ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಶಾಸಕರ ವಿರುದ್ಧ ಬಿಜೆಪಿ ನಿಯೋಗದ ಆಕ್ರೋಶ

1 min read

ಶಾಸಕರ ವಿರುದ್ಧ ಬಿಜೆಪಿ ನಿಯೋಗದ ಆಕ್ರೋಶ

ಸಂಸದರ ಬಗ್ಗೆ ಅವಾಚ್ಯ ಶಬ್ದ ಬಳಕೆ ವಿರುದ್ಧ ಮಾನ ನಷ್ಟ ಮೊಕದ್ದಮೆ

ಶಾಸಕರ ವಿರುದ್ಧ ೫ ಅಂಶಗಳ ಬಹಿರಂಗ ಚರ್ಚೆಗೆ ಪಂಥಾಹ್ವಾನ

ಶಾಸಕರ ವಧಿಯ ಅಭಿವೃದ್ಧಿಯ ಬಗ್ಗೆ ಶ್ವೇತ ಪತ್ರ ಹೊರಡಿಸಲು ಆಗ್ರಹ

ಸಂಸದ ಡಾ.ಕೆ. ಸುಧಾಕರ್ ಮತ್ತು ಅವರ ತಂದೆ ಪಿ.ಎನ್. ಕೇಶವರೆಡ್ಡಿ ವಿರುದ್ಧ ಅವಹೇಳನಕಾರಿಯಾಗಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ. ಅವರ ಮಾತಿನ ವರಸೆ ಹೀಗೇ ಮುಂದುವರಿದರೆ ಅವರಿಗೆ ಅವರದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಲಾಗುವುದು, ಅಷ್ಟೇ ಅಲ್ಲ ಅವರು ಹೆಜ್ಜೆ ಇಟ್ಟ ಕಡೆಯಲ್ಲೆಲ್ಲಾ ಅವರಿಗೆ ಪಾಠ ಕಲಿಸುವ ಕೆಲಸ ಮಾಡಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ಗಜೇಂದ್ರ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಗರಸಭೆ ನೂತನ ಅಧ್ಯಕ್ಷ ಗಜೇಂದ್ರ ಶಾಸಕರಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ. ಬಾಯಿಗೆ ಬಂದ0ತೆ ಮಾತನಾಡುವುದನ್ನೇ ರೂಡಿಸಿಕೊಂಡಿದ್ದಾರೆ. ಹಿರಿಯರಿಗೆ ಗೌರವ ನೀಡಬೇಕು ಎಂಬ ಕನಿಷ್ಠ ಗೌರವ ಇಲ್ಲ. ಶಿಕ್ಷಕರು ಎಂದು ಹೇಳಿಕೊಳ್ಳುವ ಶಾಸಕರು, ಇವರ ಅಕಾಡೆಮಿಯಲ್ಲಿನ ಮಕ್ಕಳಿಗೆ ಇದೇ ಭಾಷೆಯನ್ನು ಕಲಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ. ಆದರೆ ಈ ಸಂಬ0ಧ ಪ್ರಕರಣ ನ್ಯಾಯಲಯದಲ್ಲಿರುವ ಕಾರಣ ಕೋರ್ಟಿನ ಆದೇಶದ ನಂತರ ಅಧಿಕಾರ ಸ್ವೀಕಾರ ಮಾಡಲಾಗುವುದು. ನಗರಸಭೆ ಅಧ್ಯಕ್ಷರಾಗಲು ಸಹಕಾರ ಕೊಟ್ಟ ಎಲ್ಲ ಸದಸ್ಯರಿಗೆ ಋಣಿಯಾಗಿರುತ್ತೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಗೊಂದಲ ಮಾಡಿತು. ಆದರೂ ಸದಸ್ಯರು ನಮ್ಮ ಸಂಸದರ ಮೇಲೆ ವಿಶ್ವಾಸ ಇಟ್ಟು ನಮ್ಮನ್ನು ಬೆಂಬಲಿಸಿದ್ದಾರೆ. ಹಾಗಾಗಿ ಅವರಿಗೆ ಸದಾ ಋಣಿಯಾಗಿರುತ್ತೇವೆ ಎಂದರು.

