮಾಡುವ ಯಂತ್ರಕ್ಕೆ ಒಂದು ಗಂಟೆಗೆ 2,700 ರೂ ಪಡೆಯುವಂತೆ ಆದೇಶ ಮಾಡಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಟಾವು ಯಂತ್ರದ ಮಾಲೀಕರು ಅಥವಾ ಮಧ್ಯವರ್ತಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಲವು ಕಡೆ ಮನಬಂದ0ತೆ 3,500 ರಿಂದ 5 ಸಾವಿರದವರೆಗೂ ಮಧ್ಯವರ್ತಿಗಳ ಮೂಲಕ ವಲೂಲಾತಿ ನಡೆಯುತ್ತಿದೆ. ಈ ಬಗ್ಗೆ ತಾವು ಪರಿಶೀಲನೆ ನಡೆಸಬೇಕು. ಹೋಬಳಿವಾರು ರಜಸ್ವ ನಿರೀಕ್ಷಕರ ಮೂಲಕ ವರದಿ ತೆಗೆದುಕೊಂಡು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಆ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಕೋಟೆ ಚನ್ನೇಗೌಡ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ನಾಗರಾಜ್, ಮಾರುತಿ, ನಾಘರಾಜು, ಶ್ರೀಧರ ಇದ್ದರು.