ಮಿತಿ ಮೀರಿದ ಭಾರ ಹೊತ್ತ ಗಣಿಗಾರಿಕಾ ವಾಹನ ಘರ್ಜಜ
1 min readಮಿತಿ ಮೀರಿದ ಭಾರ ಹೊತ್ತ ಗಣಿಗಾರಿಕಾ ವಾಹನ ಘರ್ಜಜ
ಟಿಪ್ಪರ್ ವಾಹನ ಸಂಚಾರ ತಡೆಯಲು ಶಾಸಕರ ಸೂಚನೆ
ನಿಯಮ ಉಲ್ಲಂಘಿಸಿ ಮಿತಿಮೀರಿದ ಭಾರ ಹೊತ್ತ ಕಲ್ಲು ಗಣಿಗಾರಿಕಾ ಲಾರಿಗಳ ಸಂಚಾರದಿoದ ರಸ್ತೆಗಳು ಹಾಳಾಗುತ್ತಿವೆ. ಇವನ್ನು ತ್ತಕ್ಷಣದಿಂದಲೇ ತಡೆಯಬೇಕು. ಇಲ್ಲದಿದ್ದರೇ ನಾನೇ ಹಿಡಿಯುತ್ತೇನೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಿಳಿಸಿದರು.
ನಿಯಮ ಉಲ್ಲಂಘಿಸಿ ಮಿತಿಮೀರಿದ ಭಾರ ಹೊತ್ತ ಕಲ್ಲು ಗಣಿಗಾರಿಕಾ ಲಾರಿಗಳ ಸಂಚಾರದಿoದ ರಸ್ತೆಗಳು ಹಾಳಾಗುತ್ತಿವೆ. ಇವನ್ನು ತ್ತಕ್ಷಣದಿಂದಲೇ ತಡೆಯಬೇಕು. ಇಲ್ಲದಿದ್ದರೇ ನಾನೇ ಹಿಡಿಯುತ್ತೇನೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲ ಸಭೆ ನಡೆಸಲಾಯಿತು.
ಈ ವೇಳೆ ಗಣಿ ಮತ್ತು ಭೂ ವಿಜ್ಙಾನ ಇಲಾಖೆ, ಆರ್.ಟಿ.ಓ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ನಿಯಮ ಮೀರಿ ಅಧಿಕ ಭಾರ ಹೊತ್ತು ಸಾಗುತ್ತಿರುವ ಗಣಿಗಾರಿಕಾ ಲಾರಿಗಳಿಂದ ಈ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಇದನ್ನು ಕೂಡಲೇ ಅಧಿಕಾರಿಗಳು ನಿಲ್ಲಿಸಬೇಕು ಇಲ್ಲದಿದ್ದರೆ ನಾನೇ ಬಂದು ನಿಲ್ಲಿಸುತ್ತೇನೆ ಎಂದು ಖಾರವಾಗಿ ಎಚ್ಚರಿಸಿದರು. ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಹಲವಾರು ಗ್ರಾಮೀಣ ರಸ್ತೆಗಳು ಗಣಿಗಾರಿಕಾ ವಾಹನಗಳ ಸಂಚಾರದಿoದ ಹಾಳಾಗಿವೆ. ಇದರಿಂದಾಗಿ ನನಗೂ ಮುಜುಗರ ಉಂಟು ಮಾಡಿದೆ ಎಂದರು.
ತಾಲೂಕಿನಲ್ಲಿ 83 ಕೆಎಸ್‌ಆರ್ಟಿಸಿ ಬಸ್ಸುಗಳು ನಿಷ್ಕೃಯವಾಗಿದ್ದು, ಅವಧಿ ಮೀರಿ, ಕ್ರಮಿಸಬೇಕಾದ ದೂರಕ್ಕಿಂತಲೂ ಹೆಚ್ಚು ದೂರ ಕ್ರಮಿಸಿವೆ. ಒಂದೊoದು ಸುಮಾರು 9 ಲಕ್ಷ ಕಿ.ಮೀ ಕ್ರಮಿಸಿವೆ. ಹಾಗಾಗಿ ಗ್ರಾಮೀಣ ಜನತೆಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಲಾಗಿತ್ತಿಲ್ಲ ಎಂದು ಕೆಎಸ್‌ಆರ್ಟಿಸಿ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕ, ಇದರಿಂದ ಪ್ರಯಾಣಿಕರಿಗೆ ಹೆಚ್ಚುಕಮ್ಮಿಯಾದರೆ ಹೇಗೆ, ಸಂಬoಧಪಟ್ಟ ಸಚಿವರೊಂದಿಗೆ ಚರ್ಚಿಸುವೆ ಅವುಗಳ ಸಂಪೂರ್ಣ ಮಾಹಿತಿ ನೀಡಿ ಎಂದರು.
ಕೇoದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಜಲ ಜೀವನ್ ಮಿಷನ್ ಕಾಮಗಾರಿ ಪೈಪ್‌ಲೈನ್ ಅಳವಡಿಸಲು ನಡು ರಸ್ತೆಗಳನ್ನು ಅಗೆದು ಅದ್ವಾನ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹಾಗಾಗಿ ರಸ್ತೆ ಬದಿಯಲ್ಲಿ ಅಗೆದು,ಕಾಮಗಾರಿ ಮುಗಿದ ಮೇಲೆ ಅದನ್ನು ಸರಿಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಆರೋಗ್ಯ ಇಲಾಖೆ, ಕೃಷಿ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆಯಿಂದ ಜನರ ಅಹವಾಲು ಕೇಳಲು, ಸರಕಾರಿ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಈ ವೇಳೆ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ, ಇಓ ರಮೇಶ್, ತಾಲೂಕು ವೈಧ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ, ಸಹಾಯಕ ಕೃಷಿ ನಿರ್ದೇಶಕಿ ಲಕ್ಷಿ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday