ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ
1 min readಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಸೌಹಾರ್ಧ.ಯುತವಾಗಿ ಹಬ್ಬ ಆಚರಿಸಲು ಮನವಿ
ಬಾಗೇಪಲ್ಲಿಯಲ್ಲಿ ಹಿಂದೂ-ಮುಸ್ಲಿಮ್ ಸೌಹಾರ್ಧಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಬಾಗೇಪಲ್ಲಿ ಪಟ್ಟಣದ ಠಾಣೆ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ ತಿಳಿಸಿದರು.
ಬಾಗೇಪಲ್ಲಿಯಲ್ಲಿ ಹಿಂದೂ-ಮುಸ್ಲಿಮ್ ಸೌಹಾರ್ಧಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಬಾಗೇಪಲ್ಲಿ ಪಟ್ಟಣದ ಠಾಣೆ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಕರೆದಿದ್ದ ಮೊಹರಂ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬ ಆಚರಿಸಬೇಕು ಎಂದರು.
ಮೊಹರo ಸರ್ವಧರ್ಮೀಯರ ಭಾತೃತ್ವದ ಸಂಕೇತವಾಗಿದೆ. ಎಲ್ಲಾ ಧರ್ಮದವರು ಶಾಂತಿ, ಸಹನೆ, ಪ್ರೀತಿ, ಭಕ್ತಿಯಿಂದ ಪಾಲ್ಗೊಂಡು ಹಬ್ಬ ಸಂಭ್ರಮದಿAದ ಆಚರಿಸಬೇಕು. ಒಂದು ವೇಳೆ ಸಮಾಜದಲ್ಲಿ ಅಶಾಂತಿ ಕದಡುವ ಚಟುವಟಿಕೆಗಳಿಗೆ ಕೈ ಹಾಕಿದರೆ ಮತ್ತು ಯಾವುದೇ ಸಂದರ್ಭದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡರೆ ಅಂಥವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಾಗೇಪಲ್ಲಿ ಪಟ್ಟಣದ ಪೋಲಿಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್ ಆರ್ ವರ್ಣಿ ಎಚ್ಚರಿಕೆ ನೀಡಿದರು.