ಎನ್ ಪಿ ಎಸ್ ನೌಕರರ ಸಂಘದಿ0ದ ಶಿಡ್ಲಘಟ್ಟದಲ್ಲಿ ಮನವಿ
1 min readಒಪಿಎಸ್ ಜಾರಿಗೊಳಿಸಲು ಒತ್ತಾಯಿಸಿ ಮನವಿ
ಎನ್ ಪಿ ಎಸ್ ನೌಕರರ ಸಂಘದಿ0ದ ಶಿಡ್ಲಘಟ್ಟದಲ್ಲಿ ಮನವಿ
ರಾಜ್ಯ ಸರಕಾರಿ ನೌಕರರಿಗೆ ಈಗ ಇರುವ ನೂತನ ಪಿಂಚಣಿ ಯೋಜನೆ ಹಾಗು ಯೂನಿಪೈಡ್ ಪೆನ್ಷನ್ ಸ್ಕೀಮ್ ರದ್ದುಪಡಿಸಿ ಈ ಹಿಂದೆ ಇದ್ದ ನಿಶ್ಚಿತ ಪಿಂಚಣಿಯೋಜನೆ ಮರು ಜಾರಿ ಮಾಡಬೇಕೆಂದು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಗಜೇಂದ್ರ ಆಗ್ರಹಿಸಿದರು.
ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ಎನ್.ಪಿ.ಎಸ್ ನೌಕರರ ಸಂಘದ ಮೂಲಕತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರುಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಗಜೇಂದ್ರ, ದೇಶಾದ್ಯಂತ ಎನ್.ಪಿ.ಎಸ್ ವಿರೋಧಿಸಿಕಳೆದ ಹಲವು ವರ್ಷಗಳಿಂದ ನೌಕರರು ನಡೆಸಿದ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಒ.ಪಿ.ಎಸ್ ಜಾರಿಗೊಳಿಸುವ ಬದಲು ಯು.ಪಿ.ಎಸ್‌ಅಂದರೆ ಯೂನಿಪೈಡ್ ಪೆನ್ಷನ್ ಸ್ಕೀಮ್ ಜಾರಿಗೊಳಿಸಲು ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿಧರಿಸಲಾಗಿದೆ ಎಂದರು.
ಈ ಯೋಜನೆ ಷೇರು ಮಾರುಕಟ್ಟೆ ಆಧಾರಿತವಾಗಿದ್ದು, ಸರ್ಕಾರಿ ನೌಕರರ ಸಂದ್ಯಾ ಕಾಲದ ಬದುಕಿಗೆ ಯಾವುದೇ ಭದ್ರತೆ ಒದಗಿಸುವ ಅಂಶಗಳನ್ನು ಹೊಂದಿಲ್ಲ. ಹಾಗಾಗಿ ಇಂದು ರಾಜ್ಯಾಧ್ಯತ ನೋ ಎನ್ಪಿಎಸ್, ನೋ ಯುಪಿಎಸ್, ಓನ್ಲಿ ಓಪಿಎಸ್ ಶೀರ್ಷಿಕೆಯಡಿ ಓಪಿಎಸ್ ಜಾರಿಗೊಳಿಸಿವಂತೆ ಮನವಿ ಸಲ್ಲಿಸಲಾಗುತ್ತಿದೆ ಎಂದರು. ಕಾಂಗ್ರೆಸ್ ಈ ಹಿಂದೆ ನೀಡಿರುವ ಭರವಸೆಯಂತೆ ಎನ್ಪಿಎಸ್ ಅನ್ನು ರದ್ದುಗೊಳಿಸಿ ಓಪಿಎಸ್ ಅನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಗಜೇಂದ್ರ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಟಿ.ನರಸಿಂಹಪ್ಪ, ಸಹಕಾರ್ಯದರ್ಶಿ ಶಿವಶಂಕರ್, ಜಂಟಿ ಕಾರ್ಯದರ್ಶಿ ಸರಿತ, ಮುರಳಿ ಮೋಹನ್, ಬಿ.ಆರ್. ನಾರಾಯಣಸ್ವಾಮಿ, ಎಲ್.ವಿ.ವೆಂಕಟರೆಡ್ಡಿ, ಅಕ್ಕಲರೆಡ್ಡಿ ಇದ್ದರು.