ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ದುರ್ಬಲ ಫೀಲ್ಡಿಂಗ್ ತಂಡ – ಗೌತಮ್ ಗಂಭೀರ್!
1 min readಅಫಘಾನಿಸ್ತಾನ ವಿರುದ್ಧ 8 ವಿಕೆಟ್ ಗಳ ಸೋಲು ಕಂಡಿರುವ ಪಾಕಿಸ್ತಾನ, 2023ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ದುರ್ಬಲ ಫೀಲ್ಡಿಂಗ್ ಹೊಂದಿರುವ ತಂಡವಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಕಟುವಾಗಿ ಟೀಕಿಸಿದ್ದಾರೆ.
ಸೋಮವಾರ (ಅಕ್ಟೋಬರ್ 23) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಫಘಾನಿಸ್ತಾನ 283 ರನ್ ಗಳ ಗುರಿಯನ್ನು ಮೆಟ್ಟಿ ನಿಂತು, ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಸೋಲಿನಿಂದಾಗಿ 2023ರ ಒಡಿಐ ವರ್ಲ್ಡ್ ಕಪ್ ನ ಆರಂಭಿಕ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಬಾಬರ್ ಆಝಮ್ ಪಡೆ ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿ ಸೆಮಿಫೈನಲ್ ಟಿಕೆಟ್ ತಪ್ಪಿಸಿಕೊಳ್ಳುವ ಭೀತಿಯಲ್ಲಿದೆ.
ಅಫ್ಘಾನ್ ವಿರುದ್ಧ ಪಾಕ್ 8 ವಿಕೆಟ್ ಗಳ ಸೋಲಿಗೆ ದುಬಾರಿ ಫೀಲ್ಡಿಂಗ್ ಕಾರಣವಾಗಿದ್ದು, ಪಾಕಿಸ್ತಾನದ ದಿಗ್ಗಜರಾದ ವಾಸಿಮ್ ಅಕ್ರಮ್, ಮೊಯಿನ್ ಖಾನ್ ಸೇರಿದಂತೆ ಹಲವು ದಿಗ್ಗಜರು ಪಾಕ್ ಆಟಗಾರರ ಕಳಪೆ ಗುಣಮಟ್ಟದ ಫೀಲ್ಡಿಂಗ್ ಹಾಗೂ ಫಿಟ್ನೆಸ್ ಅನ್ನು ಕಟುವಾಗಿ ಟೀಕಿಸಿದ್ದಾರೆ. ಪಾಕ್ ನ ಸ್ಪಿನ್ ವಿಭಾಗ ಕೂಡ ದುರ್ಬಲವಾಗಿದ್ದು, ಮಧ್ಯಮ ಓವರ್ ಗಳಲ್ಲಿ ವಿಕೆಟ್ ಪಡೆಯದಿರುವುದು ತಂಡದ ಸೋಲಿಗೆ ಕಾರಣವಾಗಿದೆ ಎಂದು ನಾಯಕ ಬಾಬರ್ ಆಝಮ್ ಹೇಳಿದ್ದಾರೆ.