ಏರ್ಪೋಟ್‌ನಲ್ಲಿ ಟ್ಯಾಕ್ಸಿಗಾಗಿ ಪ್ರಯಾಣಿಕರ ಪರದಾಟ
1 min readಏರ್ಪೋಟ್‌ನಲ್ಲಿ ಟ್ಯಾಕ್ಸಿಗಾಗಿ ಪ್ರಯಾಣಿಕರ ಪರದಾಟ
ಪಿಕ್ ಸಮಯದಲ್ಲಿ ಹೆಚ್ಚಾಯ್ತು ಕ್ಯಾಬ್ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ನಲ್ಲಿ ಕ್ಯಾಬ್‌ಳಿಗೆ ಡಿಮ್ಯಾಂಡ್
ಸರದಿ ಸಾಲಿನಲ್ಲಿ ನಿಂತು ಕ್ಯಾಬ್‌ಗೆ ಕಾಯಬೇಕಾದ ಸ್ಥಿತಿ
ಎಕ್ಸ್ ಖಾತೆಗಳಲ್ಲಿ ಪ್ರಯಾಣಿಕರ ಅಸಮಾಧಾನ
ಗಾರ್ಡನ್ ಟರ್ಮಿನಲ್ ಎಂದೇ ಖ್ಯಾತಿ ಪಡೆದಿರೋ ಕೆಂಪೇಗೌಡ ಅಂತಾರಾಷ್ಟಿಯ ವಿಮಾನ ನಿಲ್ದಾಣದಲ್ಲಿ ಇಷ್ಟು ದಿನ ಪ್ರಯಾಣಿಕರು ಕ್ಯಾಬ್‌ಗಳಲ್ಲಿ ನೆಮ್ಮದಿಯಿಂದ ಪ್ರಯಾಣ ಮಾಡುತ್ತಿದ್ರು. ಆದ್ರೆ ಇತ್ತೀಚೆಗೆ ಏರ್‌ಪೋರ್ಟ್ನಲ್ಲಿ ಕ್ಯಾಬ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಪ್ರಯಾಣಿಕರು ಕ್ಯಾಬ್ ಹತ್ತಲು ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಏರ್‌ಪೋರ್ಟ್ನಲ್ಲಿ ಕ್ಯಾಬ್‌ಗಳಿಗಾಗಿ ಕ್ಯೂ ನಿಂತಿರೋ ಪ್ರಯಾಣಿಕರು, ನಗರದ ವಿವಿಧೆಡೆಗೆ ತೆರಳಲು ಕ್ಯಾಬ್‌ಗಳಿಗಾಗಿ ಪ್ರಯಾಣಿಕರು ಪರದಾಟ, ಈ ದೃಶ್ಯಗಳು ಕಂಡು ಬಂದಿದ್ದು ಕೆಂಪೇಗೌಡ ಅಂತಾರಾಷ್ಟಿಯ ವಿಮಾನ ನಿಲ್ದಾಣದಲ್ಲಿ. ಏರೋಓಪ್ರೋಟ್‌ನಲ್ಲಿ ಕಳೆದ ಒಂದು ತಿಂಗಳಿನಿ0ದ ಕ್ಯಾಬ್‌ಗಳ ಸಮಸ್ಯೆ ಎದುರಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಏರ್‌ಪೋರ್ಟ್ನಲ್ಲಿ ಒಲಾ ಉಬರ್ ಏರ್‌ಪೋರ್ಟ್ ಟ್ಯಾಕ್ಸಿ, ಮೆರೂ ಅಂತಾ ಸಾವಿರಾರು ಕ್ಯಾಬ್‌ಗಳಿವೆ. ದೇಶ ವಿದೇಶಗಳಿಂದ ಬರೋ ಪ್ರಯಾಣಿಕರನ್ನ ನಗರದಿಂದ ಏರ್‌ಪೋರ್ಟ್ಗೆ, ಏರ್‌ಪೋರ್ಟ್ಟನಿಂದ ನಗರಕ್ಕೆ ತಲುಪಿಸಲು ನಿಮಿಷಕ್ಕೆ ಹತ್ತಾರು ಕ್ಯಾಬ್‌ಗಳು ಸಿಗುತ್ತಿತ್ತು.