ಇನ್ನು ಚಿಕ್ಕಬಳ್ಳಾಪುರ ಶಾಸಕರಿಗೆ ಮಾತಿನ ಮೇಲೆ ಹಿಡಿತ ಇಲ್ಲವಾಗಿದೆ. ಸಂಸದರ ತಂದೆ ತಾಯಿ ಬಗ್ಗೆ ಮಾತನಾಡಿರುವುದು ಖಂಡನೀಯ, ಅವರ ಮಾತು ಹೀಗೇ ಮುಂದುವರಿಸಿದರೆ ಅದೇ ಭಾಷೆಯಲ್ಲಿ ನಾವು ಬಳಸುತ್ತೇವೆ ಆ ಮೂಲಕ ಶಾಸಕರಿಗೆ ಪ್ರತ್ಯುತ್ತರ ನೀಡಲಾಗುತ್ತದೆ. ನಿಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಏನು ಅನ್ನೋದನ್ನು ತಿಳಿಸಿ ಎಂದು ಸವಾಲು ಹಾಕಿದರು.

ನಗರಸಭೆ ನೂತನ ಉಪಾಧ್ಯಕ್ಷ ಜೆ. ನಾಗರಾಜ್ ಮಾತನಾಡಿ, ಶಾಸಕರಿಗೆ ಎದು ಪ್ರಶ್ನೆಗಳನ್ನು ಹಾಕಿದರು. ಶಾಸಕರ ಭಾಷೆಯಲ್ಲಿಯೇ ಹೇಳುವುದಾದರೆ ಅವರಿಗೆ ತಾಕತ್ತಿದ್ದರೆ ಉತ್ತರಿಸಬೇಕು, ಇಲ್ಲವೇ ಬಹಿರಂಗ ಚರ್ಚೆಗೆ ಬರಬೇಕು ಎಂದು ಸವಾಲು ಹಾಕಿದರು. ಪ್ರದೀಪ್ ಈಶ್ವರ್ ಅವರು ತಾವು ಶಸಾಕರು ಎಂಬುದನ್ನು ಮರೆತು, ಗಲ್ಲಿ ಜನರು ಮಾತನಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಸಚಿವರ ತಂದೆ ಶಿಕ್ಷಕರಾಗಿ, ಕೃಷಿಕರಾಗಿ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ತಮ್ಮದೇ ಆದ ಕೊಡುಗೆಯನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ್ದಾರೆ.

ಅಂತಹ ವ್ಯಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ಶಾಸಕರು ಮಾತನಾಡಿದ್ದಾರೆ. ಮೆದುಳು ಮತ್ತು ನಾಲಿಗೆ ನಡುವೆ ಸಂಪರ್ಕ ಕಡಿತವಾದಾಗ ಇಂತಹ ಮಾತು ಬರುತ್ತೆ, ಇದೇ ರೀತಿಯಲ್ಲಿ ಸದನದಲ್ಲಿಯೂ ಮಾತನಾಡಿ, ಸಭಾಧ್ಯಕ್ಷರೇ ಕಬ್ಬಿಣ ನೀಡುವಂತೆ ಹೇಳಿದ್ದರು. ಆ ಮೂಲಕ ಚಿಕ್ಕಬಳ್ಳಾಪುರದ ಮರ್ಯಾದೆಯನ್ನು ಸದನದಲ್ಲೂ ಶಾಸಕರು ತೆಗೆದಿದ್ದಾರೆ. ಕೇಶವರೆಡ್ಡಿ ಅವರ ಅನುಭವದಷ್ಟೂ ವಯಸ್ಸಿಲ್ಲದ ಶಾಸಕರು, ನಾಲಿಗೆ ಹರಿಯಬಿಡುತತಿರುವುದು ವಿಪರ್ಯಾಸ ಎಂದರು.

ಯಾವುದೇ ಸೈನ್ಯದ ಮುಂದೆ ನಿಲ್ಲುವವರನ್ನು ಸೇನಾಧಿಪತಿ ಎಂದು ಕರೆಯುತ್ತಾರೆ. ಅಂತಹ ಸೇನಾಪತಿಯಾಗಿ ನೆನ್ನೆ ನಡೆದ ನಗರಸಭೆ ಚುನಾವಣಯೆಲ್ಲಿ ಸಂಸದರು ನಿಂತಿದ್ದಾರೆ. ಅಂತಹ ವ್ಯಕ್ತಿಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಶಾಸಕರು ತಮ್ಮ ತನವನ್ನು ತೋರಿಸಿದ್ದಾರೆ. ಇನ್ನು ಸವಿತಾ ಸಮಾಜದವರು ಶಾಸಕರನ್ನು ಬಹಿಷ್ಕಾರ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಇವರ ಕೂದುಲು ಕೊಂಕಿಸುವಷ್ಟು ಕೆಲಸವಿಲ್ಲದೆ ಸಂಸದರು ಮತ್ತು ಅವರ ತಂದೆ ಇಲ್ಲ. ಶಾಸಕರು ಬಿಟ್ಟಿಯಾಗಿದ್ದರೆ ಆ ಕೆಲಸವನ್ನು ಮಾಡಲಿ ಎಂದು ತಿರುಗೇಟು ನೀಡಿದರು.

ತಾವು ಶಸಾಕರಾಗಲು ಕಾರಣವಾದ ತಮ್ಮದೇ ಸಮುದಾಯಕ್ಕೆ ಶಾಸಕರ ಕೊಡುಗೆ ಏನು, ಚಿಕ್ಕಬಳ್ಳಾಪುರ ಶಸಾಕರ ಕೊಡುಗೆ ಏನು ಎಂಬ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ತಾಕತ್ತಿದ್ದರೆ ಬನ್ನಿ. ಇನ್ನು ತಮ್ಮದೇ ಸಮುದಾಯದ ಸಂಘದ ಜಾಗಕ್ಕೆ ಖಾತೆ ಮಾಡಿಸಲೂ ಶಾಸಕರಿಗೆ ತಾಕತ್ತಿಲ್ಲ. ತಮ್ಮ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ನಿರ್ಮಾಣ ಮಡಾಉವ ತಾಕತ್ತು ಶಸಾಕರಿಗೆ ಇಲ್ಲ. ಇಂತಹ ಶಾಸಕರು ಸಂಸದರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ನಾಗರಾಜ್ ಪ್ರಶ್ನಿಸಿದರು.

ಶಾಸಕರೇ, ನಿಮ್ಮ ಅವಧಿಯ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಿ, ನಮ್ಮ ಸಂಸದರ ಅವಧಿಯ ಅಭಿವೃದ್ದಿಯ ಬಗ್ಗೆಯೂ ನಾವು ತೋರಿಸುತ್ತೇವೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ನಿಮಗೆ ಧಮ್ಮು, ತಾಕತ್ತು, ಖಲೇಜಾ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಮಾಜಿ ಶಸಾಕ ಶಿವಾನಂದ್ ಮಾತನಾಡಿ, ಶಸಾಕರು ಪದೇ ಪದೇ ಅನಾಥ ಹುಡುಗ ಎಂದು ಹೇಳುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಎಷ್ಟು ಮಂದಿ ತಂದೆ ತಾಯಿ ಇಲ್ಲದೆ ಅನಾಥರಾದವರಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕು. ಇನ್ನು ಅನಾಥ ಹುಡುಗ ಒಂದೂ ಮುಕ್ಕಾಲು ಕೋಟಿ ಮೌಲ್ಯದ ಬೆಂಝ್ ಕಾರಿನಲ್ಲಿ ಬರೋದನ್ನ ನಾನು ಎಲ್ಲಿಯೂ ನೋಡಿಲ್ಲ. ಅವರ ಹಗುರ ಮಾತುಗಳಿಂದ ಅವರ ಮೌಲ್ಯ ಅವರೇ ಕಳೆದುಕೊಳ್ಳುತ್ತಿದ್ದಾರೆ, ಹಿರಿಯರಿಗೆ ಗೌರವ ಕೊಡಬೇತಕು ಎಂದು ಪ್ರಾಥಮಿಕ ಶಾಲೆಯಲ್ಲಿಯೇ ಮಕ್ಕಳಿಗೆ ತಿಳಿಸಲಾಗುತ್ತದೆ. ಬಹುಶ ಶಾಸಕರು ಶಾಲೆಗೆ ಹೋದಂತಿಲ್ಲ ಎಂದು ಲೇವಡಿ ಮಾಡಿದರು.

ಶಾಸಕರ ವರ್ತನೆ ಖಂಡಿಸಿ ಶೀಘ್ರದಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ, ಅಲ್ಲದೆ ಶಾಸಕರ ಹಗುರ ಮಾತುಗಳ ವಿರುದ್ಧ ನ್ಯಾಯಾಲಯದಲ್ಲಿ ಮಾನ ನಷ್ಟ ಮೊಕದ್ದೆಮೆ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಅರುಣ್, ಸುಮಿತ್ರಾ, ಮಂಜುನಾಥ್, ಜೇಜೇಂದ್ರ, ಸಾಗರ್, ಶ್ರೀರಾಮುಲು, ಲಕ್ಷ್ಮೀಪತಿ ಸೇರಿದಂತೆ ಇತರರು ಇದ್ದರು.

 

About The Author

Leave a Reply

Your email address will not be published. Required fields are marked *