ಅತಿ ಹೆಚ್ಚು ಪ್ರಯಾಣಿಕರು ಓಲಾ ಉಬರ್ ಕ್ಯಾಬ್‌ಗಳು ಕಡಿಮೆ ಬೆಲೆಗೆ ಸಿಗುತ್ತೆ ಅಂತಾ ಅದಕ್ಕೆ ಮೊರೆ ಹೊಗ್ತಿದ್ದರು. ಆದ್ರೆ ಓಲಾ ಉಬರ್ ಕ್ಯಾಬ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಕ್ಯಾಬ್‌ಗಳಿಗಾಗಿ ಪ್ರಯಾಣಿಕರು ಏರ್‌ಪೋರ್ಟ್ನಲ್ಲಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಕೆಂಡ್‌ನಲ್ಲಿ ಅತಿ ಹೆಚ್ಚು ಪ್ರಯಾಣಿಕರು ಬೇರೆ ಬೇರೆ ಕಡೆ ತೆರಳಿ ರಾಜ್ಯಕ್ಕೆ ವಾಪಸ್ ಬರ್ತಾರೆ. ಈ ವೇಳೆ ಮಿಡ್ ನೈಟ್ ವರೆಗೂ ಓಲಾ ಉಬರ್ ಸಿಗದೇಬುಕ್ ಮಾಡಿಕೊಂಡಿರೋ ಪ್ರಯಾಣಿಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಬಂಡವಾಳ ಹಾಕಿ ಕಾರು ಖರೀದಿಸಿ ಓಲಾ ಉಬರ್‌ಗೆ ಅಟ್ಯಾಚ್ ಮಾಡಿರೋ ಚಾಲಕರಿಗೆ ಓಲಾ ಉಬರ್ ಪ್ರತಿ ಕೀಮಿ ಕೋಡುವ ಹಣ ವರ್ಕೌಟ್ ಆಗ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಓಲಾ ಉಬರ್ ಪ್ರತಿ ಕೀಲೋ ಮೀಟರ್‌ಗೆ ಏರ್‌ಪೋರ್ಟ್ನಿಂದ ನಗರಕ್ಕೆ 10 ರಿಂದ 11 ರೂಗಳನ್ನ ಚಾಲಕರಿಗೆ ಕೊಡುತ್ತಿದೆಯಂತೆ.
ಇದರಿ0ದ ಚಾಲಕರಿಗೆ ಡೀಸೆಲ್, ಖರ್ಚುಗಳಿಗೆ ಸಾಕಾಗುತ್ತಿಲ್ಲ ಎನ್ನುವ ಮಾತಿದೆ. ಇದೇ ಚಾಲಕರು ಬೆಂಗಳೂರು ನಗರದಲ್ಲಿ ಓಲಾ ಉಬರ್ ಪಿಕಪ್‌ಗೆ ಪ್ರತಿ ಕೀಲೋ ಮೀಟರ್‌ಗೆ 25 ರೂ ಆಪ್‌ನವರು ಕೊಡುತ್ತಿದ್ದು, ಏರ್‌ಪೋರ್ಟ್ನಿಂದ ನಗರದ¯್ಲೆ ಕೆಲಸ ಮಾಡಿಕೊಳ್ಳೊಣ ಅಂತಾ ಡೈವರ್ಟ್ ಆಗಿರೋದೆ ಇದಕ್ಕೆಲ್ಲಾ ಕಾರಣ ಅಂತಾ ಚಾಲಕರು ಹೇಳ್ತಿದ್ದಾರೆ.
ಒಟ್ಟಾರೇ ಏರೋಓಪೋರ್ಟ್ನಲ್ಲಿ ಬಿಎಂಟಿಸಿ ಸೇರಿದಂತೆ ಇನ್ನಿತರ ಟ್ಯಾಕ್ಸಿಗಳು ಇದ್ದರು, ಒಲಾ ಉಬರ್‌ನಲ್ಲಿ ಕಡಿಮೆ ಬೆಲೆ ಅಂತಾ ಸಾಕಷ್ಟು ಪ್ರಯಾಣಿಕರು ಇದಕ್ಕೆ ಮೊರೆ ಹೋಗ್ತಿದ್ದಾರೆ. ಈ ನಿಟ್ಟಿನಲ್ಲಿ ಬೇಡಿಕೆಗೆ ಅನುಗುಣವಾಗಿ ಏರ್‌ಪೋರ್ಟ್ನಲ್ಲಿ ಪ್ರಯಾಣಿಕರಿಗೆ ಒಲಾ ಉಬರ್ ಕಂಪನಿಗಳು ಟ್ಯಾಕ್ಸಿ ಒದಗಿಸುವಲ್ಲಿ ವಿಫಲವಾಗ್ತಿವೆ ಎನ್ನುವ ಮಾತಿದ್ದು, ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ.